ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ವಂಚನೆ: ಹೊಣೆ ಯಾರು?

Last Updated 26 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌, ವಾಲೆಟ್‌, ಪ್ರಿಪೇಯ್ಡ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್‌, ಮೊಬೈಲ್ ಬ್ಯಾಂಕಿಂಗ್‌... ಹೀಗೆ ಬ್ಯಾಂಕಿಂಗ್ ಸ್ವರೂಪ ಬದಲಾಗುತ್ತಲೇ ಇದೆ. ಕೆಲವರ ವ್ಯವಹಾರವೆಲ್ಲಾ ಆನ್‌ಲೈನ್‌ನಲ್ಲಿ ನಡೆಯುತ್ತಿರುವುದರಿಂದ ಕನ್ನ ಹಾಕುವವರು ಗ್ರಾಹಕರಮಾಹಿತಿ ಕದಿಯಲು ಹೊಸ, ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಈ ಪ್ರಯತ್ನದಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ.

ಸೈಬರ್‌ ವಂಚನೆಗೆ ಒಳಗಾದ ಕೆಲವು ಗ್ರಾಹಕರು, ಪೊಲೀಸರಿಗೆ, ಬ್ಯಾಂಕ್‌ನವರಿಗೆ ದೂರು ನೀಡದೇ, ಕೊರಗುತ್ತಾ ಕೂರುತ್ತಿದ್ದಾರೆ. ತಮಗಾದ ನಷ್ಟದ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸದೇ ಇದ್ದರೆ, ಕಳ್ಳರು ಮತ್ತಷ್ಟು ಅಮಾಯಕ
ರನ್ನು ಮೋಸ ಮಾಡುತ್ತಾರೆ ಎಂಬುದು ನೆನಪಿರಲಿ.

ಡಿಜಿಟಲ್ ವಹಿವಾಟು ಉತ್ತೇಜನಕ್ಕಾಗಿ ರಿಸರ್ವ್‌ಬ್ಯಾಂಕ್ ಮತ್ತು ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆಗಾಗ್ಗೆ ಸಲಹೆ, ಸೂಚನೆಗಳನ್ನು ನೀಡುತ್ತಲೇ ಇದೆ. ಸೈಬರ್ ವಂಚನೆಗಳಿಗೆ ಒಳಗಾದವರಿಗೆ ನೆರವಾಗುವ ಕೆಲವು ವಿಷಯಗಳು ಇಲ್ಲಿವೆ.

ಬ್ಯಾಂಕ್‌ಗಳೇ ಹೊಣೆ: ಬ್ಯಾಂಕ್‌ನವರ ನಿರ್ಲಕ್ಷ್ಯ ಅಥವಾ ಭದ್ರತಾ ಲೋಪದಿಂದ, ಗ್ರಾಹಕರ ಖಾತೆಯಲ್ಲಿನ ಹಣ ಕಳುವಾದರೆ, ಗ್ರಾಹಕ ದೂರು ನೀಡಿದರೂ ನೀಡದಿದ್ದರೂ ಬ್ಯಾಂಕ್‌ನವರೇ ಹೊಣೆ ಹೊರಬೇಕು. ಈ ರೀತಿ ಹಣ ಕಳೆದುಕೊಂಡ ಗ್ರಾಹಕರು, ಬ್ಯಾಂಕ್‌ನಿಂದ ಮರಳಿ ಹಣ ಪಡೆಯಬಹುದು.

ಗ್ರಾಹಕನ ಪ್ರಮೇಯವಾಗಲಿ, ಬ್ಯಾಂಕ್‌ನವರ ನಿರ್ಲಕ್ಷ್ಯವಾಗಲಿ ಇಲ್ಲದೇ, ಮೂರನೇ ವ್ಯಕ್ತಿಯ (ಥರ್ಡ್ ಪಾರ್ಟಿ) ಹಸ್ತಕ್ಷೇಪದಿಂದ ವಂಚನೆ ನಡೆದಿದ್ದರೆ, ಮೂರು ಕೆಲಸದ ದಿನಗಳಲ್ಲಿ ದೂರು ನೀಡಬೇಕು. ವಂಚನೆಗೊಳಗಾದ ಗ್ರಾಹಕನಿಗೂ ಆ ಅಕ್ರಮ ವಹಿವಾಟಿಗೂ ಯಾವುದೇ ಸಂಬಂಧವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿ, ನ್ಯಾಯ ಪಡೆಯಲು ಅವಕಾಶವಿರುತ್ತದೆ. ಆದರೆ, ಇಂತಹ ವಹಿವಾಟುಗಳಲ್ಲಿ ಗ್ರಾಹಕರ ಲೋಪ ಇದೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಬ್ಯಾಂಕ್‌ನವರ ಹೆಗಲ ಮೇಲೆ ಇರುತ್ತದೆ.

ಆನ್‌ಲೈನ್‌ ವಹಿವಾಟು ನಡೆಸುವುದಕ್ಕೆ ಅಗತ್ಯವಿರುವ ಮಾಹಿತಿಯನ್ನು ಯಾರ ಕೈಗೂ ಸಿಗದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳುವ ಹೊಣೆ ಗ್ರಾಹಕರ ಮೇಲಿದೆ. ಗ್ರಾಹಕನ ನಿರ್ಲಕ್ಷ್ಯದಿಂದ ಮಾಹಿತಿ ಸೋರಿಕೆಯಾಗಿ, ಕನ್ನ ಹಾಕುವವರು ಖಾತೆಯಿಂದ ಹಣ ಎಗರಿಸಿದ್ದರೆ, ಅಂತಹ ನಷ್ಟವನ್ನು ಬ್ಯಾಂಕ್‌ಗಳು ಭರಿಸುವುದಿಲ್ಲ.

ಗ್ರಾಹಕ ವಂಚನೆಗೊಳಗಾದ ಕೂಡಲೇ ದೂರು ನೀಡಬೇಕು. ದೂರು ನೀಡಿದ ನಂತರವೂ ಖಾತೆಯಿಂದ ಹಣ ಕಳುವಾದರೆ, ಅಂತಹ ವಹಿವಾಟುಗಳಿಗೆ ಬ್ಯಾಂಕ್‌ನವರು ಜವಾಬ್ದಾರರಾಗಿರುತ್ತಾರೆ.

ರಿಸರ್ವ್‌ ಬ್ಯಾಂಕ್‌ ಏನು ಹೇಳುತ್ತದೆ?: ಆನ್‌ಲೈನ್ ವಹಿವಾಟು ಉತ್ತೇಜನಕ್ಕಾಗಿ ಹೆಚ್ಚು ಸುರಕ್ಷಿತ ಕ್ರಮ ಗಳನ್ನು ಅಳವಡಿಸಿಕೊಳ್ಳುವಂತೆ, ಬ್ಯಾಂಕ್‌ಗಳಿಗೆ ರಿಸರ್ವ್‌ ಬ್ಯಾಂಕ್‌ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಆನ್‌ಲೈನ್ ವ್ಯವಹಾರ ಮತ್ತು ವಂಚನೆಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವಂತೆಯೂ ಆರ್‌ಬಿಐ ತಿಳಿಸಿದೆ. ವಂಚನೆಗೆ ಒಳಗಾದ ಗ್ರಾಹಕರು ದೂರು ನೀಡಲು ಸಾಧ್ಯವಾಗುವಂತೆ ಸೇವಾ ವಿಭಾಗವನ್ನು ಬ್ಯಾಂಕ್‌ನವರು ನಿರ್ವಹಿಸುತ್ತಿರಬೇಕು. ಆನ್‌ಲೈನ್‌ನಲ್ಲಿ ದೂರು ನೀಡಲು ಜಾಲತಾಣದಲ್ಲಿ ಲಿಂಕ್‌ ನಮೂದಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT