ಎಸ್‌ಎಂಇ ನೆರವಿಗೆ ‘ಪಿಸಿಆರ್‌’ ವ್ಯವಸ್ಥೆ

7

ಎಸ್‌ಎಂಇ ನೆರವಿಗೆ ‘ಪಿಸಿಆರ್‌’ ವ್ಯವಸ್ಥೆ

Published:
Updated:
Deccan Herald

ಮುಂಬೈ: ‘ಪಬ್ಲಿಕ್‌ ಕ್ರೆಡಿಟ್‌ ರೆಜಿಸ್ಟ್ರಿ (ಪಿಸಿಆರ್‌) ವ್ಯವಸ್ಥೆಯ ಮೂಲಕ ಎಸ್‌ಎಂಇ ಗಳಿಗೆ ಸಾಲ ನೀಡುವುದೇ ಹೆಚ್ಚು ಸೂಕ್ತ ಎನ್ನುವುದು ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)
ಅಭಿಪ್ರಾಯವಾಗಿದೆ’ ಎಂದು ಡೆಪ್ಯುಟಿ ಗವರ್ನರ್‌ ವಿರಲ್‌ ಆಚಾರ್ಯ ತಿಳಿಸಿದ್ದಾರೆ.

ನಷ್ಟದಲ್ಲಿರುವ ಉದ್ಯಮಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡಲು ತನ್ನ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಕೇಂದ್ರೀಯ ಮಂಡಳಿಯು ಆರ್‌ಬಿಐಗೆ ಸಲಹೆ ನೀಡಿದ ಒಂದು ತಿಂಗಳ ಬಳಿಕ ಆಚಾರ್ಯ ಅವರು ಈ ಹೇಳಿಕೆ ನೀಡಿದ್ದಾರೆ.

ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದ ಸಣ್ಣ ಉದ್ಯಮ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದೆ. ಹೀಗಾಗಿ ಇವುಗಳ ಆರ್ಥಿಕ ಸ್ಥಿತಿ ಸುಧಾರಿಸಲು ಹೆಚ್ಚಿನ ನೆರವು ನೀಡುವಂತೆ ಕೇಂದ್ರ ಸರ್ಕಾರ ‘ಆರ್‌ಬಿಐ ಮೇಲೆ ಒತ್ತಡ ತಂದಿತ್ತು.

‘ಉದ್ಯಮಗಳು ಸಾಲ ಬಾಕಿ ಉಳಿಸಿಕೊಂಡಾಗ ಅದನ್ನು ಮನ್ನಾ ಮಾಡುವಂತೆ ಅಥವಾ ಮರುಪಾವತಿಗೆ 9 ತಿಂಗಳು ಅವಕಾಶ ನೀಡುವಂತೆ ಕೇಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮೂಲದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ನಾವು ಚಿಂತನೆ ನಡೆಸುತ್ತಿದ್ದೇವೆ’ ಎಂದು ಐಐಟಿ ಬಾಂಬೆಯಲ್ಲಿನ ವಾರ್ಷಿಕ ತಂತ್ರಜ್ಞಾನ ಮೇಳದಲ್ಲಿ ಅವರು ಹೇಳಿದ್ದಾರೆ.

‘ಉದ್ಯಮಗಳಿಗೆ ಸುಮ್ಮನೇ ನಗದು ನೀಡುವುದಕ್ಕಿಂತಲೂ ವಿವೇಕದಿಂದ ಹಂಚಿಕೆ ಮಾಡುವ ಅಗತ್ಯವಿದೆ’ ಎಂದು ವಿರಲ್‌ ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕ ನಗದು ನೋಂದಣಿ ವ್ಯವಸ್ಥೆಯಲ್ಲಿ ಸಾಲಗಾರರ ಸಮಗ್ರ ಮಾಹಿತಿ ಇರಲಿದೆ. ಸಾಲ ನೀಡಿಕೆ, ಬಾಕಿ, ಮರುಪಾವತಿ, ಉದ್ದೇಶಪೂರ್ವ ಸುಸ್ತಿದಾರರು, ಸಾಲ ಪಡೆದವರ ವಿರುದ್ಧ ಯಾವುದಾದರೂ ಪ್ರಕರಣಗಳಿದ್ದರೆ, ಉದ್ಯಮಗಳಿಗೆ ಸಿಗುತ್ತಿರುವ ಸಾಲದ ಪ್ರಮಾಣ ಹೀಗೆ ಪ್ರತಿಯೊಂದು ಮಾಹಿತಿಯೂ ಇಲ್ಲಿ ಸಿಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !