ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರಾ ಆನ್‌ಲೈನ್‌ ಐಪಿಒಗೆ ‘ಸೆಬಿ’ ಒಪ್ಪಿಗೆ

Last Updated 19 ನವೆಂಬರ್ 2022, 11:16 IST
ಅಕ್ಷರ ಗಾತ್ರ

ನವದೆಹಲಿ: ಯಾತ್ರಾ ಅನ್‌ಲೈನ್‌ ಲಿಮಿಟೆಡ್‌ನ ಷೇರುಗಳನ್ನು ಸಾರ್ವಜನಿಕ ಖರೀದಿಗೆ ಮುಕ್ತವಾಗಿಸಲು (ಐಪಿಒ) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಒಪ್ಪಿಗೆ ನೀಡಿದೆ ಎಂದು ಅದರ ಮಾತೃಸಂಸ್ಥೆ ಯಾತ್ರಾ ಆನ್‌ಲೈನ್‌ ಶನಿವಾರ ತಿಳಿಸಿದೆ.

ಸೆಬಿಗೆ ಸಲ್ಲಿಸಿರುವ ಕರಡು ದಾಖಲೆಪತ್ರದ (ಡಿಆರ್‌ಎಚ್‌ಪಿ) ಪ್ರಕಾರ, ಐಪಿಒ ಮೂಲಕ ಹೊಸದಾಗಿ ₹ 750 ಕೋಟಿ ಮೌಲ್ಯದ ಈಕ್ವಿಟಿ ಷೇರುಗಳು ಹಾಗೂ ಆಫರ್‌ ಫಾರ್ ಸೇಲ್‌ (ಒಎಫ್‌ಎಸ್‌) ಅಡಿ 93.28 ಲಕ್ಷ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಕಂಪನಿ ಉದ್ದೇಶಿಸಿದೆ.

ಸೆಬಿ ಒಪ್ಪಿಗೆ ಪಡೆದ 12 ತಿಂಗಳ ಒಳಗಾಗಿ ಐಪಿಒಗೆ ಬರಲು ಕಂಪನಿಗೆ ಅವಕಾಶ ಇರುತ್ತದೆ. ಐಪಿಒ ಮೂಲಕ ಸಂಗ್ರಹ ಆಗಲಿರುವ ಮೊತ್ತವನ್ನು ಯೋಜನಬದ್ಧ ಹೂಡಿಕೆ, ಸ್ವಾಧೀನ ವಹಿವಾಟು ಮತ್ತು ಕಂಪನಿಯ ಬೆಳವಣಿಗೆಗೆ ಸಂಬಂಧಿಸಿದ ಇನ್ನಿತರ ಕಾರ್ಪೊರೇಟ್‌ ಉದ್ದೇಶಗಳಿಗೆ ಬಳಸಿಕೊಳ್ಳಲು ಕಂಪನಿ ನಿರ್ಧರಿಸಿದೆ.

ಭಾರತದ ಕಾರ್ಪೊರೇಟ್‌ ವಲಯದಲ್ಲಿ ಸೇವೆ ಒದಗಿಸುತ್ತಿರುವ ಪ್ರಮುಖ ಕಂಪನಿ ಇದಾಗಿದೆ. ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೇಟ್ಸ್‌ ಲಿಮಿಟೆಡ್‌, ಡಿಎಎಂ ಕ್ಯಾಪಿಟಲ್‌ ಅಡ್ವೈಸರ್ಸ್‌ ಲಿಮಿಟೆಡ್‌ ಮತ್ತು ಐಐಎಫ್‌ಎಲ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ ಕಂಪನಿಗಳು ಐಪಿಒ ಪ್ರಕ್ರಿಯೆಯ ನಿರ್ವಹಣೆ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT