ಡಿಸಿಬಿ ಬ್ಯಾಂಕ್ ಲಾಭ ಹೆಚ್ಚಳ
ನವದೆಹಲಿ: ಖಾಸಗಿ ವಲಯದ ಡಿಸಿಬಿ ಬ್ಯಾಂಕ್‌ನ ಲಾಭವು 2022ರ ಡಿಸೆಂಬರ್ ತ್ರೈಮಾಸಿಕದಲ್ಲಿ ₹114 ಕೋಟಿ ಆಗಿದೆ. 2021ರ ಇದೇ ಅವಧಿಯಲ್ಲಿ ಲಾಭವು ₹75 ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ ಶೇ 52ರಷ್ಟು ಹೆಚ್ಚಳ ಕಂಡುಬಂದಿದೆ.
ಒಟ್ಟು ವರಮಾನ ₹463 ಕೋಟಿಯಿಂದ ₹541 ಕೋಟಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ವಸೂಲಾಗದ ಸಾಲದ ಸರಾಸರಿ (ಎನ್‌ಪಿಎ) ಪ್ರಮಾಣ ಶೇ 4.78ರಿಂದ ಶೇ 3.62ಕ್ಕೆ ಇಳಿಕೆ ಆಗಿದೆ. ನಿವ್ವಳ ಎನ್‌ಪಿಎ ಶೇ 2.55 ರಿಂದ ಶೇ 1.37ಕ್ಕೆ ಇಳಿಕೆ ಕಂಡಿದೆ.
ಬಂಡವಾಳ ಲಭ್ಯತೆ ಪ್ರಮಾಣವು ಶೇ 16.26ರಷ್ಟು ಇದೆ ಎಂದು ಬ್ಯಾಂಕ್ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.