ಬುಧವಾರ, ಏಪ್ರಿಲ್ 21, 2021
24 °C

ದಾದಿಯರ ಹೊರೆ ತಪ್ಪಿಸಲು ಸಾಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾದಿಯರ ಹೊರೆಯನ್ನು ಕೆಡಿಮೆ ಮಾಡುವ ಉದ್ದೇಶದಿಂದ ನಗರದ ರೈನ್‌ ಬೊ ಮಕ್ಕಳ ಆಸ್ಪತ್ರೆಯು ನೂತನವಾದ ಅಲ್ಫಾಕೇರ್‌ ಸಾಧನವನ್ನು ಪರಿಚಯಿಸಿದೆ.

ದಿನದ 24 ಗಂಟೆಯೂ ಸೇವೆ ಒದಗಿಸುವ ದಾದಿಯರು ಆಸ್ಪತ್ರೆಯ ಬೇರೆ ಕೆಲಸಗಳನ್ನು ಕೂಡ ಮಾಡುತ್ತಾರೆ. ಇದರ ಜೊತೆಗೆ ರೋಗಿಗಳ ಅಗತ್ಯಗಳನ್ನು ತಿಳಿದುಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ. ಪ್ರತಿ ಬಾರಿ ವಾರ್ಡ್‌ಗಳಿಗೆ ಹೋಗಿ ರೋಗಿಯನ್ನು ಮಾತನಾಡಿಸಲು ಕಷ್ಟವಾಗದಂತೆ ಆಧುನಿಕ ಉಪಕರಣವೊಂದನ್ನು ಆಸ್ಪತ್ರೆ ಬಳಸಿಕೊಳ್ಳುತ್ತಿದೆ.

ಅಲ್ಫಾಕೇರ್‌ ಸಾಧನದಿಂದ ದಾದಿಯರು ರೋಗಿಗಳ ಅಗತ್ಯಗಳನ್ನು ಕುಳಿತಲ್ಲಿಯೇ ತಿಳಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ತುರ್ತು ಸಂದರ್ಭದಲ್ಲಿ ಈ ಸಾಧನದ ಮೂಲಕ ಸಂದೇಶ ರವಾನಿಸಬಹುದು. ರೋಗಿಗಳ ಅಗತ್ಯಗಳನ್ನು ಆಯಾ ವಿಭಾಗಗಳಿಗೆ ನೇರವಾಗಿ ರವಾನಿಸುವ ಕೆಲಸವನ್ನು ಅಲ್ಫಾಕೇರ್ ಮಾಡಲಿದೆ. ನರ್ಸ್‌ಗಳ ಅಗತ್ಯ ಇಲ್ಲದೇ ಆಯಾ ವಿಭಾಗಗಳು ನೇರವಾಗಿ ರೋಗಿಗಳ ಆರೈಕೆ ಮಾಡಬಹುದು.

ಆಹಾರ, ಸ್ವಚ್ಛತೆ, ಎಲೆಕ್ಟ್ರಿಕಲ್‌ ಹೀಗೆ ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ಅಗತ್ಯಗಳನ್ನು ರೋಗಿಗಳು ಇದರ ಮೂಲಕ ಪಡೆದುಕೊಳ್ಳಬಹುದು. ನಿರ್ದಿಷ್ಟ ವಿಭಾಗಗಳಿಗೆ ಕೋರಿಕೆ ಕಳಿಸಬೇಕಾಗುತ್ತದೆ. ಈ ರೀತಿಯ ಕೆಲಸಗಳಿಗೆ ನರ್ಸ್‌ಗಳ ಸಹಾಯ ಪಡೆದುಕೊಳ್ಳುವುದು ತಪ್ಪಲಿದೆ. ನರ್ಸ್‌ಗಳ ಅಗತ್ಯ ಇದ್ದಲ್ಲಿ ಅವರನ್ನು ಕೂಡ ಕರೆಸಿಕೊಳ್ಳಬಹುದು. ಆಯಾ ಸೇವೆಯ ಆಯ್ಕೆಯನ್ನು ಉಪಕರಣದ ಮೇಲೆ ನೀಡಲಾಗಿದ್ದು, ಆ ಬಟನ್‌ ಒತ್ತಿದರೆ ಕೋರಿಕೆ ತಲುಪಲಿದೆ.

ರೋಗಿಯ ಬೆಡ್‌ ಪಕ್ಕದಲ್ಲಿಯೇ ಇದನ್ನು ಅಳವಡಿಸಲಾಗಿದೆ. ಚಿಕ್ಕದಾದ ಈ ಉಪಕರಣವನ್ನು ಅದರ ಮೇಲಿರುವ ಚಿತ್ರವನ್ನು ಗುರುತಿಸಿ ಸುಲಭವಾಗಿ ಬಳಸಬಹುದು. ಆಸ್ಪತ್ರೆಯಲ್ಲಿರುವ ರೋಗಿಗಳ ಅಂಕಿ ಸಂಖ್ಯೆಯನ್ನು ಪಡೆದುಕೊಳ್ಳಲು ಕೂಡ ಈ ಉಪಕರಣ ಸಹಾಯ ಮಾಡಲಿದೆ.

‘ಈ ಉಪಕರಣದಿಂದ ನರ್ಸ್‌ಗಳ ಮೇಲಿದ್ದ ಶೇ 40ರಷ್ಟು ಹೊರೆ ಕಡಿಮೆಯಾಗಿದೆ. ಈ ಉಪಕರಣವನ್ನು ಅಗತ್ಯಗಳಿಗೆ ತಕ್ಕಂತೆ ಸುಧಾರಣೆ ಮಾಡಿಕೊಳ್ಳುವ ಅವಕಾಶ ಇದೆ’ ಎನ್ನುತ್ತಾರೆ ಮಾರತ್ತಳ್ಳಿಯ ರೈನ್‌ ಬೊ ಮಕ್ಕಳ ಆಸ್ಪತ್ರೆಯ ಮುಖ್ಯಸ್ಥೆ ಡಾ.ರೇಷ್ಮಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು