ಎಸ್‌ಬಿಐ: ಎಟಿಎಂ ನಗದು ಪಡೆಯುವ ಮಿತಿ ₹20 ಸಾವಿರಕ್ಕೆ ಕಡಿತ

7

ಎಸ್‌ಬಿಐ: ಎಟಿಎಂ ನಗದು ಪಡೆಯುವ ಮಿತಿ ₹20 ಸಾವಿರಕ್ಕೆ ಕಡಿತ

Published:
Updated:

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಎಟಿಎಂನಿಂದ ನಗದು ಪಡೆಯುವ ಮಿತಿಯನ್ನು ಅರ್ಧದಷ್ಟು ಕಡಿಮೆ ಮಾಡಿದ್ದು, ಹೊಸ ನಿಯಮವು ಅಕ್ಟೋಬರ್‌ 31ರಿಂದ ಜಾರಿಗೆ ಬರಲಿದೆ.

ಒಂದು ದಿನಕ್ಕೆ ₹ 40 ಸಾವಿರದಷ್ಟಿದ್ದ ಗರಿಷ್ಠ ಮಿತಿಯನ್ನು ₹ 20 ಸಾವಿರಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಎಟಿಎಂ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಯುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ. ಹೀಗಾಗಿ ಈ ಮಿತಿ ಜಾರಿಗೊಳಿಸಿರುವುದಾಗಿ ಬ್ಯಾಂಕ್‌ ಹೇಳಿದೆ.

ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ಮತ್ತು ಡೆಬಿಟ್‌ ಕಾರ್ಡ್‌ಗಳ ವಂಚನೆ ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ಲಾಸಿಕ್‌ ಮತ್ತು ಮಾಸ್ಟರ್‌ ಕಾರ್ಡ್‌ಗಳ ಮೇಲೆ ಈ ಮಿತಿ ವಿಧಿಸಲಾಗಿದೆ ಎಂದು ಬ್ಯಾಂಕ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಎಟಿಎಂನಿಂದ ಕಡಿಮೆ ನಗದು ತೆಗೆದಷ್ಟೂ ವಂಚನೆ ತಗ್ಗುತ್ತದೆ. ಬಹಳಷ್ಟು ಗ್ರಾಹಕರಿಗೆ ದಿನವೊಂದಕ್ಕೆ ಎಟಿಎಂಗಳಿಂದ ಗರಿಷ್ಠ ₹ 20 ಸಾವಿರ ಪಡೆಯುವುದು ಅವರ ನಗದು ಅಗತ್ಯಗಳನ್ನು ಪೂರೈಸುತ್ತದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಗುಪ್ತಾ ಅವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !