ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ಗೆ ₹ 900 ಕೋಟಿ ನೆರವು?

Last Updated 24 ಜೂನ್ 2019, 19:18 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ ನಿಯಮಿತದ (ಬಿಎಸ್‌ಎನ್‌ಎಲ್‌) ಕಾರ್ಯನಿರ್ವಹಣೆ ಮುಂದುವರೆಸಲು, ನೌಕರರಿಗೆ ವೇತನ ಪಾವತಿಸಲು ಮತ್ತು ಸಾಲ ಮರುಪಾವತಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ₹ 900 ಕೋಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸಂಸ್ಥೆಯ ಉಳಿವಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುವುದಕ್ಕೂ ಸರ್ಕಾರ ಅನುಮೋದನೆ ನೀಡುವ ನಿರೀಕ್ಷೆ ಇದೆ. ₹ 2,500 ಕೋಟಿ ಮೊತ್ತದ ಸಾಲ ಪಡೆಯಲು ಸಂಸ್ಥೆಯ ಆಡಳಿತ ಮಂಡಳಿಯು ಈಗಾಗಲೇ ವಿವಿಧ ಬ್ಯಾಂಕ್‌ಗಳ ಜತೆ ಮಾತುಕತೆ ನಡೆಸುತ್ತಿದೆ. ಸಾಲ ಮಂಜೂರಾದರೆ ಕನಿಷ್ಠ 6 ತಿಂಗಳವರೆಗೆ ಸಂಸ್ಥೆಯ ಎಲ್ಲ ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಬಹುದಾಗಿದೆ.

ಸಂಸ್ಥೆಯು ಸದ್ಯಕ್ಕೆ ₹ 13 ಸಾವಿರ ಕೋಟಿ ಮೊತ್ತದ ಸಾಲದ ಹೊರೆ ಎದುರಿಸುತ್ತಿದೆ. ಅಧಿಕ ಸಂಖ್ಯೆಯಲ್ಲಿ ಇರುವ ಸಿಬ್ಬಂದಿ ಹೊರೆ ಮತ್ತು 4ಜಿ ತರಂಗಾಂತರ ಲಭ್ಯವಾಗದೆ ಮಾರುಕಟ್ಟೆ ವಿಸ್ತರಿಸಲು ಸಾಧ್ಯವಾಗದ ಬಿಕ್ಕಟ್ಟು ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT