ಮಂಗಳವಾರ, ಸೆಪ್ಟೆಂಬರ್ 24, 2019
29 °C

ಸ್ವಯಂಚಾಲನೆ ವ್ಯವಸ್ಥೆ ಅಳವಡಿಸಿಕೊಂಡ ಜೊಮಾಟೊ: 541 ಸಿಬ್ಬಂದಿಗೆ ನೌಕರಿ ನಷ್ಟ

Published:
Updated:

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ಉತ್ಪನ್ನಗಳನ್ನು ವಿತರಿಸುವ ಜೊಮಾಟೊ ಕಂಪನಿಯು ಸ್ವಯಂಚಾಲನಾ ವ್ಯವಸ್ಥೆ ಅಳವಡಿಸಿಕೊಂಡಿರುವುದರಿಂದ 541 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದೆ.

ಗ್ರಾಹಕ ಸೇವೆಗಳಿಗೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ ಇರುವ ರೋಬೊ ಮತ್ತು ಸ್ವಯಂಚಾಲನಾ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಹೀಗಾಗಿ ಸಿಬ್ಬಂದಿಯನ್ನು ಕೈಬಿಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಉದ್ಯೋಗ ಕಳೆದುಕೊಂಡಿರುವವರಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗುವುದು ಹಾಗೂ 2020ರ ಜನವರಿಯವರೆಗೂ ವಿಮಾ ಸೇವೆ ವಿಸ್ತರಿಸಲಾಗುವುದು ಎಂದೂ ಕಂಪನಿ ಹೇಳಿದೆ.

ಕೆಲಸ ಕಳೆದುಕೊಂಡಿರುವ ಸಿಬ್ಬಂದಿಯು ಗುರುಗ್ರಾಮದಲ್ಲಿ ಇರುವ ಕಂಪನಿಯ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. 

Post Comments (+)