ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ 9 ತಿಂಗಳ ಗರಿಷ್ಠ

Last Updated 14 ಡಿಸೆಂಬರ್ 2020, 14:38 IST
ಅಕ್ಷರ ಗಾತ್ರ

ನವದೆಹಲಿ: ಆಹಾರ ಉತ್ಪನ್ನಗಳ ದರ ಇಳಿಕೆ ಆಗಿದ್ದರೂ, ತಯಾರಾದ ಉತ್ಪನ್ನಗಳು ದುಬಾರಿ ಆಗಿರುವುದರಿಂದ ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಪ್ರಮಾಣವು ನವೆಂಬರ್‌ನಲ್ಲಿ ಒಂಬತ್ತು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ನವೆಂಬರ್‌ನಲ್ಲಿ ಇದು ಶೇಕಡ 1.55ರಷ್ಟಾಗಿದ್ದು, ಫೆಬ್ರುವರಿ ಬಳಿಕ ದಾಖಲಾಗಿರುವ ಗರಿಷ್ಠ ಮಟ್ಟ ಇದಾಗಿದೆ. ಫೆಬ್ರುವರಿಯಲ್ಲಿ ಶೇ 2.26ರ ಗರಿಷ್ಠ ಮಟ್ಟದಲ್ಲಿತ್ತು. ಅಕ್ಟೋಬರ್‌ನಲ್ಲಿದ್ದ ಶೇ 1.48ರಷ್ಟಕ್ಕೆ ಹೋಲಿಸಿದರೆ ನವೆಂಬರ್‌ನಲ್ಲಿ ಶೇ 0.07ರಷ್ಟು ಹೆಚ್ಚಾಗಿದೆ.

ಆಹಾರ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 6.37ರಷ್ಟಿತ್ತು. ಇದು ನವೆಂಬರ್‌ನಲ್ಲಿ ಶೇ 3.94ಕ್ಕೆ ಇಳಿಕೆ ಆಗಿದೆ.

ತರಕಾರಿಗಳು ಮತ್ತು ಆಲೂಗಡ್ಡೆಯ ಹಣದುಬ್ಬರ ದರ ಕ್ರಮವಾಗಿ ಶೇ 12.24 ಮತ್ತು ಶೇ 115.12ರ ಗರಿಷ್ಠ ಮಟ್ಟದಲ್ಲಿಯೇ ಇದೆ. ಆಹಾರೇತರ ಉತ್ಪನ್ನಗಳ ಹಣದುಬ್ಬರ ಪ್ರಮಾಣವು ಶೇ 8.43ರಷ್ಟು, ಇಂಧನ ಮತ್ತು ವಿದ್ಯುತ್‌ ಹಣದುಬ್ಬ ಶೇ (–) 9.87ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT