ಗುರುವಾರ , ಆಗಸ್ಟ್ 22, 2019
27 °C

ಸಗಟು ಹಣದುಬ್ಬರ ಇಳಿಕೆ

Published:
Updated:

ನವದೆಹಲಿ (ಪಿಟಿಐ): ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿ ಹಣದುಬ್ಬರ ಜುಲೈನಲ್ಲಿ ಶೇ 1.08ಕ್ಕೆ ಇಳಿಕೆಯಾಗಿದೆ. ಇದು 25 ತಿಂಗಳ ಕನಿಷ್ಠ ಮಟ್ಟವಾಗಿದೆ.

ಆಹಾರ ಉತ್ಪನ್ನಗಳು, ಇಂಧನ ಮತ್ತು ತಯಾರಿಕಾ ವಲಯದ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ‘ಡಬ್ಲ್ಯುಪಿಐ’ ಕಡಿಮೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. 2017ರ ಜೂನ್‌ನಲ್ಲಿ ‘ಡಬ್ಲ್ಯುಪಿಐ‘ ಹಣದುಬ್ಬರ ಶೇ 0.9ರ ಕನಿಷ್ಠ ಮಟ್ಟದಲ್ಲಿತ್ತು.

ಈ ವರ್ಷದ ಜೂನ್‌ನಲ್ಲಿ ಶೇ 2.02ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಶೇ 0.94 ರಷ್ಟು ಇಳಿಕೆಯಾಗಿದೆ. 2018ರ ಜುಲೈನಲ್ಲಿದ್ದ ಶೇ 5.27ಕ್ಕೆ ಹೋಲಿಸಿದರೆಶೇ 4.19ರಷ್ಟು ಕಡಿಮೆಯಾಗಿದೆ.

ಇಂಧನ ಮತ್ತು ವಿದ್ಯುತ್ ವಲಯಗಳ ಸಗಟು ಹಣದುಬ್ಬರ ಕ್ರಮವಾಗಿ ಶೇ (–) 3.64 ಮತ್ತು ಶೇ (–) 2.2ಕ್ಕೆ ಇಳಿದಿದೆ. ಇದರಿಂದ ಒಟ್ಟಾರೆ ಸಗಟು ಹಣದುಬ್ಬರದ ಪ್ರಮಾಣ ಕಡಿಮೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Post Comments (+)