ಬುಧವಾರ, ಜುಲೈ 28, 2021
29 °C

ಜು. 14ರಿಂದ ಜೊಮ್ಯಾಟೊ ಐಪಿಒ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರೆಸ್ಟಾರೆಂಟ್‌, ಹೋಟೆಲ್‌ಗಳಿಂದ ಆಹಾರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜೊಮ್ಯಾಟೊ ಕಂಪನಿಯ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಪ್ರಕ್ರಿಯೆಯು (ಐಪಿಒ) ಜುಲೈ 14ರಿಂದ ಆರಂಭ ಆಗಲಿದೆ. ಕಂಪನಿಯು ಪ್ರತಿ ಷೇರಿನ ಬೆಲೆಯನ್ನು ₹ 72ರಿಂದ ₹ 76ರವರೆಗೆ ನಿಗದಿ ಮಾಡಿದೆ.

ಕಂಪನಿಯು ಐಪಿಒ ಮೂಲಕ ಒಟ್ಟು ₹ 9,375 ಕೋಟಿ ಸಂಗ್ರಹಿಸುವ ಉದ್ದೇಶ ಹೊಂದಿದೆ. ಐಪಿಒ ನಂತರದಲ್ಲಿ ಕಂಪನಿಯ ಮೌಲ್ಯವು ₹ 64,365 ಕೋಟಿ ಆಗಿರಲಿದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಅಕ್ಷಂತ್ ಗೋಯಲ್ ಹೇಳಿದ್ದಾರೆ. ಆನ್‌ಲೈನ್ ಮೂಲಕ ಆಹಾರ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ ಮಾರುಕಟ್ಟೆಯಲ್ಲಿ ಜೊಮ್ಯಾಟೊ ಮತ್ತು ಸ್ವಿಗ್ಗಿ ಪ್ರಮುಖ ಪಾಲು ಹೊಂದಿವೆ.

2019–20ರಲ್ಲಿ ಜೊಮ್ಯಾಟೊ ಕಂಪನಿಯ ಆದಾಯವು ₹ 2,960 ಕೋಟಿಗೆ ಏರಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು