ನವದೆಹಲಿ: ಆಹಾರ ವಿತರಣಾ ಸಂಸ್ಥೆಯಾದ ‘ಜೊಮಾಟೊ’ ತನ್ನ ಬಳಕೆದಾರರಿಗೆ ವಿಧಿಸುವ ‘ಪ್ಲಾಟ್ಫಾರ್ಮ್’ ಶುಲ್ಕವನ್ನು ಪ್ರತಿ ಆರ್ಡರ್ಗೆ ₹2.40ರಷ್ಟು ಹೆಚ್ಚಿಸಿದೆ. ಈ ಮೂಲಕ ಶುಲ್ಕ ₹14.90ಕ್ಕೆ ಏರಿದೆ.

ಈ ಮೊದಲು ಜೊಮಾಟೊ ಪ್ಲಾಟ್ಫಾರ್ಮ್ ಶುಲ್ಕವಾಗಿ ₹12.50ರಷ್ಟು ಪಡೆಯುತ್ತಿತ್ತು. ಶುಲ್ಕ ಹೆಚ್ಚಳದ ಕ್ರಮದಿಂದ ದೇಶದಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಆಹಾರವನ್ನು ಆರ್ಡರ್ ಮಾಡುವುದು ದುಬಾರಿಯಾಲಿದೆ.

ಸಂಸ್ಥೆಯು ಕೊನೆಯದಾಗಿ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಪ್ಲಾಟ್ಫಾರ್ಮ್ ಶುಲ್ಕವನ್ನು ಹೆಚ್ಚಿಸಿತ್ತು.

ಪ್ರತಿಸ್ಪರ್ಧಿ ‘ಸ್ವಿಗ್ಗಿ’ ತನ್ನ ಬಳಕೆದಾರರಿಗೆ ಪ್ಲಾಟ್ಫಾರ್ಮ್ ಶುಲ್ಕ ₹14.99 ವಿಧಿಸುತ್ತಿದೆ. ಮೂರನೇ ಅತಿದೊಡ್ಡ ಆಹಾರ ವಿತರಣಾ ಸಂಸ್ಥೆಯಾದ ‘ಮ್ಯಾಜಿಕ್ಪಿನ್’ನ ಪ್ಲಾಟ್ಫಾರ್ಮ್ ಶುಲ್ಕ ₹14.20 ಅನ್ನೇ ಉಳಿಸಿಕೊಂಡಿದ್ದು, ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಅದರ ಸಿಇಒ ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಆಗುತ್ತಿರುವ ಸಮಯದಲ್ಲಿಯೇ ಜೊಮಾಟೊ ಶುಲ್ಕವನ್ನು ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.