ಹಣಕಾಸು ಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ: ಎಚ್‌ಎಎಲ್‌

7

ಹಣಕಾಸು ಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ: ಎಚ್‌ಎಎಲ್‌

Published:
Updated:

ನವದೆಹಲಿ: ಲಘು ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ ತಯಾರಿಕೆ ಅಂತಿಮ ಹಂತದಲ್ಲಿದೆ. ಸಂಸ್ಥೆಯ ಹಣಕಾಸು ಪರಿಸ್ಥಿತಿ ಸಹ ಸುಧಾರಿಸುವ ವಿಶ್ವಾಸ ಇದೆ ಎಂದು ಹಿಂದೂಸ್ತಾನ್‌ ಏರೋನಾಟಿಕ್ಸ್‌ (ಎಚ್‌ಎಎಲ್‌) ಭಾನುವಾರ ಹೇಳಿದೆ.

ಎಚ್‌ಎಎಲ್‌ ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ. ತನ್ನ ನೌಕರರಿಗೆ ಸಂಬಳ ನೀಡುವುದಕ್ಕೂ ಸಂಸ್ಥೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಅಲ್ಲದೇ, ಇದೇ ವಿಷಯವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಗ್ವಾದ ನಡೆಯುತ್ತಿರುವಾಗಲೇ ಸಂಸ್ಥೆ ನೀಡಿರುವ ಈ ಸ್ಪಷ್ಟನೆಗೆ ಮಹತ್ವ ಬಂದಿದೆ.

‘ಕಂಪನಿಯು 83 ಲಘು ಯುದ್ಧ ವಿಮಾನಗಳು ಹಾಗೂ 15 ಲಘು ಯುದ್ಧ ಹೆಲಿಕಾಪ್ಟರ್‌ ತಯಾರಿಕೆಗೆ ಕಾರ್ಯಾದೇಶ ಪಡೆದಿದ್ದು, ಇವುಗಳ ತಯಾರಿಕೆ ಅಂತಿಮ ಹಂತದಲ್ಲಿದೆ. ಪ್ರಸಕ್ತ ಅಗತ್ಯಗಳಿಗೆ ಬೇಕಾಗಿರುವ ₹ 962 ಕೋಟಿಯನ್ನು ಓವರ್‌ ಡ್ರಾಫ್ಟ್‌ ಮೂಲಕ ಪಡೆಯಲಾಗಿದೆ’ ಎಂದೂ ಕಂಪನಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !