ಸೋಮವಾರ, ಆಗಸ್ಟ್ 15, 2022
24 °C

ಸಗಟು ಹಣದುಬ್ಬರ 5 ತಿಂಗಳ ಗರಿಷ್ಠ ಮಟ್ಟಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಯಾರಿಕಾ ವಸ್ತುಗಳು ತುಟ್ಟಿಯಾಗಿರುವ ಕಾರಣ ಸಗಟು ದರ ಹಣದುಬ್ಬರ ಪ್ರಮಾಣವು ಆಗಸ್ಟ್‌ನಲ್ಲಿ ಐದು ತಿಂಗಳ ಗರಿಷ್ಠ ಮಟ್ಟವಾದ ಶೇಕಡ 0.16ಕ್ಕೆ ಏರಿಕೆಯಾಗಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 0.42ರಷ್ಟಿತ್ತು. ಆ ಬಳಿಕ ಏಪ್ರಿಲ್‌ನಿಂದ ಜುಲೈವರೆಗಿನ ನಾಲ್ಕು ತಿಂಗಳುಗಳಲ್ಲಿ ನಕಾರಾತ್ಮಕ ಮಟ್ಟದಲ್ಲಿಯೇ ಇತ್ತು.

2019ರ ಆಗಸ್ಟ್‌ನಲ್ಲಿ ಶೇ 1.17ರಷ್ಟಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಆಹಾರ ಉತ್ಪನ್ನಗಳ ಹಣದುಬ್ಬರ ಶೇ 3.84ರಷ್ಟು, ತರಕಾರಿ ಮತ್ತು ಬೇಳೆಕಾಳುಗಳ ಹಣದುಬ್ಬರ ಕ್ರಮವಾಗಿ ಶೇ 7.03ರಷ್ಟು ಮತ್ತು ಶೇ 9.86ರಷ್ಟು ಇದೆ. ಮೊಟ್ಟೆ, ಮಾಂಸ ಮತ್ತು ಮೀನಿನ ಹಣದುಬ್ಬರ ಶೇ 6.23ರಷ್ಟಿದೆ.

ಆಲೂಗಡ್ಡೆ ದರ ಶೇ 82.93ರಷ್ಟು ಹೆಚ್ಚಾಗಿದೆ. ಈರುಳ್ಳಿ ದರ ಶೇ (–) 34.48ರಷ್ಟಾಗಿದೆ.

ಇಂಧನ ಮತ್ತು ವಿದ್ಯುತ್‌ ಹಣದುಬ್ಬರ ಜುಲೈನಲ್ಲಿ ಶೇ 9.84ರಷ್ಟು ಇದ್ದಿದ್ದು ಆಗಸ್ಟ್‌ನಲ್ಲಿ ಶೇ 9.68ಕ್ಕೆ ಇಳಿದಿದೆ. ತಯಾರಿಕಾ ಉತ್ಪನ್ನಗಳ ಹಣದುಬ್ಬರ ಜುಲೈನಲ್ಲಿ ಶೇ 0.51ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ 1.27ಕ್ಕೆ ಏರಿಕೆಯಾಗಿದೆ.

ಅಂಕಿ–ಅಂಶ

ಸಗಟು ಹಣದುಬ್ಬರ

ಏಪ್ರಿಲ್‌;–1.57%

ಮೇ;–3.37%

ಜೂನ್‌;–1.81%

ಜುಲೈ;–0.58%

ಆಗಸ್ಟ್‌;0.16%

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು