ಭಾನುವಾರ, ನವೆಂಬರ್ 29, 2020
21 °C

ವಿಪ್ರೊ: ₹ 2,345 ಕೋಟಿ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆಯಾಗಿರುವ ವಿಪ್ರೊ, 2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 2,345 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 2,494 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭದ ಪ್ರಮಾಣವು ಶೇ 6ರಷ್ಟು ಕಡಿಮೆಯಾಗಿದೆ.

ಈ ಅವಧಿಯಲ್ಲಿನ ವರಮಾನವು ₹ 15,711 ಕೋಟಿಗಷ್ಟಾಗಿದೆ. 2019ರ 4ನೇ ತ್ರೈಮಾಸಿಕದಲ್ಲಿನ ₹ 15,006 ಕೋಟಿ ವರಮಾನಕ್ಕೆ ಹೋಲಿಸಿದರೆ ಶೇ 4.6ರಷ್ಟು ಏರಿಕೆ ದಾಖಲಾಗಿದೆ. ಐ.ಟಿ ಸೇವೆಗಳ ವರಮಾನದ ಮೇಲೆ ‘ಕೋವಿಡ್‌–19’ ಪಿಡುಗಿನ ವ್ಯತಿರಿಕ್ತ ಪ್ರಭಾವ  ₹ 105 ಕೋಟಿಗಳಿಂದ ₹ 120 ಕೋಟಿಗಳಷ್ಟು (ಶೇ 0.7 ರಿಂದ ಶೇ 0.8) ಇದೆ ಎಂದು ಕಂಪನಿ ಅಂದಾಜಿಸಿದೆ.

ಆರ್ಥಿಕತೆಯಲ್ಲಿನ ಅನಿಶ್ಚಿತತೆ ಕಾರಣಕ್ಕೆ  ಜೂನ್‌ ತ್ರೈಮಾಸಿಕದಲ್ಲಿನ ವರಮಾನ ಹೆಚ್ಚಳದ ಮುನ್ನೋಟ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ತಿಳಿಸಿದೆ.

ಅಂತಿಮ ಲಾಭಾಂಶ: ಅಂತಿಮ ಲಾಭಾಂಶ ಘೋಷಣೆ ಸಂಬಂಧ ನಿರ್ದೇಶಕ ಮಂಡಳಿಯು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜನವರಿಯಲ್ಲಿ ಪ್ರಕಟಿಸಿದ್ದ ಪ್ರತಿ ಷೇರಿನ ₹ 1ರಷ್ಟು ಮಧ್ಯಂತರ ಲಾಭಾಂಶವನ್ನೇ  2019–20ನೇ ಸಾಲಿನ ಅಂತಿಮ ಲಾಭಾಂಶವೆಂದು ಪರಿಗಣಿಸಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು