ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ 2019: 10 ಬ್ಯಾಂಕ್‌ಗಳ ಮಹಾವಿಲೀನ

Last Updated 29 ಡಿಸೆಂಬರ್ 2019, 22:34 IST
ಅಕ್ಷರ ಗಾತ್ರ

10 ಬ್ಯಾಂಕ್‌ಗಳ ಮಹಾವಿಲೀನ
ಆಗಸ್ಟ್‌:
10 ಬ್ಯಾಂಕ್‌ಗಳ ಮಹಾವಿಲೀನ: ಕರ್ನಾಟಕದ ಎರಡು ಬ್ಯಾಂಕ್‌ಗಳೂ ಸೇರಿದಂತೆ ಸರ್ಕಾರಿ ಸ್ವಾಮ್ಯದ ಒಟ್ಟಾರೆ 6 ಬ್ಯಾಂಕ್‌ಗಳನ್ನು, ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ.ಕೆನರಾ ಬ್ಯಾಂಕ್‌ನಲ್ಲಿ ಸಿಂಡಿಕೇಟ್‌ ಬ್ಯಾಂಕ್ ಮತ್ತು ಯೂನಿಯನ್‌ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಕಾರ್ಪೊರೇಷನ್‌ ಬ್ಯಾಂಕ್‌ ವಿಲೀನ

ಮೈಸೂರಿನ ಇಂಕ್‌ ತಯಾರಿಕಾ ಘಟಕ: ನೋಟುಗಳನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸುವ ನಿಟ್ಟಿನಲ್ಲಿನ ಪ್ರಮುಖ ಹೆಜ್ಜೆಯಾಗಿ ಮೈಸೂರಿನಲ್ಲಿ ಸ್ಥಾಪಿಸಿರುವ ಇಂಕ್‌ ತಯಾರಿಕಾ ಘಟಕದಲ್ಲಿ ವಾಣಿಜ್ಯ ಉತ್ಪಾದನೆ ಆರಂಭ

ಎಟಿಎಂ ವಹಿವಾಟಿಗೆ ‘ಒಟಿಪಿ’ : ಎಟಿಎಂಗಳಿಂದ ನಗದು ಪಡೆಯುವುದನ್ನು ಹೆಚ್ಚು ಸುರಕ್ಷಿತಗೊಳಿಸಲು ಮೊಬೈಲ್‌ಗೆ ಒಂದು ಬಾರಿಗೆ ರಹಸ್ಯ ಸಂಖ್ಯೆ (ಒಟಿಪಿ) ಕಳಿಸುವ ಸೌಲಭ್ಯ ಜಾರಿಗೆ ತಂದ ಕೆನರಾ ಬ್ಯಾಂಕ್‌

ದುಬಾರಿ ಚಿನ್ನ: ಪ್ರಮುಖ ಚಿನಿವಾರ ಪೇಟೆಗಳಲ್ಲಿ ಪ್ರತಿ 10 ಗ್ರಾಂಗಳಿಗೆ ₹ 40 ಸಾವಿರದ ಸಮೀಪಕ್ಕೆ ತಲುಪಿದ ಚಿನ್ನದ ಧಾರಣೆ

ನಗದು ಚಲಾವಣೆ ಹೆಚ್ಚಳ: ಶೇ 17ರಷ್ಟು ಹೆಚ್ಚಳ ದಾಖಲಿಸಿದ ನಗದು ಚಲಾವಣೆ. ₹ 21.10 ಲಕ್ಷ ಕೋಟಿ ಮೊತ್ತದ ನೋಟುಗಳು ಚಲಾವಣೆಯಲ್ಲಿ

ಸೆಪ್ಟೆಂಬರ್‌: ಜಿಯೊ ಫೈಬರ್‌ ಸೇವೆಗೆ ಚಾಲನೆ: ಬ್ರಾಡ್‌ಬ್ಯಾಂಡ್‌ ಸೇವೆಯ ಚಿತ್ರಣವನ್ನೇ ಬದಲಿಸಿದ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊದ ಫೈಬರ್‌ ಟು ದ ಹೋಂ (ಎಫ್‌ಟಿಟಿಎಚ್‌) ಸೇವೆಗೆ ಚಾಲನೆ

ರಿಟೇಲ್‌, ಎಸ್‌ಎಂಇ ಸಾಲ ಅಗ್ಗ: ರಿಟೇಲ್‌ ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಬ್ಯಾಂಕ್‌ಗಳು ವಿತರಿಸುವ ಸಾಲಗಳ ಮೇಲಿನ ಬಡ್ಡಿ ದರ ರೆಪೊ ದರ ಆಧರಿಸಿರುವುದನ್ನು ಕಡ್ಡಾಯಗೊಳಿಸಿದ ಆರ್‌ಬಿಐ

ರಿಯಲ್‌ ಎಸ್ಟೇಟ್‌; ಉಡುಗಿದ ಉತ್ಸಾಹ: ಬೆಂಗಳೂರಿನ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಮಾರಾಟ ಮತ್ತು ಖರೀದಿ ಕುಸಿತದ ಆತಂಕ ಮೂಡಿಸಿದ ಮಂದಗತಿಯ ಆರ್ಥಿಕ ಪ್ರಗತಿ

ಅಲಿಬಾಬಾ ಗ್ರೂಪ್‌ನ ಜಾಕ್‌ ಮಾ ನಿವೃತ್ತಿ: ಇ–ಕಾಮರ್ಸ್‌ನ ಜಾಗತಿಕ ದೈತ್ಯ ಕಂಪನಿಯಾಗಿರುವ ಚೀನಾದ ಅಲಿಬಾಬಾ ಸಮೂಹದ ಸ್ಥಾಪಕ ಜಾಕ್‌ ಮಾ, ಸೇವಾ ನಿವೃತ್ತಿ

ಸರ್ಕಾರದ ನೆರವಿಗೆ ವಾಹನ ಉದ್ದಿಮೆ ಮೊರೆ: ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡವಾದ ‘ಬಿಎಸ್‌–6’ಕ್ಕೆ ಸರಾಗವಾಗಿ ಬದಲಾಗುವುದಕ್ಕೆ ಅಗತ್ಯ ನೆರವು ನೀಡಲು ಸರ್ಕಾರಕ್ಕೆ ವಾಹನ ತಯಾರಿಕಾ ಉದ್ದಿಮೆಯ ಮನವಿ

ದುರ್ಬಲ ಆರ್ಥಿಕ ಬೆಳವಣಿಗೆ;ಐಎಂಎಫ್‌: ಭಾರತದ ಆರ್ಥಿಕ ಬೆಳವಣಿಗೆಯು ನಿರೀಕ್ಷೆಗಿಂತ ಹೆಚ್ಚು ದುರ್ಬಲವಾಗಿದೆ ಎಂದು ವಿಶ್ಲೇಷಿಸಿದ ಅಂತರರಾಷ್ಟ್ರೀಯ ಹಣಕಾಸು ನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT