ಶನಿವಾರ, ಮಾರ್ಚ್ 25, 2023
23 °C

ವಿಪ್ರೊ ಲಾಭ ಶೇ 2.8ರಷ್ಟು ಹೆಚ್ಚಳ

ಪಿಟಿಐ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಐ.ಟಿ. ಸೇವೆಗಳನ್ನು ನೀಡುವ ವಿಪ್ರೊ ಕಂಪನಿಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಿರೀಕ್ಷೆಯನ್ನೂ ಮೀರಿ ಲಾಭ ಗಳಿಸಿದೆ. ಡಿಸೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ಕಂಪನಿಯು ₹ 2,900 ಕೋಟಿ ಲಾಭ ಗಳಿಸಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜು ಮಾಡಿದ್ದರು. ಆದರೆ, ಕಂಪನಿಯು ಅಂದಾಜನ್ನು ಮೀರಿದ್ದು, ₹ 3,053 ಕೋಟಿ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 2,969 ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 2.8ರಷ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ವರಮಾನ ಹಿಂದಿನ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 14.3ರಷ್ಟು ಹೆಚ್ಚಾಗಿ ₹ 23,229 ಕೋಟಿಗೆ ತಲುಪಿದೆ. ತ್ರೈಮಾಸಿಕದಲ್ಲಿ, ₹ 8,150 ಕೋಟಿಗೂ ಹೆಚ್ಚಿನ ದೊಡ್ಡ ಪ್ರಮಾಣದ ಒಪ್ಪಂದಗಳಿಗೆ ಸಹಿ ಹಾಕಿರುವುದನ್ನೂ ಒಳಗೊಂಡು ಒಟ್ಟು ₹ 35,045 ಕೋಟಿ ಮೊತ್ತದ ಒಪ್ಪಂದ ನಡೆದಿದೆ ಎಂದು ಕಂಪನಿಯ ಸಿಇಒ ಥಿಯರಿ ಡೆಲಾಪೋರ್ಟ್ ತಿಳಿಸಿದ್ದಾರೆ.

ಗ್ರಾಹಕರೊಂದಿಗಿನ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತಿದೆ. ಹೀಗಾಗಿ ಕಂಪನಿಯ ಮಾರುಕಟ್ಟೆ ಪಾಲು ಗಳಿಕೆಯು ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಕಂಪನಿಯು ಪ್ರತಿ ಷೇರಿಗೆ ₹ 1ರಷ್ಟು ಮಧ್ಯಂತರ ಲಾಭಾಂಶ ಘೋಷಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು