ನವದೆಹಲಿ: ಐ.ಟಿ. ಸೇವಾ ವಲಯದ ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ವಿಪ್ರೊ, ತನ್ನ ಷೇರುದಾರರಿಂದ ₹15 ಸಾವಿರ ಕೋಟಿ ಮೊತ್ತದ ಷೇರುಗಳನ್ನು ಮರುಖರೀದಿ ಮಾಡಲು ಮುಂದಾಗಿದೆ.

ಪ್ರತಿ ಷೇರಿಗೆ ₹250 ದರ ನೀಡಿ ಅದು ಷೇರುಗಳನ್ನು ಮರುಖರೀದಿ ಮಾಡಲಿದೆ. ಇದು ಸೋಮವಾರದ ಷೇರುಬೆಲೆಗೆ (₹210.20) ಹೋಲಿಸಿದರೆ ಶೇ 18ರಷ್ಟು ಹೆಚ್ಚು ಮೊತ್ತ.

ಈ ಸಂಗತಿಯನ್ನು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಅಪರ್ಣಾ ಅಯ್ಯರ್ ಅವರು ಗುರುವಾರ ತಿಳಿಸಿ ದ್ದಾರೆ. ‘ಇದು ಕಂಪನಿಯು ಈವರೆಗೆ ಕೈಗೊಂಡಿರುವ ಅತಿದೊಡ್ಡ ಮೊತ್ತದ ಷೇರು ಮರುಖರೀದಿ ಕ್ರಮ’ ಎಂದಿದ್ದಾರೆ.

ಷೇರು ಮರುಖರೀದಿ ಪ್ರಕ್ರಿಯೆಯ ಅನುಷ್ಠಾನಕ್ಕೆ ವಿಪ್ರೊ ಕಂಪನಿಯು ಸಮಿತಿಯೊಂದನ್ನು ರಚಿಸಿದೆ.

ಕಂಪನಿಯು 2023ರಲ್ಲಿ ₹12 ಸಾವಿರ ಕೋಟಿ ಮೊತ್ತದ ತನ್ನ ಷೇರುಗಳನ್ನು ಮರುಖರೀದಿಸಿತ್ತು.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇನ್ನೊಂದು ಪ್ರಮುಖ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್ ₹18 ಸಾವಿರ ಕೋಟಿ ಮೊತ್ತದ ಷೇರು ಮರುಖರೀದಿ ಪ್ರಕ್ರಿಯೆಯನ್ನುಕಳೆದ ವರ್ಷದ ನವೆಂಬರ್ನಲ್ಲಿ ಪೂರ್ಣಗೊಳಿಸಿದೆ.

ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಟಿಸಿಎಸ್ ₹17 ಸಾವಿರ ಕೋಟಿ ಮೊತ್ತದ ಷೇರು ಮರುಖರೀದಿ ಪ್ರಕ್ರಿಯೆ ಯನ್ನು 2023ರ ಡಿಸೆಂಬರ್ನಲ್ಲಿ ನಡೆಸಿದೆ.

ಕಂಪನಿಗಳು ತಮ್ಮ ಬಳಿ ಇರುವ ಹೆಚ್ಚುವರಿ ಹಣವನ್ನು ಷೇರುದಾರರಿಗೆ ಮರಳಿಸುವ ಉದ್ದೇಶದಿಂದ, ಪ್ರತಿ ಷೇರಿನ ಗಳಿಕೆಯ ಮೊತ್ತವನ್ನು ಹೆಚ್ಚಿಸಲು ಹಾಗೂ ತನ್ನ ಹಣಕಾಸಿನ ಸ್ಥಿತಿಯ ಬಗ್ಗೆ ವಿಶ್ವಾಸವನ್ನು ಸೂಚಿಸುವ ಉದ್ದೇಶದಿಂದ ಷೇರು ಮರುಖರೀದಿ ಪ್ರಕ್ರಿಯೆಗೆ ಮುಂದಾಗುತ್ತವೆ.

ಲಾಭ ಶೇ 1.8ರಷ್ಟು ಇಳಿಕೆ

ನವದೆಹಲಿ: ವಿಪ್ರೊ ಕಂಪನಿಯು ಮಾರ್ಚ್ 31ಕ್ಕೆ ಕೊನೆಗೊಂಡ
ತ್ರೈಮಾಸಿಕದಲ್ಲಿ ₹3,501 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿ ಗಳಿಸಿದ್ದ ₹3,569 ಕೋಟಿ ಲಾಭಕ್ಕೆ ಹೋಲಿಸಿದರೆ
ಶೇ 1.89ರಷ್ಟು ಕಡಿಮೆ.

ಅರ್ಥ ವ್ಯವಸ್ಥೆಯಲ್ಲಿ ಹಲವು ಬಗೆಯ ಸವಾಲುಗಳು ಇರುವ ಸಂದರ್ಭದಲ್ಲಿ ಕಂಪನಿಯ ಲಾಭದ ಪ್ರಮಾಣ ಇಳಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟುಗಳು ಹಾಗೂ ನೀತಿಗಳಲ್ಲಿನ ಬದಲಾವಣೆಯು ‘ಹೊಸ ಕಾಲದ ಸಹಜ ಸ್ಥಿತಿ’ ಎಂದು ಕಂಪನಿಯ ಸಿಇಒ ಹಾಗೂ ಎಂ.ಡಿ ಶ್ರೀನಿ ಪಲ್ಲಿಯಾ ಅವರು ಬಣ್ಣಿಸಿದ್ದಾರೆ. ಆದರೆ ಒಟ್ಟಾರೆಯಾಗಿ ಐ.ಟಿ ಸೇವೆಗಳ ಮೇಲಿನ ವೆಚ್ಚಗಳು ಕಡಿಮೆ ಆಗಿಲ್ಲ ಎಂದು ತಿಳಿಸಿದ್ದಾರೆ.

ಕಂಪನಿಯ ವರಮಾನವು ಶೇ 7.6ರಷ್ಟು ಹೆಚ್ಚಳ ಕಂಡಿದ್ದು ₹24,236 ಕೋಟಿಗೆ ತಲುಪಿದೆ. ಇದು ಹಿಂದಿನ ವರ್ಷದ ಮಾರ್ಚ್
ತ್ರೈಮಾಸಿಕದಲ್ಲಿ ₹22,504 ಕೋಟಿ ಆಗಿತ್ತು. 2025–26ರ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಲಾಭವು ಶೇ 12.2ರಷ್ಟು ಹಾಗೂ ವರಮಾನವು ಶೇ 2.8ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.