ಮೂರು ಕಂಪನಿಗಳ ಜತೆ ಸಿಂಡಿಕೇಟ್‌ ಬ್ಯಾಂಕ್‌ ಒಪ್ಪಂದ

7

ಮೂರು ಕಂಪನಿಗಳ ಜತೆ ಸಿಂಡಿಕೇಟ್‌ ಬ್ಯಾಂಕ್‌ ಒಪ್ಪಂದ

Published:
Updated:

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್‌ ಬ್ಯಾಂಕ್‌ ತನ್ನ ವಹಿವಾಟು ವಿಸ್ತರಣೆಯ ಭಾಗವಾಗಿ ಅತ್ಯತಿ ಟೆಕ್ನಾಲಜೀಸ್‌, ಎಸ್‌ಆರ್‌ಇಐ ಇಕ್ವಿಪ್‌ಮೆಂಟ್‌ ಫೈನಾನ್ಸ್‌ ಹಾಗೂ ಎಸ್‌ಬಿಐ ಲೈಫ್‌ ಇನ್ಶೂರೆನ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಕಿರು, ಸಣ್ಣ ಉದ್ಯಮಗಳಿಗೆ (ಎಂಎಸ್‌ಇ) ₹10 ಲಕ್ಷದವರೆಗೆ ಸಾಲ ಸೌಲಭ್ಯ ನೀಡುವ ಉದ್ದೇಶದಿಂದ ಅತ್ಯತಿ ಟೆಕ್ನಾಲಜೀಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ‘ಎಂಎಸ್‌ಇ’ಗಳನ್ನು ಗುರುತಿಸುವ, ಅವುಗಳನ್ನು ಬ್ಯಾಂಕ್‌ನೊಂದಿಗೆ ಸಂಪರ್ಕಿಸುವ ಹಾಗೂ ಸಾಲ ನಿರ್ವಹಣೆ ಮಾಡುವ ಕೆಲಸಗಳನ್ನು ಅತ್ಯತಿ ಮಾಡಲಿದೆ.

ಆದ್ಯತಾ ವಲಯಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಎಸ್‌ಆರ್‌ಇಐ ಇಕ್ವಿಪ್‌ಮೆಂಟ್‌ ಫೈನಾನ್ಸ್‌ ಜತೆ ಒಪ್ಪಂದ ಮಾಡಿಕೊಂಡಿದೆ. ಬ್ಯಾಂಕ್‌ನ ಶುಲ್ಕ ಆಧಾರಿತ ವರಮಾನ ಹೆಚ್ಚಿಸುವ ಉದ್ದೇಶದಿಂದ ಹಾಗೂ ಗ್ರಾಹಕರಿಗೆ ವಿಸ್ತೃತವಾದ ಆಯ್ಕೆಗಳನ್ನು ನೀಡಲು ಎಸ್‌ಬಿಐ ಲೈಫ್‌ ಜತೆ ಒಪ್ಪಂದ ಮಾಡಿಕೊಂಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !