ಮಲ್ಲಿಕಾರ್ಜುನ ನಾಲವಾರ

ಯಾದಗಿರಿ: ಸ್ಥಿರಾಸ್ತಿಗಳ ನೋಂದಣಿಯ ಮುದ್ರಾಂಕ ಶುಲ್ಕ ಏರಿಕೆಯ ನಡುವೆಯೂ 2025–26ರ ಆರ್ಥಿಕ ವರ್ಷದಲ್ಲಿ ಜಿಲ್ಲಾ ಉಪನೋಂದಣಿ ಕಚೇರಿಯ ಆದಾಯ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಏರಿಕೆಯಾಗಿದ್ದರೂ ನಿಗದಿಪಡಿಸಿದ ಗುರಿ ಮುಟ್ಟಿಲು ಆಗಿಲ್ಲ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ರಾಜ್ಯ ಸರ್ಕಾರವು ಸ್ಥಿರಾಸ್ತಿಗಳ ಮೇಲಿನ ವ್ಯವಹಾರಗಳ ದಸ್ತಾವೇಜುಗಳ ನೋಂದಣಿ ಶುಲ್ಕವನ್ನು ಶೇ 1ರಿಂದ ಶೇ 2ಕ್ಕೆ ಏರಿಕೆ ಮಾಡಿತ್ತು. ಆದರೂ ಸ್ಥಿರಾಸ್ತಿ ನೋಂದಣಿಯ ಆದಾಯದಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಆಗಿಲ್ಲ ಎನ್ನುತ್ತವೆ ಉಪನೋಂದಣಿ ಕಚೇರಿಯ ಅಂಕಿಅಂಶಗಳು.

2024–25ನೇ ಆರ್ಥಿಕ ವರ್ಷಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಜಿಲ್ಲಾ ಉಪನೋಂದಣಿ ಕಚೇರಿಗೆ ₹ 76 ಕೋಟಿ ರಾಜಸ್ವ ಗುರಿಯನ್ನು ನೀಡಿತ್ತು. ಅದರಲ್ಲಿ ₹68 ಕೋಟಿ ಸಂಗ್ರಹ ಮಾಡಿ, ಶೇ89.5ರಷ್ಟು ಸಾಧನೆ ಮಾಡಿತ್ತು.

ಈ ವರ್ಷದ 2025–26ನೇ ಸಾಲಿಗೆ ₹87 ಕೋಟಿ ರಾಜಸ್ವ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಅದರಲ್ಲಿ 2026ರ ಮಾರ್ಚ್ 23ರ ವರೆಗೆ ₹76.3 ಕೋಟಿ ಸಂಗ್ರಹಿಸಿ ಶೇ87.7ರಷ್ಟು ಸಾಧನೆ ಮಾಡಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಒಂದು ವಾರ ಬಾಕಿ ಇರುವಂತೆ ಕಳೆದ ವರ್ಷಕ್ಕಿಂತ ₹8.3 ಕೋಟಿ ಹೆಚ್ಚುವರಿ ಆದಾಯ ಬಂದಿದ್ದರೂ ನಿಗದಿತ ಗುರಿ ಮುಟ್ಟಲು ಆಗಿಲ್ಲ.

ಜಿಲ್ಲಾ ಉಪನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಯಾದಗಿರಿ ತಾಲ್ಲೂಕು, ಶಹಾಪುರ, ಸುರಪುರ ಮತ್ತ ಹುಣಸಗಿ ತಾಲ್ಲೂಕುಗಳ ಉಪನೋಂದಣಿ ಕಚೇರಿಗಳ ಮೂಲಕ ರಾಜಸ್ವ ಹರಿದುಬರುತ್ತದೆ. ಜಿಲ್ಲಾ ಕೇಂದ್ರವಾದ ಯಾದಗಿರಿ ತಾಲ್ಲೂಕಿನಲ್ಲಿ ಅತ್ಯಧಿಕ ₹32.68 ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಸಂಗ್ರಹದಲ್ಲಿ ಶೇ 42.83ರಷ್ಟು ಆದಾಯ ಯಾದಗಿರಿ ತಾಲ್ಲೂಕು ಉಪನೋಂದಣಿ ಕಚೇರಿದ್ದು ಇದೆ.

ಉಳಿದಂತೆ ಶಹಾಪುರ ತಾಲ್ಲೂಕು ಉಪನೋಂದಣಿ ಕಚೇರಿಯಿಂದ ₹23.18 ಕೋಟಿ, ಸುರಪುರ ಮತ್ತು ಹುಣಸಗಿ ತಾಲ್ಲೂಕು ಉಪನೋಂದಣಿ ಕಚೇರಿಗಳಿಂದ ಕ್ರಮವಾಗಿ ₹12.87 ಕೋಟಿ ಹಾಗೂ ₹ 7.55 ಕೋಟೆ ಆದಾಯ ಹರಿದುಬಂದಿದೆ.

ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್ಮೆಂಟ್, ಫ್ಲ್ಯಾಟ್ ಮತ್ತು ಇತರೆ ಸ್ಥಿರಾಸ್ತಿಗಳ ನೋಂದಣಿಯ ಮಾರ್ಗಸೂಚಿ ದರದ ಅನ್ವಯ ನೋಂದಣಿ ಶುಲ್ಕ ವಿಧಿಸಲಾಗುತ್ತದೆ.

‘ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಫಾರ್ಮ್ ನಂಬರ್ 9, 11 ಖಾತೆಗಳ ವಿತರಣೆ ಸರಿಯಾಗಿ ಆಗಿಲ್ಲ. ನಗರ ಸಭೆಯ ಮಟ್ಟದಲ್ಲಿ ಫಾರ್ಮ್ ನಂಬರ್ 3 ವಿತರಣೆಯೂ ಕಡಿಮೆಯಾಗಿದೆ. ಕೆಲವು ವಾರಗಳ ಮಟ್ಟಿಗೆ ಸರ್ವರ್ ಸಮಸ್ಯೆಯಾಗಿತ್ತು. ಇದರಿಂದಾಗಿ ರಾಜಸ್ವ ಸಂಗ್ರಹದಲ್ಲಿ ಕಡಿಮೆ ಆಗಿರಬಹುದು’ ಎನ್ನುತ್ತಾರೆ ಕಚೇರಿಯ ಅಧಿಕಾರಿಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-30-1294588828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.