ಶುಕ್ರವಾರ, ಡಿಸೆಂಬರ್ 4, 2020
22 °C

ವಿಶ್ವಬ್ಯಾಂಕ್‌ ಹೆಸರಲ್ಲಿ ನಕಲಿ ಡೆಬಿಟ್ ‌/ ಕ್ರೆಡಿಟ್‌ ಕಾರ್ಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವಬ್ಯಾಂಕ್‌ನ ಹೆಸರು ಮತ್ತು ಚಿಹ್ನೆ ಇರುವ ನಕಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಈ ಬಗ್ಗೆ ಜಾಗರೂಕರಾಗಿ ಇರಬೇಕು ಎಂದು ವಿಶ್ವಬ್ಯಾಂಕ್‌ ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಅಂತಹ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ನೀಡಲಾಗುತ್ತಿದೆ ಎನ್ನುವುದು ತನ್ನ ಗಮನಕ್ಕೆ ಬಂದ ಬಳಿಕ ವಿಶ್ವಬ್ಯಾಂಕ್‌ ಈ ಎಚ್ಚರಿಕೆ ನೀಡಿದೆ ಎಂದು ಸಾಲದಾತ ಸಂಸ್ಥೆಯೊಂದು ಹೇಳಿದೆ.

ವಿಶ್ವಬ್ಯಾಂಕ್ ಸಮೂಹವು ಯಾವುದೇ ರೀತಿಯ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ನೀಡುತ್ತಿಲ್ಲ ಎಂದು ಅದು ಹೇಳಿದೆ. ವಿಶ್ವಬ್ಯಾಂಕ್‌ನ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ತಿಳಿದುಕೊಳ್ಳಲು www.worldbank.orgಗೆ ಭೇಟಿ ನೀಡುವಂತೆ ಅದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.