ಬೆಳಗ್ಗೆ ಎದ್ದ ತಕ್ಷಣ ಕಚೇರಿಗೆ ಓಡುವ ಅವಸರ, ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿ ಕಾಯುವ ಅನಿವಾರ್ಯತೆ. ಇದು ನಮ್ಮೆಲ್ಲರ ಕಥೆ. ಆದರೆ, ನಮ್ಮ ಹಣ ನಮಗಾಗಿ ದುಡಿಯಬೇಕು ಎಂಬ ಮಾತು ಕೇಳಿದ್ದೀರಾ? ಹೌದು, ನೀವು ನೆಮ್ಮದಿಯಾಗಿ ಮನೆಯಲ್ಲಿ ಕುಳಿತಿದ್ದರೂ, ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ನಿಶ್ಚಿತ ಮೊತ್ತ ಜಮೆಯಾಗುವಂತೆ ಮಾಡಲು ಸಾಧ್ಯವಿದೆ. ಇದು ಯಾವುದೇ ಮೋಸದ ಜಾಲವಲ್ಲ; ಬದಲಿಗೆ ಅತ್ಯಂತ ವಿಶ್ವಾಸಾರ್ಹ ನಿಶ್ಚಿತ ಆದಾಯ ನೀಡುವ ಹೂಡಿಕೆಗಳ ಶಕ್ತಿ. ನಿಮ್ಮ ಹಣಕಾಸಿನ ಭವಿಷ್ಯವನ್ನು ಭದ್ರಪಡಿಸುವ ಆರು ಮಾರ್ಗಗಳ ಬಗ್ಗೆ ತಿಳಿದುಕೊಳ್ಳಿ.

1. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ: ಭಾರತೀಯರಿಗೆ ಅಂಚೆ ಕಚೇರಿ ಎಂದರೆ ಮೊದಲಿನಿಂದಲೂ ಅಚಲವಾದ ನಂಬಿಕೆ. ನಿಮ್ಮ ಬಳಿ ಒಂದು ದೊಡ್ಡ ಮೊತ್ತವಿದ್ದು, ಅದನ್ನು ಯಾವುದೇ ಅಪಾಯ ಇಲ್ಲದೆ ಹೂಡಿಕೆ ಮಾಡಬೇಕೆಂದರೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಒಂದು ಅತ್ಯುತ್ತಮ ದಾರಿ. ಇದರಲ್ಲಿ ನೀವು ಐದು ವರ್ಷಗಳಿಗೆ ಹಣ ಠೇವಣಿ ಇರಿಸಬೇಕು. ಈ ಯೋಜನೆಯಲ್ಲಿ ಪ್ರಸ್ತುತ ಬಡ್ಡಿ ದರ ಶೇ 7.4ರಷ್ಟಿದೆ. ಈ ಯೋಜನೆಯಲ್ಲಿ ಕೆಲ ಸಾವಿರಗಳಿಂದ ಹಿಡಿದು ಗರಿಷ್ಠ ₹15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ವೈಯಕ್ತಿಕವಾಗಿ ₹9 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿಮ್ಮ ಕೈಗೆ ₹5,550 ಬಡ್ಡಿ ಸಿಗುತ್ತದೆ. ಅದೇ ಜಂಟಿ ಖಾತೆಯಾಗಿದ್ದರೆ ₹15 ಲಕ್ಷದವರೆಗೆ ಹೂಡಿಕೆ ಮಾಡಿ ತಿಂಗಳಿಗೆ ₹9,250 ಆದಾಯ ಪಡೆಯಬಹುದು. ಅಸಲು ಸಂಪೂರ್ಣ ಸುರಕ್ಷಿತ. ಆದರೆ ಬರುವ ಬಡ್ಡಿಗೆ ತೆರಿಗೆ ಅನ್ವಯಿಸುತ್ತದೆ ಎಂಬುದನ್ನು ಮರೆಯಬೇಡಿ.

2. ಹಿರಿಯ ನಾಗರಿಕರ ಉಳಿತಾಯ ಯೋಜನೆ: ನಿಮ್ಮ ವಯಸ್ಸು 60 ದಾಟಿದ್ದರೆ, ನಿವೃತ್ತಿಯ ಹಣ ಕೈಯಲ್ಲಿದ್ದರೆ ಇದಕ್ಕಿಂತ ಉತ್ತಮವಾದ ಸುರಕ್ಷಿತ ಹೂಡಿಕೆ ಮತ್ತೊಂದಿಲ್ಲ. ಪ್ರಸ್ತುತ ಈ ಯೋಜನೆಯು ಶೇ 8.2ರಷ್ಟು ಬಡ್ಡಿ ದರವನ್ನು ನೀಡುತ್ತಿದೆ. ಇದರಲ್ಲಿ ಗರಿಷ್ಠ ₹30 ಲಕ್ಷದವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಇದರ ವಿಶೇಷವೆಂದರೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಯೋಜನೆಯಲ್ಲಿ ಹಣವು ಪ್ರತಿ ಮೂರು ತಿಂಗಳಿಗೊಮ್ಮೆ ಅಂದರೆ ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿಯಲ್ಲಿ ಪಾವತಿಯಾಗುತ್ತದೆ. ನೀವು ₹30 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ಮೂರು ತಿಂಗಳಿಗೆ ₹61,500 ಸಿಗುತ್ತದೆ. ಅಂದರೆ ತಿಂಗಳಿಗೆ ಸರಾಸರಿ ₹20,500 ನಿಮ್ಮದಾಗುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (ಎಸ್ಸಿಎಸ್ಎಸ್) ಕನಿಷ್ಠ ₹1 ಸಾವಿರದಿಂದಲೂ ಹೂಡಿಕೆ ಸಾಧ್ಯವಿದೆ.

3. ಕಾರ್ಪೊರೇಟ್ ಸಾಲಪತ್ರಗಳು ಮತ್ತು ಎನ್ಸಿಡಿಗಳು: ಬ್ಯಾಂಕ್ ನಿಶ್ಚಿತ ಠೇವಣಿಗಿಂತ (ಎಫ್.ಡಿ) ಸ್ವಲ್ಪ ಹೆಚ್ಚಿನ ಲಾಭ ಬೇಕು ಎನ್ನುವವರಿಗೆ ಕಾರ್ಪೊರೇಟ್ ಸಾಲಪತ್ರಗಳು ಸೂಕ್ತ. ಸರಳವಾಗಿ ಹೇಳುವುದಾದರೆ, ಇಲ್ಲಿ ದೊಡ್ಡ ಕಂಪನಿಗಳಿಗೆ ನಿಮ್ಮ ಹೂಡಿಕೆ ಹಣವನ್ನು ಸಾಲವಾಗಿ ನೀಡಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಅವು ನಿಮಗೆ ಬಡ್ಡಿ ನೀಡುತ್ತವೆ. ಕಂಪನಿಗಳ ಗುಣಮಟ್ಟಕ್ಕೆ ಅನುಗುಣವಾಗಿ ಇಲ್ಲಿ ಶೇ 8ರಿಂದ ಶೇ 11ರಷ್ಟು ವಾರ್ಷಿಕ ಲಾಭ ಸಿಗಬಹುದು. ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಹಣ ಪಡೆಯುವ ಆಯ್ಕೆ ಇರುತ್ತದೆ. ಹೂಡಿಕೆ ಮಾಡುವ ಮೊದಲು ಆ ಕಂಪನಿಯ ಕ್ರೆಡಿಟ್ ರೇಟಿಂಗ್ ಗಮನಿಸುವುದು ಮುಖ್ಯ. ಯಾವಾಗಲೂ ‘ಎಎಎ’ ಅಥವಾ ‘ಎಎ+’ ರೇಟಿಂಗ್ ಇರುವ ಕಂಪನಿಗಳನ್ನೇ ಆರಿಸಿಕೊಳ್ಳಿ. ಉದಾಹರಣೆಗೆ, ₹15 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ ಸುಮಾರು ₹10 ಸಾವಿರ ಆದಾಯ ನಿರೀಕ್ಷಿಸಬಹುದು.

4. ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್: ಬೆಂಗಳೂರಿನಂತಹ ನಗರಗಳಲ್ಲಿ ನಿವೇಶನ ಖರೀದಿಸಿ, ಮನೆ ಕಟ್ಟಿ, ಬಾಡಿಗೆದಾರರನ್ನು ನಿಭಾಯಿಸುವುದು ದೊಡ್ಡ ಸಾಹಸವೇ ಸರಿ. ಆದರೆ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ (ಆರ್ಇಐಟಿ) ಮೂಲಕ ನೀವು ಈ ಯಾವುದೇ ಕಿರಿಕಿರಿ ಇಲ್ಲದೆ ರಿಯಲ್ ಎಸ್ಟೇಟ್ನಿಂದ ಆದಾಯ ಪಡೆಯಬಹುದು. ನೀವು ದೊಡ್ಡ ದೊಡ್ಡ ಐ.ಟಿ ಪಾರ್ಕ್ಗಳು ಅಥವಾ ಮಾಲ್ಗಳ ಮಾಲೀಕತ್ವ ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತೀರಿ. ಆ ಕಂಪನಿಗಳು ಬರುವ ಬಾಡಿಗೆಯ ಶೇ 90ರಷ್ಟು ಭಾಗವನ್ನು ನಿಮಗೆ ಹಂಚುತ್ತವೆ. ಇಲ್ಲಿ ವರ್ಷಕ್ಕೆ ಶೇ 6.5ರಷ್ಟು ಡಿವಿಡೆಂಡ್ ಸಿಗುವ ಸಾಧ್ಯತೆ ಇರುತ್ತದೆ. ವಿಶೇಷವೆಂದರೆ, ನಿಮಗೆ ಹಣದ ಅವಶ್ಯಕತೆ ಇದ್ದಾಗ ಈ ಯೂನಿಟ್ಗಳನ್ನು ಷೇರು ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಿ ಹಣ ಪಡೆಯಬಹುದು. ₹35 ಲಕ್ಷ ಹೂಡಿಕೆಗೆ ತಿಂಗಳಿಗೆ ಸುಮಾರು ₹18,958 ಆದಾಯ ಪಡೆಯುವ ಅವಕಾಶ ಇಲ್ಲಿದೆ.

5. ಮ್ಯೂಚುವಲ್ ಫಂಡ್ ಎಸ್ಡಬ್ಲ್ಯುಪಿ: ಮ್ಯೂಚುವಲ್ ಫಂಡ್ನಿಂದ ಪ್ರತಿ ತಿಂಗಳು ಹಣ ಹಿಂಪಡೆಯುವ ವ್ಯವಸ್ಥೆಯನ್ನೇ ‘ವ್ಯವಸ್ಥಿತ ಹಣ ಹಿಂಪಡೆಯುವಿಕೆ’ (ಎಸ್ಡಬ್ಲ್ಯುಪಿ) ಎನ್ನುತ್ತಾರೆ. ಇದು ಸಾಮಾನ್ಯ ಡಿವಿಡೆಂಡ್ಗಿಂತ ಹೆಚ್ಚಿನ ಮಟ್ಟದಲ್ಲಿ ತೆರಿಗೆ ಉಳಿತಾಯ ಮಾಡಿಕೊಡುತ್ತದೆ. ದೊಡ್ಡ ಮೊತ್ತವನ್ನು ಹೈಬ್ರಿಡ್ ಅಥವಾ ಸಾಲಪತ್ರ ಆಧಾರಿತ ಫಂಡ್ನಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು ಇಂತಿಷ್ಟು ಹಣ ಬೇಕು ಎಂಬ ಸೂಚನೆ ನೀಡಬೇಕು. ಫಂಡ್ನ ಗಳಿಕೆಯ ಆಧಾರದ ಮೇಲೆ ಶೇ 8ರಷ್ಟು ವಾರ್ಷಿಕ ಲಾಭ ನಿರೀಕ್ಷಿಸಬಹುದು. ಉದಾಹರಣೆಗೆ, ₹25 ಲಕ್ಷ ಹೂಡಿಕೆ ಮಾಡಿದರೆ ನಿಮ್ಮ ಮೂಲ ಹಣಕ್ಕೆ ಧಕ್ಕೆಯಾಗದಂತೆ ಪ್ರತಿ ತಿಂಗಳು ₹16,500 ನಿರಂತರವಾಗಿ ಪಡೆಯಬಹುದು.

6. ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್: ಹೆದ್ದಾರಿಗಳಲ್ಲಿ ಸಂಚರಿಸುವಾಗ ಪಾವತಿಸುವ ರಸ್ತೆ ಶುಲ್ಕದಿಂದ ಆದಾಯ ಗಳಿಸಬಹುದು ಎಂದರೆ ಆಶ್ಚರ್ಯವಾಗುತ್ತದೆಯೇ? ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್ (ಇನ್ವಿಟ್ಸ್) ಅಥವಾ ಮೂಲಸೌಕರ್ಯ ಹೂಡಿಕೆ ಟ್ರಸ್ಟ್ಗಳು ಇದನ್ನೇ ಮಾಡುತ್ತವೆ. ಇವು ಹೆದ್ದಾರಿಗಳು, ಪೈಪ್ಲೈನ್ಗಳು ಮತ್ತು ವಿದ್ಯುತ್ ಮಾರ್ಗಗಳ ಮೇಲೆ ಹೂಡಿಕೆ ಮಾಡುತ್ತವೆ. ಜನರು ಬಳಸುವ ಈ ಸೌಲಭ್ಯಗಳಿಂದ ಬರುವ ಆದಾಯವನ್ನು ಇವು ಹೂಡಿಕೆದಾರರಿಗೆ ಹಂಚುತ್ತವೆ. ಇವುಗಳ ಲಾಭ ಆರ್ಇಐಟಿಗಿಂತ ಸ್ವಲ್ಪ ಹೆಚ್ಚಿರುತ್ತದೆ, ಸುಮಾರು ಶೇ 9ರಷ್ಟು ಡಿವಿಡೆಂಡ್ ನೀಡುತ್ತವೆ. ನೀವು ₹30 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ ಸರಾಸರಿ ₹22,500 ಕೈಸೇರುತ್ತದೆ.

ಪ್ರತಿ ಹೂಡಿಕೆಯೂ ತನ್ನದೇ ಆದ ಅನುಕೂಲ ಮತ್ತು ಸಣ್ಣ ಮಟ್ಟದ ಅಪಾಯವನ್ನು ಹೊಂದಿರುತ್ತದೆ. ಅಂಚೆ ಕಚೇರಿಯಂತಹ ಅತ್ಯಂತ ಸುರಕ್ಷಿತ ದಾರಿಯಿಂದ ಹಿಡಿದು, ಹೆಚ್ಚಿನ ಲಾಭ ನೀಡುವ ಇನ್ವಿಟ್ಸ್ವರೆಗೆ ನಿಮ್ಮ ಆಯ್ಕೆ ಯಾವುದಿರಬೇಕು ಎಂಬುದು ನಿಮ್ಮ ಅಗತ್ಯಕ್ಕೆ ಬಿಟ್ಟಿದ್ದು. ನಿಮಗೆ ಗೊತ್ತಿರಲಿ, ಹಣ ಉಳಿಸುವುದಷ್ಟೇ ಮುಖ್ಯವಲ್ಲ, ಅದನ್ನು ಸರಿಯಾದ ಕಡೆ ಹೂಡಿ ನಮಗಾಗಿ ದುಡಿಯುವಂತೆ ಮಾಡುವುದೂ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.