ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಸಾಲ ನೀಡಿಕೆ, ಠೇವಣಿ ಸಂಗ್ರಹ ಹೆಚ್ಚಳ

Last Updated 5 ಮಾರ್ಚ್ 2021, 12:16 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ಗಳ ಸಾಲ ನೀಡಿಕೆ ಮತ್ತು ಠೇವಣಿ ಸಂಗ್ರಹವು ಡಿಸೆಂಬರ್‌ 5ರಿಂದ 18ರ ನಡುವಿನ ಅವಧಿಯಲ್ಲಿ ಹೆಚ್ಚಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕ್‌ ಸಾಲ ನೀಡಿಕೆಯಲ್ಲಿ ಶೇಕಡ 6.05ರಷ್ಟು ಹೆಚ್ಚಾಗಿದ್ದು ₹ 105.49 ಲಕ್ಷ ಕೋಟಿಗೆ ತಲುಪಿದೆ. ಅಂತೆಯೇ ಠೇವಣಿ ಸಂಗ್ರಹವು ಶೇ 11.33ರಷ್ಟು ಹೆಚ್ಚಾಗಿ ₹ 144.82 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

2019ರ ಡಿಸೆಂಬರ್‌ 20ಕ್ಕೆ ಕೊನೆಗೊಂಡ 15 ದಿನಗಳ ಅಂತ್ಯಕ್ಕೆ ಬ್ಯಾಂಕ್‌ ಸಾಲ ನೀಡಿಕೆ ಮೊತ್ತ ₹ 99.47 ಲಕ್ಷ ಕೋಟಿ ಹಾಗೂ ಠೇವಣಿ ₹ 130.09 ಲಕ್ಷ ಕೋಟಿ ಇತ್ತು.

ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ನೀಡುವ ಸಾಲದ ಪ್ರಮಾಣ ಶೇ 7.1ರಿಂದ ಶೇ 7.4ಕ್ಕೆ ಹೆಚ್ಚಳ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT