ನಾಗೇಶ್ ಕುಮಾರ್, ಮೈಸೂರು

ಪ್ರಶ್ನೆ: ನಾನು ಇತ್ತೀಚಿನ ಕೆಲವು ವರ್ಷಗಳಿಂದ ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹರಿಸುತ್ತಿದ್ದೇನೆ. ಇಂದು ಕ್ರೆಡಿಟ್ ಕಾರ್ಡ್ ವಿತರಿಸುವ ಕಂಪನಿಗಳು ಬಹಳಷ್ಟಿವೆ. ಇದಲ್ಲದೆ ಕುಟುಂಬದ ಸದಸ್ಯರಿಗೆ ಖರ್ಚು ಮಾಡಲು ಹೆಚ್ಚುವರಿ ಕಾರ್ಡ್ ನೀಡುವ ಪದ್ಧತಿಯೂ ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಆದರೆ ಮುಖ್ಯ ಕಾರ್ಡ್ಧಾರಕರಿಗೆ ಖರ್ಚಿನ ನಿಯಂತ್ರಣ, ಪ್ರತ್ಯೇಕ ಮಿತಿಯ ನಿಗದಿ, ರಿವಾರ್ಡ್ ಪಾಯಿಂಟ್ಗಳ ಹಂಚಿಕೆ ಹಾಗೂ ಇಎಂಐ ಇತ್ಯಾದಿ ಪಾವತಿ ವಿಧಾನಗಳ ಬಗ್ಗೆ ನನಗೆ ಹಲವಾರು ಗೊಂದಲಗಳಿವೆ. ಈ ಹೆಚ್ಚುವರಿ ಕಾರ್ಡ್ ಬಳಕೆದಾರರು ಮಾಡಿದ ಖರ್ಚುಗಳಿಗೆ ಯಾರು ಕಾನೂನುಬದ್ಧವಾಗಿ ಹೊಣೆಗಾರರು? ಪ್ರತ್ಯೇಕ ಖರ್ಚಿನ ಮಿತಿ ನಿಗದಿ ಮಾಡಿದರೂ, ಕೆಲವು ಸಂದರ್ಭಗಳಲ್ಲಿ ಅದರ ಒಟ್ಟು ಮಿತಿ ದಾಟಿದಾಗ ನಾವು ದಂಡ ಪಾವತಿಸಬೇಕಾಗುತ್ತದೆಯೇ? ರಿವಾರ್ಡ್ ಪಾಯಿಂಟ್ ಹಾಗೂ ಕ್ಯಾಶ್ ಬ್ಯಾಕ್ ಮುಖ್ಯ ಕಾರ್ಡ್ಗೆ ಮಾತ್ರ ಸೇರುವುದೇ ಅಥವಾ ಹೆಚ್ಚುವರಿ ಬಳಕೆದಾರರಿಗೂ ಲಾಭ ಸಿಗುತ್ತದೆಯೇ? ಇದರ ಪಾವತಿ ವಿಳಂಬವಾದರೆ ಯಾರ ಕ್ರೆಡಿಟ್ ಮೌಲ್ಯಾಂಕದ (ಸಿಬಿಲ್ ಅಂಕ) ಮೇಲೆ ಪರಿಣಾಮ ಬೀಳುತ್ತದೆ? ಜವಾಬ್ದಾರಿಯುತ ಗ್ರಾಹಕರ ದೃಷ್ಟಿಯಿಂದ ಬ್ಯಾಂಕ್ಗಳು ನೀಡುವ ಹೆಚ್ಚುವರಿ ಕಾರ್ಡ್ ಪಡೆದುಕೊಳ್ಳುವುದು ಸೂಕ್ತವೇ ಅಥವಾ ಪ್ರತ್ಯೇಕವಾದ ಕಾರ್ಡ್ ಪಡೆಯುವುದು ಸೂಕ್ತವೇ. ಇದರ ನಿಯಂತ್ರಣಕ್ಕೆ ಕುಟುಂಬದ ಆರ್ಥಿಕ ಶಿಸ್ತಿಗೆ ಅನುಕೂಲವಾಗುವಂತೆ ಯಾವ ರೀತಿಯಲ್ಲಿ ಯೋಜನೆ ರೂಪಿಸಬೇಕು?

ಉತ್ತರ: ಕ್ರೆಡಿಟ್ ಕಾರ್ಡ್ ವ್ಯವಸ್ಥೆಯಲ್ಲಿ ‘ಹೆಚ್ಚುವರಿ ಕಾರ್ಡ್’ ಎಂಬುದು ಮುಖ್ಯ ಕಾರ್ಡ್ಧಾರಕರ ಖಾತೆಯೊಂದಿಗೆ ಸಂಪರ್ಕ ಹೊಂದಿರುವ ಒಂದು ಸೌಲಭ್ಯ. ಸಾಮಾನ್ಯವಾಗಿ ಕುಟುಂಬದ ಸದಸ್ಯರು, ಪತಿ-ಪತ್ನಿ, ಮಕ್ಕಳು ಅಥವಾ ಪೋಷಕರು ಪ್ರತ್ಯೇಕವಾಗಿ ಹೊಸ ಕ್ರೆಡಿಟ್ ಕಾರ್ಡ್ ಪಡೆಯದೆ, ಮುಖ್ಯ ಕಾರ್ಡ್ನ ಮಿತಿಯೊಳಗೆಯೇ ಖರ್ಚು ಮಾಡಲು ಈ ವ್ಯವಸ್ಥೆಯನ್ನು ಬಳಸುತ್ತಾರೆ. ಆದರೆ ಇಲ್ಲಿ ಒಂದು ಮುಖ್ಯ ವಿಷಯವೆಂದರೆ, ಹೆಚ್ಚುವರಿ ಕಾರ್ಡ್ ಬಳಕೆದಾರರು ಮಾಡಿದ ಎಲ್ಲಾ ಖರ್ಚುಗಳ ಅಂತಿಮ ಕಾನೂನುಬದ್ಧ ಹೊಣೆಗಾರಿಕೆ ಮುಖ್ಯ ಕಾರ್ಡ್ಧಾರಕರ ಮೇಲೆಯೇ ಇರುತ್ತದೆ. ಅಂದರೆ ಬ್ಯಾಂಕ್ ಅಥವಾ ಕಾರ್ಡ್ ಕಂಪನಿ ಹಣ ವಸೂಲಾತಿಗೆ ಮುಖ್ಯ ಖಾತೆದಾರರನ್ನೇ ಸಂಪರ್ಕಿಸುತ್ತದೆ. ಆದ್ದರಿಂದ ಹೆಚ್ಚುವರಿ ಕಾರ್ಡನ್ನು ಆರ್ಥಿಕ ಶಿಸ್ತು, ಜವಾಬ್ದಾರಿ ಹಾಗೂ ಖರ್ಚಿನ ಅರಿವು ಇರುವ ಸದಸ್ಯರಿಗೆ ಮಾತ್ರ ನೀಡುವುದು ಉತ್ತಮ. ಒಂದು ವೇಳೆ ಕೊಡುವುದು ಅನಿವಾರ್ಯವಾದಾಗ ಈ ಮಾಹಿತಿಯ ತಿಳಿವಳಿಕೆ ಮೂಡಿಸಬೇಕು.

ಬಹುತೇಕ ಬ್ಯಾಂಕ್ಗಳು ಹೆಚ್ಚುವರಿ ಕಾರ್ಡ್ಗಳಿಗೆ ಪ್ರತ್ಯೇಕ ಮಿತಿ ನಿಗದಿ ಮಾಡುವ ಅವಕಾಶವನ್ನು ಕಾರ್ಡ್ ವಿತರಿಸುವ ಸಂಸ್ಥೆಗೆ ಹಾಗೂ ಮುಖ್ಯ ಕಾರ್ಡ್ದಾರರಿಗೆ ನೀಡುತ್ತವೆ. ಉದಾಹರಣೆಗೆ ಒಟ್ಟು ಕಾರ್ಡ್ ಮಿತಿ ₹5 ಲಕ್ಷ ಇದ್ದರೂ, ಹೆಚ್ಚುವರಿ ಕಾರ್ಡ್ಗೆ ₹50,000 ಅಥವಾ ₹1 ಲಕ್ಷದವರೆಗೆ ಮಾತ್ರ ಖರ್ಚು ಮಿತಿ ಹಾಕಬಹುದು.

ಬಿಲ್ ಪಾವತಿಯನ್ನು ನಿಗದಿತ ದಿನಾಂಕದೊಳಗೆ ಮಾಡದಿದ್ದರೆ ವಿಳಂಬ ಶುಲ್ಕ, ಹಣಕಾಸು ಶುಲ್ಕ ಹಾಗೂ ಬಡ್ಡಿ ಸಹಜವಾಗಿ ವಿಧಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಖರ್ಚಾದರೆ ಹೆಚ್ಚುವರಿ ಮಿತಿ ಬಳಕೆ ಶುಲ್ಕವನ್ನೂ ಬ್ಯಾಂಕ್ ವಿಧಿಸಬಹುದು. ಆದ್ದರಿಂದ ಮುಖ್ಯ ಕಾರ್ಡ್ಧಾರಕರಾಗಿ ನಿಮ್ಮ ಮಾಸಿಕ ಸ್ಟೇಟ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಸೂಚನೆಗಳು ಹಾಗೂ ಖರ್ಚಿನ ವಿವರಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಅತ್ಯಂತ ಅಗತ್ಯ. ಇಂತಹ ಮಾಹಿತಿಯ ಬಗ್ಗೆ ನಿಗಾ ಇಡುವುದು ಮತ್ತು ಕಾರ್ಡ್ ದುರ್ಬಳಕೆ ಆಗದ ರೀತಿ ಇತರ ಕಾರ್ಡ್ದಾರರಿಗೂ ಅರಿವು ಮೂಡಿಸುವುದು ಆದ್ಯ ಕರ್ತವ್ಯ.

ರಿವಾರ್ಡ್ ಅಂಕಗಳು, ಕ್ಯಾಶ್ ಬ್ಯಾಕ್ ಸೌಲಭ್ಯಗಳು ಹಾಗೂ ಪ್ರವಾಸ ಸಂಬಂಧಿತ ಸೌಲಭ್ಯಗಳ ವಿಷಯದಲ್ಲಿ ಪ್ರತಿ ಬ್ಯಾಂಕ್ನ ನಿಯಮಗಳು ಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಹೆಚ್ಚುವರಿ ಕಾರ್ಡ್ ಮೂಲಕ ಮಾಡಿದ ಖರ್ಚಿನಿಂದ ಲಭಿಸುವ ರಿವಾರ್ಡ್ ಅಂಕಗಳನ್ನು ಮುಖ್ಯ ಕಾರ್ಡ್ ಖಾತೆಗೆ ಸೇರಿಸಲಾಗುತ್ತದೆ. ಆದರೆ ಕೆಲವು ಕಾರ್ಡ್ಗಳಲ್ಲಿ ಹೆಚ್ಚುವರಿ ಕಾರ್ಡ್ ಬಳಕೆದಾರರಿಗೂ ವಿಮಾನ ನಿಲ್ದಾಣಗಳ ವಿಶ್ರಾಂತಿ ಕೊಠಡಿ ಪ್ರವೇಶ, ವಿಮಾ ರಕ್ಷಣೆ ಅಥವಾ ನಿರ್ದಿಷ್ಟ ಮಟ್ಟದ ಖರ್ಚು ಪೂರ್ಣಗೊಳಿಸಿದ ನಂತರ ದೊರೆಯುವ ವಿಶೇಷ ಸೌಲಭ್ಯಗಳನ್ನು ನೀಡುವ ವ್ಯವಸ್ಥೆಯೂ ಇರುತ್ತದೆ. ಆದ್ದರಿಂದ ಯಾವುದೇ ಹೆಚ್ಚುವರಿ ಕಾರ್ಡ್ ಪಡೆಯುವ ಮೊದಲು ಅದರ ಸೌಲಭ್ಯಗಳು, ನಿಯಮಗಳು ಹಾಗೂ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಸ್ಪಷ್ಟವಾಗಿ ಪರಿಶೀಲಿಸುವುದು ಅತ್ಯಂತ ಅಗತ್ಯ. ಗ್ರಾಹಕರಿಗೆ ಇಂತಹ ಸೌಲಭ್ಯಗಳ ಮೂಲ ಹಾಗೂ ಅವುಗಳನ್ನು ನೀಡುವ ವಿಧಾನ ಸ್ಪಷ್ಟವಾಗಿರಬೇಕು. ಆರ್ಬಿಐ ಹೊರಡಿಸಿರುವ ಸುತ್ತೋಲೆಗಳ ಮಾಹಿತಿಯಂತೆ, ಈ ಸೌಲಭ್ಯಗಳಿಗೆ ಸಂಬಂಧಿಸಿದ ಲೆಕ್ಕಪತ್ರ ಪ್ರಕ್ರಿಯೆಯನ್ನು ಕಾರ್ಡ್ ನೀಡುವ ಸಂಸ್ಥೆಯ ಲೆಕ್ಕ ಪುಸ್ತಕಗಳಲ್ಲಿ ಪರಿಶೀಲಿಸಬಹುದಾದ ರೀತಿಯಲ್ಲಿ ನಿರ್ವಹಿಸಬೇಕು. ಈ ಎಲ್ಲಾ ಪ್ರಯೋಜನಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಕಾರ್ಡ್ ನೀಡುವ ಸಂಸ್ಥೆಯ ಜಾಲತಾಣದಲ್ಲಿ ಪ್ರಕಟಿಸಬೇಕು ಹಾಗೂ ಅದರ ಪ್ರತಿಯನ್ನು ಕಾರ್ಡ್ಧಾರಕರಿಗೂ ಒದಗಿಸಬೇಕು. ಹೀಗಾಗಿ ಇಂತಹ ನಿರ್ದಿಷ್ಟ ಮಾಹಿತಿಯನ್ನು ನೀವು ವೆಬ್ಸೈಟ್ನಲ್ಲಿ ನೋಡಿ ಖಾತರಿಪಡಿಸಿಕೊಳ್ಳಬಹುದು.

ಪಾವತಿ ವಿಳಂಬವಾದರೆ ಅದರ ನೇರ ಪರಿಣಾಮ ಮುಖ್ಯ ಕಾರ್ಡ್ಧಾರಕರ ಕ್ರೆಡಿಟ್ ರೇಟಿಂಗ್ ಮೇಲೆ ಬೀಳುತ್ತದೆ. ಹೆಚ್ಚುವರಿ ಕಾರ್ಡ್ ಬಳಕೆದಾರರ ಹೆಸರಿನಲ್ಲಿ ಪ್ರತ್ಯೇಕ ಆರ್ಥಿಕ ಹೊಣೆಗಾರಿಕೆ ಸಾಮಾನ್ಯವಾಗಿ ಇರುವುದಿಲ್ಲ. ಆದ್ದರಿಂದ ಮುಖ್ಯ ಕಾರ್ಡ್ಧಾರಕರೇ ತಮ್ಮ ಹಣಕಾಸು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ವಿಶೇಷ ಜಾಗ್ರತೆ ವಹಿಸಬೇಕು. ಕುಟುಂಬದ ಆರ್ಥಿಕ ಶಿಸ್ತಿನ ದೃಷ್ಟಿಯಿಂದ, ಕಡಿಮೆ ಆದಾಯ ಹೊಂದಿರುವ ಅಥವಾ ವಿದ್ಯಾರ್ಥಿ ಹಂತದಲ್ಲಿರುವ ಸದಸ್ಯರಿಗೆ ಹೆಚ್ಚುವರಿ ಕಾರ್ಡ್ ಉಪಯುಕ್ತವಾಗಬಹುದು. ಆದರೆ ಸ್ವಂತ ಆದಾಯ, ಸ್ವತಂತ್ರ ಖರ್ಚು ವೆಚ್ಚಗಳ ಬಗ್ಗೆ ಅರಿವು ಇದ್ದವರು ಅವರ ವೈಯಕ್ತಿಕ ಹೆಸರಲ್ಲೇ ಪ್ರತ್ಯೇಕ ಕಾರ್ಡ್ ಹೊಂದುವುದು ಉತ್ತಮ ಆಯ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.