ಮಂಗಳವಾರ, ಫೆಬ್ರವರಿ 18, 2020
16 °C
ಕೊಲ್ಲಿ ದೇಶಗಳ ವಿತ್ತೀಯ ಸುಸ್ಥಿರತೆ ವರದಿಯಲ್ಲಿ ಐಎಂಎಫ್‌ ಎಚ್ಚರಿಕೆ

ಕೊಲ್ಲಿ ದೇಶಗಳ ಸಂಪತ್ತು ಶೀಘ್ರ ಖಾಲಿ?

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಕೊಲ್ಲಿ ದೇಶಗಳು ಆರ್ಥಿಕ ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರದಿದ್ದರೆ 2034ರ ವೇಳೆಗೆ ಸರ್ಕಾರದ ಸಂಪತ್ತು ಖಾಲಿಯಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಎಚ್ಚರಿಸಿದೆ.

ಕೊಲ್ಲಿ ರಾಷ್ಟ್ರಗಳು ತಮ್ಮ ವರಮಾನಕ್ಕೆ ‘ಕಪ್ಪು ಚಿನ್ನ’ ಎಂದೇ ಪರಿಗಣಿಸಲಾಗಿರುವ ಕಚ್ಚಾ ತೈಲವನ್ನೇ ಹೆಚ್ಚಾಗಿ ಅವಲಂಬಿಸಿವೆ. ಇದು ದಶಕಗಳಿಂದ ಅವುಗಳ ಬೊಕ್ಕಸವನ್ನು ಅಗಾಧವಾಗಿ ಭರ್ತಿ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೇಡಿಕೆ ಕ್ರಮೇಣ ಕಡಿಮೆಯಾಗುತ್ತಿದೆ. ಕೊಲ್ಲಿ ಸಹಕಾರ ಮಂಡಳಿಯ (ಜಿಸಿಸಿ) 6 ಸದಸ್ಯ ದೇಶಗಳ ವರಮಾನದಲ್ಲಿ ಕಚ್ಚಾ ತೈಲದ ಪ್ರಮಾಣವು ಶೇ 70 ರಿಂದ ಶೇ 90ರಷ್ಟಿದೆ. ಈ ದೇಶಗಳು ಇದುವರೆಗೆ ವಿದೇಶಗಳಲ್ಲಿ ₹189 ಲಕ್ಷ ಕೋಟಿ ಮೊತ್ತವನ್ನು ಹಣಕಾಸು ನಿಧಿಗಳಲ್ಲಿ ಹೂಡಿಕೆ ಮಾಡಿವೆ ಎಂದು ಐಎಂಎಫ್‌ನ ‘ತೈಲದ ಭವಿಷ್ಯ ಮತ್ತು ವಿತ್ತೀಯ ಸುಸ್ಥಿರತೆ’ ವರದಿಯಲ್ಲಿ ತಿಳಿಸಲಾಗಿದೆ.

2014ರಿಂದೀಚೆಗೆ ತೈಲ ಬೆಲೆ ಇಳಿಕೆ ಹಾದಿಯಲ್ಲಿ ಇದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿವೆ.  ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ‘ಜಿಸಿಸಿ’ ದೇಶಗಳಿಗೆ ಹರಿದು ಬರುತ್ತಿರುವ ಸಂಪತ್ತು ಕಡಿಮೆಯಾಗುತ್ತಿದೆ. ಇದರಿಂದಾಗಿ ‘ಜಿಸಿಸಿ’ ಸದಸ್ಯ ದೇಶಗಳು ವಿತ್ತೀಯ ಸುಸ್ಥಿರತೆ ಸವಾಲು ಎದುರಿಸುತ್ತಿವೆ. 2034ರ ವೇಳೆಗೆ ಅವುಗಳ ನಿವ್ವಳ ಹಣಕಾಸು ಸಂಪತ್ತು ಗಮನಾರ್ಹವಾಗಿ ಕಡಿಮೆಯಾಗಲಿದೆ. ಸಾಲಕ್ಕೆ ಕೈಚಾಚುವುದು ಅನಿವಾರ್ಯವಾಗಲಿದೆ.

ಈ ದೇಶಗಳು ಈಗಾಗಲೇ ಸಬ್ಸಿಡಿ ಕಡಿತ, ವಿದ್ಯುತ್‌ ದರ ಹೆಚ್ಚಳ, ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಜಾರಿ ಸೇರಿದಂತೆ ಇತರ ತೆರಿಗೆ ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿವೆ. ಇವುಗಳನ್ನು ತ್ವರಿತಗೊಳಿಸಬೇಕಾಗಿದೆ ಎಂದು ಐಎಂಎಫ್‌ ಸಲಹೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು