ವಿಪ್ರೊ ಸಿಇಒ ಅಬಿದಾಲಿ ವೇತನ ₹18 ಕೋಟಿ

7

ವಿಪ್ರೊ ಸಿಇಒ ಅಬಿದಾಲಿ ವೇತನ ₹18 ಕೋಟಿ

Published:
Updated:
ಅಬಿದಾಲಿ

ನವದೆಹಲಿ (ಪಿಟಿಐ): ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆ
ಯಾಗಿರುವ ವಿಪ್ರೊ ಟೆಕ್ನಾಲಜೀಸ್‌ನ ಸಿಇಒ ಅಬಿದಾಲಿ ಜೆಡ್‌. ನೀಮೂಚವಾಲಾ ಅವರ ವೇತನವು ಶೇ 34ರಷ್ಟು ಹೆಚ್ಚಳಗೊಂಡಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2017–18ರಲ್ಲಿ ವೇತನ ಮತ್ತು ಭತ್ಯೆಗಳ ಒಟ್ಟಾರೆ ಕೊಡುಗೆಯು ₹ 18.23 ಕೋಟಿಗಳಷ್ಟಾಗಿದೆ ಎಂದು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಅಮೆರಿಕದ ಡಾಲರ್‌ನಲ್ಲಿ ಪಾವತಿಸಲಾಗುವ ನೀಮೂಚವಾಲಾ ಅವರ ವೇತನದಲ್ಲಿ ₹ 6.29 ಕೋಟಿ ಒಟ್ಟು ವೇತನ, ₹ 1.70 ಕೋಟಿ ಉತ್ತೇಜನಾ ವೇತನ, ಇತರ ಭತ್ಯೆಗಳ ರೂಪದಲ್ಲಿ ₹ 10.2 ಕೋಟಿ ಇದೆ.

ಸಂಸ್ಥೆಯ ಸಿಎಸ್‌ಒ ರಿಷದ್‌ ಎ. ಪ್ರೇಮ್‌ಜೀ ಅವರ ಒಟ್ಟಾರೆ ವೇತನವು  ₹ 5.8 ಕೋಟಿಗಳಷ್ಟಿದೆ. ಇದರಲ್ಲಿ ₹ 93.33 ಲಕ್ಷ ವೇತನ, ₹ 53.52 ಲಕ್ಷ ಭತ್ಯೆ, ₹ 4.13 ಕೋಟಿ ಉತ್ತೇಜನಾ ವೇತನ ಸೇರ್ಪಡೆಗೊಂಡಿದೆ.

ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಅಜೀಂ ಎಚ್‌. ಪ್ರೇಮ್‌ಜೀ ಅವರ ವೇತನ ಹೆಚ್ಚಳವು ಶೇ 10.13ರಷ್ಟಾಗಿ ₹ 87 ಲಕ್ಷಕ್ಕೆ ತಲುಪಿದೆ. ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಜತಿನ್‌ ದಲಾಲ್ ಅವರ ವೇತನವು ಶೇ 2.42ರಷ್ಟು ಏರಿಕೆಯಾಗಿ ₹4.65 ಕೋಟಿಗಳಷ್ಟಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 3

  Frustrated
 • 0

  Angry

Comments:

0 comments

Write the first review for this !