ವಾಸ್ತವಾಂಶ ನೋಡದೆ, ಎ.ಐ. ತಂತ್ರಾಂಶವೊಂದನ್ನು ಬಳಸಿ, ಕಣ್ಣುಮುಚ್ಚಿ ಹಣ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದರೆ ನೀವು ಶ್ರೀಮಂತರಾಗುವ ಮುನ್ನವೇ ದಿವಾಳಿಯಾಗುವ ಹಾದಿಯಲ್ಲಿದ್ದೀರಿ ಎಂದೇ ಅರ್ಥ! ಹೌದು, ತಂತ್ರಜ್ಞಾನದ ಪ್ರಗತಿಯು ನಮ್ಮ ಹೂಡಿಕೆಯನ್ನು ಎಷ್ಟು ಸುಗಮಗೊಳಿಸಿದೆಯೋ ಅಷ್ಟೇ ಅಪಾಯಕಾರಿ ಬಲೆಯನ್ನೂ ನಮ್ಮ ಸುತ್ತ ಹೆಣೆದಿದೆ. ಹಿಂದೆ ಗೂಗಲ್ ಬಳಸಿ ಹೂಡಿಕೆ ಸಲಹೆಗಳನ್ನು ಹುಡುಕುತ್ತಿದ್ದ ಜನರು, ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎ.ಐ) ಚಾಟ್ಬಾಟ್ಗಳ ಮುಂದೆ ಕುಳಿತು ‘2026ರಲ್ಲಿ ಅತ್ಯುತ್ತಮ ಲಾಭ ನೀಡುವ ಮ್ಯೂಚುವಲ್ ಫಂಡ್ ಮತ್ತು ಷೇರುಗಳು ಯಾವುವು’ ಎಂದು ಕೇಳಲು ಆರಂಭಿಸಿದ್ದಾರೆ.

ಕ್ಷಣಮಾತ್ರದಲ್ಲಿ ಮೂಡಿಬರುವ ಎ.ಐ.ನ ಆಕರ್ಷಕ ಉತ್ತರಗಳು ನಮ್ಮನ್ನು ವಿಸ್ಮಯಗೊಳಿಸುವುದು ನಿಜ. ಆದರೆ, ಇವುಗಳನ್ನು ಕುರುಡಾಗಿ ನಂಬಿದರೆ, ಅದು ನಮ್ಮ ಕಾಂಚಾಣವನ್ನು ನಷ್ಟದ ಸುಳಿಗೆ ದೂಡುವುದು ಖಂಡಿತ.

ಎ.ಐ ಮಿತಿಗಳು–ವಾಸ್ತವ: ಹೂಡಿಕೆಯ ಜಗತ್ತಿನಲ್ಲಿ ಎ.ಐ ಎನ್ನುವುದು ನಿಮ್ಮ ನಿರ್ಧಾರಕ್ಕೆ ಪೂರಕವಾಗಿ ನಿಲ್ಲುವ ಒಂದು ದಿಕ್ಸೂಚಿಯೇ ಹೊರತು, ನಿಮ್ಮ ಅಂತಿಮ ನಿರ್ಧಾರಗಳಿಗೆ ಅದು ಎಂದಿಗೂ ಪರ್ಯಾಯ ಆಯ್ಕೆಯಾಗಲಾರದು. ಕೋಟ್ಯಂತರ ಮಾರುಕಟ್ಟೆ ದತ್ತಾಂಶಗಳನ್ನು ಕೆಲವೇ ಸೆಕೆಂಡುಗಳಲ್ಲಿ ವಿಶ್ಲೇಷಣೆ ಮಾಡುವಲ್ಲಿ ಮತ್ತು ಇತಿಹಾಸವನ್ನು ಆಧರಿಸಿ ಮಾಹಿತಿ ಒದಗಿಸುವಲ್ಲಿ ಎ.ಐ ನಿಸ್ಸೀಮ ಎಂಬುದು ನಿಜ. ಆದರೆ ಮಾರುಕಟ್ಟೆಯು ಇಂತಿಷ್ಟೇ ದಿನಗಳಲ್ಲಿ ಹೀಗೆಯೇ ಚಲಿಸುತ್ತದೆ ಎಂದು ಭವಿಷ್ಯ ನುಡಿಯಲು ಅದಕ್ಕೆ ಸಾಧ್ಯವಿಲ್ಲ. ಜಾಗತಿಕ ರಾಜಕೀಯ ತಲ್ಲಣಗಳು, ಹಠಾತ್ ಆರ್ಥಿಕ ಹಿಂಜರಿತಗಳು ಮತ್ತು ಮಾರುಕಟ್ಟೆಯ ದಿಢೀರ್ ಬದಲಾವಣೆಗಳನ್ನು ಅಂದಾಜಿಸುವ ಶಕ್ತಿ ಸದ್ಯದ ಸ್ಥಿತಿಯಲ್ಲಿ ಯಾವುದೇ ಕೃತಕ ಬುದ್ಧಿಮತ್ತೆಗಿಲ್ಲ. ಬುದ್ಧಿವಂತ ಹೂಡಿಕೆದಾರರು ತಮ್ಮಿಂದ ಆಗಬಹುದಾದ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಲು ತಂತ್ರಜ್ಞಾನವನ್ನು ಬಳಸುತ್ತಾರೆಯೇ ಹೊರತು, ಸಂಪೂರ್ಣ ಹಣಕಾಸಿನ ಜವಾಬ್ದಾರಿಯನ್ನು ಅದರ ತಲೆಗೆ ಕಟ್ಟುವುದಿಲ್ಲ.

ಎ.ಐಗೆ ನಿಮ್ಮ ಪರಿಸ್ಥಿತಿ ಅರ್ಥವಾಗುವುದಿಲ್ಲ: ಪ್ರತಿ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಆದಾಯದ ಮೂಲ ಮತ್ತು ಕುಟುಂಬದ ಹಿನ್ನೆಲೆ ಭಿನ್ನವಾಗಿರುತ್ತದೆ. ಯಾವುದೇ ಎ.ಐ ಚಾಟ್ಬಾಟ್ ಮುಂದೆ ಕುಳಿತು ‘ನನ್ನ ಬಳಿ ₹2 ಲಕ್ಷ ಇದೆ. ನನಗೊಂದು ಅತ್ಯುತ್ತಮ ಹೂಡಿಕೆಯ ದಾರಿ ತೋರಿಸು’ ಎಂದು ಕೇಳಿದರೆ, ಅದು ಗಣಿತದ ಲೆಕ್ಕಾಚಾರ ಆಧರಿಸಿ ಮಾರುಕಟ್ಟೆಯಲ್ಲಿ ಗರಿಷ್ಠ ಲಾಭ ತಂದುಕೊಡುವ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ಗಳು ಅಥವಾ ಹೈ-ರಿಸ್ಕ್ ಷೇರುಗಳ ಆಕರ್ಷಕ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತದೆ. ಆದರೆ ಕೃತಕ ಬುದ್ಧಿಮತ್ತೆಗೆ ನಿಮ್ಮ ಜೀವನದ ನೈಜ ಸನ್ನಿವೇಶಗಳನ್ನು ಗ್ರಹಿಸುವ ಶಕ್ತಿ ಇರುವುದಿಲ್ಲ. ಈ ₹2 ಲಕ್ಷ ನಿಮ್ಮ ಮಗಳ ಮುಂದಿನ ವಿದ್ಯಾಭ್ಯಾಸ ಅಥವಾ ಮದುವೆಗಾಗಿ ಕಷ್ಟಪಟ್ಟು ಕೂಡಿಟ್ಟ ಹಣವೇ ಅಥವಾ ಮುಂದಿನ ತಿಂಗಳು ನಿಮ್ಮ ತಂದೆಯ ವೈದ್ಯಕೀಯ ತುರ್ತು ಚಿಕಿತ್ಸೆಗೆ ಬೇಕಾಗಬಹುದಾದ ಮೀಸಲು ನಿಧಿಯೇ ಎಂಬ ಪ್ರಾಯೋಗಿಕ ಜ್ಞಾನ ಅದಕ್ಕೆ ಇರುವುದಿಲ್ಲ.

ಅಷ್ಟೇ ಅಲ್ಲದೆ, ಪ್ರಸ್ತುತ ನಿಮ್ಮ ಮೇಲೆ ಎಷ್ಟು ಸಾಲದ ಹೊರೆ ಇದೆ, ನಿಮ್ಮ ಮಾಸಿಕ ಖರ್ಚುಗಳೇನು ಮತ್ತು ಒಂದು ವೇಳೆ ಮಾರುಕಟ್ಟೆ ದಿಢೀರನೆ ಕುಸಿದರೆ ಆ ನಷ್ಟವನ್ನು ತಡೆದುಕೊಳ್ಳುವ ಆರ್ಥಿಕ ಹಾಗೂ ಮಾನಸಿಕ ಸಾಮರ್ಥ್ಯ ನಿಮಗಿದೆಯೇ ಎಂಬ ಅತ್ಯಗತ್ಯ ಪ್ರಶ್ನೆಗಳನ್ನು ಎ.ಐ ನಿಮ್ಮಲ್ಲಿ ಕೇಳುವುದಿಲ್ಲ. ಅದು ಅಂಕಿ-ಅಂಶ ಆಧರಿಸಿ ಮಾತ್ರ ಲೆಕ್ಕ ಹಾಕುತ್ತದೆ. ಹೂಡಿಕೆಯ ಜಗತ್ತಿನಲ್ಲಿ ಗಣಿತದ ಸೂತ್ರಗಳಿಗಿಂತ ನಿಮ್ಮ ವೈಯಕ್ತಿಕ ಅಗತ್ಯಗಳು, ಸಮಯದ ಮಿತಿ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ಇರುತ್ತದೆ. ನಿಮ್ಮ ಜೀವನದ ಕಠಿಣ ಪರಿಸ್ಥಿತಿಗಳನ್ನು ಅರಿಯದ ಯಂತ್ರದ ಸಲಹೆಯನ್ನು ಕುರುಡಾಗಿ ನಂಬಿದರೆ, ತುರ್ತು ಸಂದರ್ಭದಲ್ಲಿ ಹಣ ಸಿಗದೆ ಅಥವಾ ಮಾರುಕಟ್ಟೆಯ ಕುಸಿತದಿಂದ ಬಂಡವಾಳವೇ ಕರಗಿ ಹೋಗಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

ಎ.ಐ ಬಳಸಿಕೊಳ್ಳುವುದು ಹೇಗೆ?: ನಿಮ್ಮ ಹೂಡಿಕೆಯ ಹಾದಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಕಣ್ಣುಮುಚ್ಚಿ ನಂಬುವ ಬದಲು, ಅದನ್ನು ನಿಮ್ಮ ಕೆಲಸದ ಹೊರೆ ಕಡಿಮೆ ಮಾಡುವ ಒಂದು ಸಹಾಯಕನನ್ನಾಗಿ ಬಳಸಬಹುದು. ಇದಕ್ಕಾಗಿ ಮೊದಲಿಗೆ ವಲಯಗಳ ವಿಶ್ಲೇಷಣೆ ಅಥವಾ ವಲಯಗಳ ಅಧ್ಯಯನ ಮಾಡಲು ಎ.ಐ ನೆರವು ಪಡೆಯಬಹುದು.

ಉದಾಹರಣೆಗೆ, ಪ್ರಸ್ತುತ ಭಾರತದಲ್ಲಿ ನವೀಕರಿಸಬಹುದಾದ ಇಂಧನ ಅಥವಾ ವಿದ್ಯುತ್ ಚಾಲಿತ ವಾಹನ ವಲಯದ ಬೆಳವಣಿಗೆ ಹೇಗಿದೆ ಎಂಬಂತಹ ವಿಶಾಲವಾದ ಅಧ್ಯಯನಕ್ಕೆ ಇದನ್ನು ಬಳಸಿದಾಗ ಮಾರುಕಟ್ಟೆಯ ಇತ್ತೀಚಿನ ಪ್ರವೃತ್ತಿಗಳು ನಮಗೆ ಸುಲಭವಾಗಿ ಅರ್ಥವಾಗುತ್ತದೆ. ಎರಡನೆಯದಾಗಿ, ಅಪಾಯ ನಿರ್ವಹಣೆ ಅಥವಾ ರಿಸ್ಕ್ ಪ್ರೊಫೈಲಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ನಮ್ಮ ವಯಸ್ಸು, ಆದಾಯ ಮತ್ತು ಆರ್ಥಿಕ ಗುರಿಗಳನ್ನು ಎ.ಐ ಚಾಟ್ಬಾಟ್ಗೆ ನೀಡಿ, ನಮ್ಮ ಹೂಡಿಕೆಯಲ್ಲಿ ಎಷ್ಟು ಭಾಗ ಸುರಕ್ಷಿತವಾಗಿರಬೇಕು ಮತ್ತು ಎಷ್ಟು ಭಾಗ ಮಾರುಕಟ್ಟೆಯ ರಿಸ್ಕ್ಗೆ ಒಳಪಡಬೇಕು ಎಂಬ ನೀಲನಕ್ಷೆ ಪಡೆಯಬಹುದು.

ಹಣಕಾಸಿನ ಸಾಕ್ಷರತೆ ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ. ಮಾರುಕಟ್ಟೆಯ ಜಟಿಲ ಪದಗಳಾದ ಪಿಇ ರೇಷಿಯೋ, ಆಲ್ಫಾ ಮತ್ತು ಬೀಟಾ ಮೌಲ್ಯಗಳು ಅಥವಾ ಡೆಟ್-ಟು-ಈಕ್ವಿಟಿ ಎಂದರೇನು ಎಂಬುದನ್ನು ಅತ್ಯಂತ ಸರಳ ಉದಾಹರಣೆಗಳೊಂದಿಗೆ ನಮಗೆ ಅರ್ಥವಾಗುವಂತೆ ವಿವರಿಸಲು ಎ.ಐ ಅನ್ನು ಬಳಸಿ ನಮ್ಮ ಹೂಡಿಕೆಯ ಜ್ಞಾನ ವೃದ್ಧಿಸಿಕೊಳ್ಳಬಹುದು.

ಎ.ಐ ಯುಗದ ಅಪಾಯ

ತಂತ್ರಜ್ಞಾನ ಬೆಳೆದಂತೆಲ್ಲ ವಂಚಕರು ಜನರನ್ನು ವಂಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಸಾಕು, ‘ನಮ್ಮ ಅತ್ಯಾಧುನಿಕ ಎ.ಐ ರೋಬೊ ಶೇಕಡ ನೂರರಷ್ಟು ನಿಖರವಾದ ಟ್ರೇಡಿಂಗ್ ಸಿಗ್ನಲ್ ನೀಡುತ್ತದೆ, ನಿಮ್ಮ ಹೂಡಿಕೆಗೆ ದಿನಕ್ಕೆ ಇಷ್ಟೇ ಲಾಭ ಮಾಡಿಕೊಡುತ್ತದೆ’ ಎಂಬ ಆಕರ್ಷಕ ವಿಡಿಯೊಗಳು ಮತ್ತು ಜಾಹೀರಾತುಗಳು ಸಿಗುತ್ತವೆ. ಹಣಕಾಸು ತಜ್ಞರು ಅಥವಾ ಪ್ರಸಿದ್ಧ ಉದ್ಯಮಿಗಳ ಮುಖ ಮತ್ತು ಧ್ವನಿಯನ್ನು ಡೀಪ್ಫೇಕ್ ತಂತ್ರಜ್ಞಾನದ ಮೂಲಕ ಸೃಷ್ಟಿಸಿ, ಜನರನ್ನು ನಂಬಿಸುವಂತಹ ಬಲೆ ಹೆಣೆಯಲಾಗುತ್ತಿದೆ. ಸಾಮಾನ್ಯ ಹೂಡಿಕೆದಾರರು ಇಂಥವುಗಳನ್ನು ನೋಡಿ ಬೆರಗಾಗಿ, ರಾತ್ರೋರಾತ್ರಿ ಶ್ರೀಮಂತರಾಗುವ ಆಸೆಗೆ ಬಿದ್ದು ತಮ್ಮ ಕಷ್ಟದ ಹಣವನ್ನು ಕೆಲವು ನಕಲಿ ಆ್ಯಪ್ಗಳಿಗೆ ಸುರಿಯುತ್ತಿದ್ದಾರೆ.

ಆದರೆ ಹೂಡಿಕೆಯ ಜಗತ್ತಿನಲ್ಲಿ ನಾವೆಲ್ಲರೂ ನೆನಪಿಡಬೇಕಾದ ಕಟು ಸತ್ಯವೆಂದರೆ, ಜಗತ್ತಿನ ಯಾವುದೇ ಮೂಲೆಯಲ್ಲೂ ಶೇಕಡ ನೂರರಷ್ಟು ನಿಖರವಾಗಿ ಮಾರುಕಟ್ಟೆಯನ್ನು ಊಹಿಸುವ ತಂತ್ರಜ್ಞಾನವಾಗಲಿ ಅಲ್ಗಾರಿದಮ್ ಆಗಲಿ ಅಸ್ತಿತ್ವದಲ್ಲಿಲ್ಲ. ದೊಡ್ಡ ಹಣಕಾಸು ಸಂಸ್ಥೆಗಳೇ ಮಾರುಕಟ್ಟೆಯ ಏರಿಳಿತಗಳನ್ನು ನಿಭಾಯಿಸಲು ಪರದಾಡುತ್ತಿರುವಾಗ, ಕ್ಷಿಪ್ರ ಲಾಭದ ಭರವಸೆ ನೀಡುವ ಇವೆಲ್ಲವೂ ಎ.ಐ ಹೆಸರಿನಲ್ಲಿ ನಡೆಯುತ್ತಿರುವ ಹೊಸ ಯುಗದ ಅತ್ಯಂತ ಅಪಾಯಕಾರಿ ಡಿಜಿಟಲ್ ವಂಚನೆಗಳಾಗಿವೆ. ಇಂತಹ ವಂಚಕ ಆ್ಯಪ್ಗಳು ಆರಂಭದಲ್ಲಿ ಸಣ್ಣ ಮಟ್ಟದ ಲಾಭವನ್ನು ತೋರಿಸಿ, ನಂತರ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿಸಿಕೊಂಡು ಮಾಯವಾಗುತ್ತವೆ. ಇಷ್ಟೇ ಅಲ್ಲದೆ, ಇಂತಹ ನಕಲಿ ಲಿಂಕ್ಗಳನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಬ್ಯಾಂಕ್ ಖಾತೆಯ ರಹಸ್ಯ ವಿವರಗಳು ಮತ್ತು ವೈಯಕ್ತಿಕ ದತ್ತಾಂಶಗಳು ಹ್ಯಾಕರ್ಗಳ ಪಾಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಕೃತಕ ಬುದ್ಧಿಮತ್ತೆಯ ಹೆಸರಿನಲ್ಲಿ ಬರುವ ಇಂತಹ ಯಾವುದೇ ಅಡ್ಡದಾರಿಯ ಯೋಜನೆಗಳನ್ನು ನಂಬದೆ, ಅಧಿಕೃತವಲ್ಲದ ಆ್ಯಪ್ಗಳಿಗೆ ನಿಮ್ಮ ಬ್ಯಾಂಕ್ ವಿವರಗಳನ್ನಾಗಲಿ ಕಷ್ಟಪಟ್ಟು ದುಡಿದ ಬಂಡವಾಳವನ್ನಾಗಲಿ ನೀಡಿ ಮೋಸ ಹೋಗಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.