ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ ಲಾಭ ₹ 2,972 ಕೋಟಿ: ಲಾಭದ ಪ್ರಮಾಣದಲ್ಲಿ ಶೇಕಡ 27.7ರಷ್ಟು ಹೆಚ್ಚಳ

Last Updated 15 ಏಪ್ರಿಲ್ 2021, 11:48 IST
ಅಕ್ಷರ ಗಾತ್ರ

ನವದೆಹಲಿ: ಐ.ಟಿ. ಸೇವಾ ಕಂಪನಿ ವಿಪ್ರೊ ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 2,972 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇಕಡ 27.7ರಷ್ಟು ಹೆಚ್ಚಳ ಆಗಿದೆ.

ಈ ತ್ರೈಮಾಸಿಕದಲ್ಲಿ ಕಂಪನಿಯ ಆದಾಯದಲ್ಲಿ ಶೇ 3.4ರಷ್ಟು ಹೆಚ್ಚಳ ಆಗಿದೆ. 2020–21ನೆಯ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭ ₹ 10,796 ಕೋಟಿ. 2019–20ನೆಯ ಸಾಲಿನಲ್ಲಿ ಕಂಪನಿಯು ಒಟ್ಟು ₹ 9,722 ಕೋಟಿ ಲಾಭ ಗಳಿಸಿತ್ತು. ಇದರಿಂದಾಗಿ ಹಣಕಾಸು ವರ್ಷದಲ್ಲಿ ಕಂಪನಿ ದಾಖಲಿಸಿದ ಲಾಭದಲ್ಲಿ ಶೇ 11ರಷ್ಟು ಏರಿಕೆ ಆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT