ಭಾರತೀಯರಿಗೆ ಚಿನ್ನವು ಕೇವಲ ಲೋಹವಲ್ಲ; ಅದು ಐಶ್ವರ್ಯ ಮತ್ತು ಭದ್ರತೆಯ ಸಂಕೇತ. ಶತಮಾನಗಳಿಂದಲೂ ನಾವು ಭೌತಿಕವಾಗಿ ಚಿನ್ನವನ್ನು ಖರೀದಿಸಿ ಸಂಗ್ರಹಿಸುವುದನ್ನೇ ರೂಢಿಸಿಕೊಂಡಿದ್ದೇವೆ. ಆದರೆ, ಬದಲಾಗುತ್ತಿರುವ ಕಾಲದಲ್ಲಿ, ಬಂಗಾರವನ್ನು ಖರೀದಿಸುವ ಮತ್ತು ಇರಿಸಿಕೊಳ್ಳುವ ವಿಧಾನವೂ ಬದಲಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ) ಇದೇ ಮೇ 4ರಂದು ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಿದ ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ (ಇಜಿಆರ್) ಈಗ ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿದೆ.

ಏನಿದು ಇಜಿಆರ್: ಸರಳವಾಗಿ ಹೇಳುವುದಾದರೆ, ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ ಎಂಬುದು ಡಿಜಿಟಲ್ ಬಂಗಾರ. ನೀವು ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳನ್ನು ಖರೀದಿಸಿ ನಿಮ್ಮ ಡಿಮ್ಯಾಟ್ ಖಾತೆಯಲ್ಲಿ ಹೇಗೆ ಇರಿಸುತ್ತೀರೋ, ಹಾಗೆಯೇ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಇರಿಸುವುದೇ ಈ ಬಂಗಾರದ ರಸೀದಿ ಅಥವಾ ಇಜಿಆರ್. ಇಲ್ಲಿ ಖರೀದಿಸುವ ಪ್ರತಿ ರಸೀದಿಯು ಅಸಲಿ ಚಿನ್ನಕ್ಕೆ ಸಮನಾಗಿರುತ್ತದೆ. ಈ ಚಿನ್ನವನ್ನು ಸೆಬಿ ಅನುಮೋದಿತ ಅತ್ಯಂತ ಸುರಕ್ಷಿತವಾದ ವಾಲ್ಟ್ ಅಥವಾ ಸರ್ಕಾರಿ ಲಾಕರ್ಗಳಲ್ಲಿ ಇರಿಸಲಾಗಿರುತ್ತದೆ.

ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ ವ್ಯವಸ್ಥೆಯು ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ:

1. ಚಿನ್ನದ ಠೇವಣಿ: ಮಾನ್ಯತೆ ಪಡೆದ ಚಿನ್ನದ ಶುದ್ಧೀಕರಣ ಘಟಕಗಳು ಅಥವಾ ಬ್ಯಾಂಕುಗಳು ಭೌತಿಕ ಚಿನ್ನವನ್ನು ಅಧಿಕೃತ ವಾಲ್ಟ್ ವ್ಯವಸ್ಥಾಪಕರಿಗೆ ಒಪ್ಪಿಸುತ್ತವೆ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಿದ ನಂತರ, ಅದಕ್ಕೆ ಸಮನಾದ ಡಿಜಿಟಲ್ ರಸೀದಿಯನ್ನು ಸೃಷ್ಟಿಸಲಾಗುತ್ತದೆ.

2. ವ್ಯಾಪಾರ: ಸೃಷ್ಟಿಯಾದ ಈ ರಸೀದಿಗಳು ಎನ್ಎಸ್ಇಯಲ್ಲಿ ಲಭ್ಯವಿರುತ್ತವೆ. ಹೂಡಿಕೆದಾರರು ತಮ್ಮ ಡಿಮ್ಯಾಟ್ ಖಾತೆಯ ಮೂಲಕ ಇವುಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.

3. ಭೌತಿಕವಾಗಿ ಚಿನ್ನ ಪಡೆಯಬಹುದು: ಇದು ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ನ ಅತ್ಯಂತ ಪ್ರಮುಖ ವೈಶಿಷ್ಟ್ಯ. ನಿಮ್ಮ ಬಳಿ ನಿಗದಿತ ಪ್ರಮಾಣದ ರಸೀದಿಗಳು ಜಮೆಯಾದಾಗ (ಉದಾಹರಣೆಗೆ 10 ಗ್ರಾಂ ಅಥವಾ 100 ಗ್ರಾಂ), ನೀವು ಆ ಡಿಜಿಟಲ್ ರಸೀದಿಯನ್ನು ನೀಡಿ, ವಾಲ್ಟ್ನಿಂದ ಅಸಲಿ ಚಿನ್ನದ ನಾಣ್ಯ ಅಥವಾ ಬಿಲ್ಲೆಗಳನ್ನು ಭೌತಿಕವಾಗಿ ಪಡೆದುಕೊಳ್ಳಬಹುದು.

ಯಾರು ಹೂಡಿಕೆ ಮಾಡಬಹುದು ಮತ್ತು ಅರ್ಹತೆಗಳೇನು?: ಭಾರತದ ಪ್ರಜೆ ವೈಯಕ್ತಿಕವಾಗಿ ಅಥವಾ ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಇಷ್ಟೇ ಅಲ್ಲದೆ, ನೋಂದಾಯಿತ ಟ್ರಸ್ಟ್ಗಳು ಮತ್ತು ಕಾರ್ಪೊರೇಟ್ ಕಂಪನಿಗಳಿಗೂ ಇದರಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೂಡಿಕೆದಾರರು ಹೊಂದಿರಬೇಕಾದ ಪ್ರಮುಖ ಅರ್ಹತೆಯೆಂದರೆ, ಅವರ ಹೆಸರಿನಲ್ಲಿ ಒಂದು ಡಿಮ್ಯಾಟ್ ಖಾತೆ ಇರಬೇಕು ಹಾಗೂ ಸೆಬಿ ಅಡಿಯಲ್ಲಿ ನೋಂದಾಯಿತವಾಗಿರುವ ಯಾವುದೇ ಬ್ರೋಕರ್ ಬಳಿ ಟ್ರೇಡಿಂಗ್ ಖಾತೆಯನ್ನು ಹೊಂದಿರಬೇಕು. ಸಣ್ಣ ಉಳಿತಾಯ ಮಾಡುವವರಿಗೂ ಇದು ಪೂರಕವಾಗಿದ್ದು, ಇಲ್ಲಿ ಯಾವುದೇ ದೊಡ್ಡ ಮೊತ್ತದ ಹೂಡಿಕೆಯ ಅವಶ್ಯಕತೆಯಿಲ್ಲ. ಕೇವಲ 1 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ತೂಕದ ಚಿನ್ನದ ಯೂನಿಟ್ಗಳನ್ನು ಅನುಕೂಲಕ್ಕೆ ತಕ್ಕಂತೆ ಖರೀದಿಸಬಹುದು.

ಇತರ ಹೂಡಿಕೆಗಳಿಗಿಂತ ಇದು ಹೇಗೆ ಭಿನ್ನ?: ಬಹಳಷ್ಟು ಜನರಿಗೆ ಚಿನ್ನದ ಇಟಿಎಫ್ ಮತ್ತು ಮ್ಯೂಚುವಲ್ ಫಂಡ್ಗಳಿಗೂ ಇದಕ್ಕೂ ಇರುವ ವ್ಯತ್ಯಾಸ ತಿಳಿಯುವುದಿಲ್ಲ. ಇವು ಹೇಗೆ ಒಂದಕ್ಕಿಂತ ಒಂದು ವಿಭಿನ್ನ ತಿಳಿಯುವುದು ಅಗತ್ಯ. (ಪಟ್ಟಿ ನೋಡಿ)

ಇಜಿಆರ್ ಇತರೆ ಚಿನ್ನದ ಹೂಡಿಕೆಗಳಿಗಿಂತ ಹೇಗೆ ಭಿನ್ನ?

ಹೂಡಿಕೆದಾರರಿಗೆ ಆಗುವ ಲಾಭಗಳೇನು?

1. ಸುರಕ್ಷತೆ: ಮನೆಯಲ್ಲಿ ಅಥವಾ ಬ್ಯಾಂಕ್ ಲಾಕರ್ನಲ್ಲಿ ಚಿನ್ನ ಇಟ್ಟರೆ ಕಳ್ಳತನದ ಭಯವಿರುತ್ತದೆ. ಆದರೆ ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ನಲ್ಲಿ ಚಿನ್ನವು ವಿಮೆ ಇರುವ ವಾಲ್ಟ್ಗಳಲ್ಲಿ ಇರುವುದರಿಂದ ಪೂರ್ಣ ಸುರಕ್ಷತೆ ಇರುತ್ತದೆ.

2. ಪಾರದರ್ಶಕ ಬೆಲೆ: ಚಿನ್ನಾಭರಣ ಅಂಗಡಿಗಳಲ್ಲಿ ದಿನಕ್ಕೊಂದು ಬೆಲೆ ಇರುತ್ತದೆ. ಆದರೆ ಎನ್ಎಸ್ಇಯಲ್ಲಿ ಇಡೀ ದೇಶಕ್ಕೆ ಒಂದೇ ಬೆಲೆ ಇರುವುದರಿಂದ ಪಾರದರ್ಶಕತೆ ಇರುತ್ತದೆ.

3. ಯಾವುದೇ ಮೇಕಿಂಗ್ ಶುಲ್ಕ ಇಲ್ಲ: ಆಭರಣ ಖರೀದಿಸುವಾಗ ನೀಡುವ ತಯಾರಿಕಾ ವೆಚ್ಚ ಇಲ್ಲಿ ಇರುವುದಿಲ್ಲ. ಕೇವಲ ಚಿನ್ನದ ಮೌಲ್ಯಕ್ಕೆ ಮಾತ್ರ ಹಣ ನೀಡುತ್ತೀರಿ.

4. ನಗದೀಕರಣ ಸುಲಭ: ಹಣದ ತುರ್ತು ಅಗತ್ಯವಿದ್ದಾಗ ಮಾರುಕಟ್ಟೆಯಲ್ಲಿ ತಕ್ಷಣವೇ ಇವುಗಳನ್ನು ಮಾರಾಟ ಮಾಡಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬಹುದು.

ತೆರಿಗೆ ನಿಯಮಗಳು: ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ಗಳನ್ನು ಲಿಸ್ಟೆಡ್ ಸೆಕ್ಯೂರಿಟೀಸ್ ಎಂದು ಪರಿಗಣಿಸಲಾಗುತ್ತದೆ. ನೀವು ಇವುಗಳನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇಟ್ಟುಕೊಂಡರೆ ಅದು ದೀರ್ಘಾವಧಿ ಬಂಡವಾಳ ಲಾಭ (ಎಲ್ಟಿಸಿಜಿ) ಎಂದು ಪರಿಗಣಿಸಲ್ಪಡುತ್ತದೆ ಮತ್ತು ಅದಕ್ಕೆ ತಕ್ಕಂತೆ ರಿಯಾಯಿತಿ ದರದ ತೆರಿಗೆ ಅನ್ವಯವಾಗುತ್ತದೆ. ಒಂದು ವರ್ಷದ ಒಳಗೆ ಮಾರಾಟ ಮಾಡಿದರೆ ನಿಮ್ಮ ಆದಾಯದ ಸ್ಲ್ಯಾಬ್ ಪ್ರಕಾರ ತೆರಿಗೆ ಅನ್ವಯಿಸುತ್ತದೆ. ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ ಖರೀದಿ ಅಥವಾ ಮಾರಾಟದ ಮೇಲೆ ಜಿಎಸ್ಟಿ ಅನ್ವಯಿಸುವುದಿಲ್ಲ. ಆದರೆ ಇಜಿಆರ್ ಬದಲಿಗೆ ಅಸಲಿ ಚಿನ್ನ ಪಡೆದಾಗ ಜಿಎಸ್ಟಿ ಅನ್ವಯಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.