ಕ್ರೆಡಿಟ್ ಅಂಕವನ್ನು ಹಲವರು ಆಗಾಗ ಪರಿಶೀಲಿಸುತ್ತಾರಾದರೂ, ಕ್ರೆಡಿಟ್ ವರದಿಯನ್ನು ಸಮಗ್ರವಾಗಿ ಓದುವವರ ಸಂಖ್ಯೆ ಕಡಿಮೆ. ಅದನ್ನು ಓದುವುದರ ಅಗತ್ಯ ಎಷ್ಟಿದೆ, ಅದರ ಮಹತ್ವ ಏನು ಎಂಬುದರ ವಿವರ ಇಲ್ಲಿದೆ

ಹಣಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಬಹುತೇಕ ಕುಟುಂಬಗಳಲ್ಲಿ ಬಹಳ ಎಚ್ಚರಿಕೆಯಿಂದಲೇ ತೆಗೆದು ಕೊಳ್ಳಲಾಗುತ್ತದೆ. ಮನೆ ಖರೀದಿ, ಮಕ್ಕಳ ಶಿಕ್ಷಣ, ಉದ್ದಿಮೆ ವಿಸ್ತರಿಸುವ ಯೋಜನೆಗೆ ಸಾಲ ಬೇಕಾದಾಗಲೆಲ್ಲ ಬಹಳ ಅಗತ್ಯವಾಗಿ ಪರಿಗಣನೆಗೆ ಬರುವುದು ಸಾಲ ಕೋರುವ ವ್ಯಕ್ತಿಯ ಕ್ರೆಡಿಟ್ ವಿವರ. ಆ ವ್ಯಕ್ತಿಯ ಕ್ರೆಡಿಟ್ ವರದಿಯು ಈ ವಿವರನ್ನು ಹೊಂದಿರುತ್ತದೆ.

ಕ್ರೆಡಿಟ್ ಸ್ಕೋರ್ ಅಥವಾ ಕ್ರೆಡಿಟ್ ಅಂಕ ಎಂಬ ಪದವನ್ನು ಬಹುತೇಕರು ಕೇಳಿರುತ್ತಾರೆ. ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಕುರಿತ ಮಾತುಗಳ ಸಂದರ್ಭದಲ್ಲಿ ಇದರ ಉಲ್ಲೇಖ ಆಗಿರುತ್ತದೆ. ಕ್ರೆಡಿಟ್ ಅಂಕವನ್ನು ಹೇಳುವ ವರದಿಯು ವಿಸ್ತೃತವಾದ ವಿವರಗಳನ್ನು ಒಳಗೊಂಡಿರುತ್ತದೆ. ಈ ವರದಿಯು ವ್ಯಕ್ತಿಯ ಕ್ರೆಡಿಟ್ ಚಿತ್ರಣವನ್ನು ಒಳಗೊಂಡಿರುತ್ತದೆ, ವ್ಯಕ್ತಿಯು ಪಡೆದ ಸಾಲಗಳ ವಿವರವು ಹಣಕಾಸು ವ್ಯವಸ್ಥೆಯಲ್ಲಿ ಹೇಗೆ ದಾಖಲಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ.

ಕ್ರೆಡಿಟ್ ವರದಿಯು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಮಾತ್ರ ಆಸಕ್ತಿ ಮೂಡಿಸುವಂಥದ್ದಲ್ಲ. ಈ ವರದಿಯು ವ್ಯಕ್ತಿಗೆ ತನ್ನ ಹಣಕಾಸಿನ ಇತಿಹಾಸದ ಬಗ್ಗೆ ಹೆಚ್ಚು ತಿಳಿದುಕೊಳ್ಳಲಿಕ್ಕೂ ಸಹಾಯ ಮಾಡುತ್ತದೆ. ವರದಿಯಲ್ಲಿ ಏನಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡ ನಂತರದಲ್ಲಿ ಅದನ್ನು ಓದುವುದು ಸುಲಭವಾಗುತ್ತದೆ. ಅಲ್ಲದೆ, ಆ ವರದಿಯನ್ನು ಹಣಕಾಸಿನ ಯೋಜನೆಗಳನ್ನು ಸಿದ್ಧಪಡಿಸುವಾಗ ಬಳಸಿಕೊಳ್ಳುವು ದಕ್ಕೂ ಆಗುತ್ತದೆ.

ಅಂಕದ ಹಿಂದಿನ ಕತೆ: ಕ್ರೆಡಿಟ್ ಅಂಕವು ವ್ಯಕ್ತಿಯ ಸಾಲದ ಚಿತ್ರಣವನ್ನು ಮೂರು ಅಂಕಿಗಳಲ್ಲಿ ಹೇಳುತ್ತದೆ. ಸಾಲಕ್ಕಾಗಿ ವ್ಯಕ್ತಿಯೊಬ್ಬ ಅರ್ಜಿ ಸಲ್ಲಿಸಿದಾಗ ಹಣಕಾಸು ಸಂಸ್ಥೆಗಳು ಅರ್ಜಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಈ ಅಂಕವನ್ನು ಕೂಡ ಪರಿಗಣಿಸುತ್ತವೆ. ಆದರೆ ಅಂಕವು ಎಲ್ಲವನ್ನೂ ಹೇಳುವುದಿಲ್ಲ. ವ್ಯಕ್ತಿಯ ಸಾಲಗಳಿಗೆ ಸಂಬಂಧಿಸಿದ ವಿವರಗಳು ವರದಿಯಲ್ಲಿ ಅಡಕವಾಗಿರುತ್ತವೆ. ವ್ಯಕ್ತಿ ಪಡೆದಿರುವ ಸಾಲದ ಖಾತೆಗಳ ವಿವರ, ಸಾಲದ ಮರುಪಾವತಿ ಹೇಗಿತ್ತು ಎಂಬುದರ ವಿವರ, ವ್ಯಕ್ತಿಯ ಕೆಲವು ವೈಯಕ್ತಿಕ ವಿವರಗಳು, ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆತ ಎಲ್ಲೆಲ್ಲಿ ವಿಚಾರಿಸಿದ್ದ ಎಂಬುದರ ವಿವರಗಳು ವರದಿಯಲ್ಲಿರುತ್ತವೆ. ಚುಟುಕಾಗಿ ಹೇಳಬೇಕು ಎಂದಾದರೆ, ಕ್ರೆಡಿಟ್ ವರದಿಯು ಪೂರ್ಣ ಚಿತ್ರಣ ನೀಡುತ್ತದೆ, ಕ್ರೆಡಿಟ್ ಅಂಕವು ಆ ಪೂರ್ಣ ಚಿತ್ರಣದ ಒಂದು ನೋಟವನ್ನು ಮಾತ್ರ ಒದಗಿಸುತ್ತದೆ.

ಹೀಗಾಗಿ ವ್ಯಕ್ತಿಗಳು ತಮ್ಮ ಕ್ರೆಡಿಟ್ ಅಂಕವನ್ನು ಗಮನಿಸುವುದು ಮಾತ್ರವಲ್ಲದೆ, ಕ್ರೆಡಿಟ್ ವರದಿಯನ್ನು ಕೂಡ ಓದಿ ಅರ್ಥ ಮಾಡಿಕೊಳ್ಳಬೇಕು. ಹಣಕಾಸು ಸಂಸ್ಥೆಗಳು ವ್ಯಕ್ತಿಯ ಸಾಲಗಳ ಬಗ್ಗೆ ಯಾವ ಬಗೆಯಲ್ಲಿ ವಿವರ ಒದಗಿಸಿವೆ, ದಾಖಲೆಗಳಲ್ಲಿ ಅದು ಹೇಗೆ ಕಾಣಿಸುತ್ತಿದೆ ಎಂಬುದನ್ನು ವರದಿಯು ಒಳಗೊಂಡಿರುತ್ತದೆ.

ಕ್ರೆಡಿಟ್ ವರದಿಯಲ್ಲಿ ಮೊದಲ ಭಾಗವು ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಒಳಗೊಂಡಿರುತ್ತದೆ. ವ್ಯಕ್ತಿಯ ಹೆಸರು, ಜನ್ಮ ದಿನಾಂಕ, ಪ್ಯಾನ್ ವಿವರ, ಪಾಸ್ಪೋರ್ಟ್ ಅಥವಾ ಮತದಾರರ ಚೀಟಿಯ ವಿವರಗಳು ಅದರಲ್ಲಿ ಇರಬಹುದು. ವ್ಯಕ್ತಿಯ ಸಂಪರ್ಕ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇ–ಮೇಲ್ ವಿಳಾಸವನ್ನೂ ಅದು ಒಳಗೊಂಡಿರಬಹುದು.

ಇವೆಲ್ಲ ಬಹಳ ಮೂಲಭೂತವಾದ ವಿವರಗಳು ಅನ್ನಿಸಬಹುದು. ಆದರೆ ಇವು ಮುಖ್ಯ ಪಾತ್ರ ವಹಿಸುತ್ತವೆ. ವರದಿಯು ಸಂಬಂಧಪಟ್ಟ ವ್ಯಕ್ತಿಗೇ ಸೇರಿದ್ದು, ಆತನ ವಿವರಗಳು ಅದರಲ್ಲಿ ಸರಿಯಾಗಿ ದಾಖಲಾಗಿವೆ ಎಂಬುದನ್ನು ಇವು ತಿಳಿಸುತ್ತವೆ. ವ್ಯಕ್ತಿಯ ವೈಯಕ್ತಿಕ ವಿವರಗಳು ಸರಿಯಾಗಿ ನಮೂದಾಗಿದ್ದರೆ, ಸಾಲ ನೀಡುವ ಸಂಸ್ಥೆಗಳಿಗೆ ವ್ಯಕ್ತಿಯ ವಿವರಗಳನ್ನು ಪರಿಶೀಲಿಸುವುದು, ಆತನ ಸಾಲದ ಇತಿಹಾಸವನ್ನು ಗಮನಿಸುವುದು ಸುಲಭವಾಗುತ್ತದೆ.

ಸಾಲದ ವಿವರಗಳು: ಖಾತೆ ಕುರಿತ ಮಾಹಿತಿ ಇರುವ ಭಾಗವು ಕ್ರೆಡಿಟ್ ವರದಿಯ ಕೇಂದ್ರವಿದ್ದಂತೆ. ಈ ಭಾಗದಲ್ಲಿ ವ್ಯಕ್ತಿಯ ಸಾಲದ ಖಾತೆಗಳ ವಿವರ, ಕ್ರೆಡಿಟ್ ಕಾರ್ಡ್ಗಳ ಕುರಿತ ವಿವರವು ಇರುತ್ತದೆ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ವ್ಯಕ್ತಿಯ ಸಾಲ ಮತ್ತು ಕ್ರೆಡಿಟ್ ಕಾರ್ಡ್ಗಳ ಕುರಿತಾಗಿ ಯಾವರೀತಿಯಲ್ಲಿ ವಿವರ ಒದಗಿಸುತ್ತವೆಯೋ ಅದಕ್ಕೆಅನುಗುಣವಾಗಿ ವಿವರಗಳು ಇಲ್ಲಿ ದಾಖಲಾಗಿರುತ್ತವೆ.

ಸಾಲ ನೀಡಿದ ಸಂಸ್ಥೆಯ ಹೆಸರು, ಸಾಲ ಯಾವ ಬಗೆಯದ್ದು, ಸಾಲದ ಖಾತೆ ತೆರೆದ ದಿನಾಂಕ, ಸಾಲದ ಮೊತ್ತ ಅಥವಾ ಕ್ರೆಡಿಟ್ ಮಿತಿ, ಈಗ ಉಳಿದಿರುವ ಸಾಲ, ಸಾಲದ ಖಾತೆ ಚಾಲ್ತಿಯಲ್ಲಿದೆಯೋ ಅಥವಾ ಅದನ್ನು ಮುಚ್ಚಲಾಗಿದೆಯೋ ಎಂಬ ವಿವರಗಳು ಇಲ್ಲಿ ಇರುತ್ತವೆ. ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಚಿನ್ನಾಭರಣ ಸಾಲ, ಶೈಕ್ಷಣಿಕ ಸಾಲ, ಕ್ರೆಡಿಟ್ ಕಾರ್ಡ್ ವಿವರಗಳು ಇಲ್ಲಿರಬಹುದು.

ವ್ಯಕ್ತಿಯು ಪಡೆದ ಸಾಲಗಳ ವಿವರಗಳೆಲ್ಲ ಹೇಗೆ ದಾಖಲಾಗಿವೆ ಎಂಬುದನ್ನು ಇದು ತಿಳಿಸುತ್ತದೆ. ಯಾವ ಬಗೆಯ ಸಾಲದ ಉತ್ಪನ್ನಗಳು ವ್ಯಕ್ತಿಯ ಹೆಸರಿನೊಂದಿಗೆ ಬೆಸೆದುಕೊಂಡಿವೆ ಎಂಬುದು ಇಲ್ಲಿ ಗೊತ್ತಾಗುತ್ತದೆ. ಅಲ್ಲದೆ, ಹಿಂದಿನ ಹಾಗೂ ಈಗಿನ ಸಾಲದ ಬಾಧ್ಯತೆಗಳು ಎಷ್ಟಿವೆ ಎಂಬುದು ಇಲ್ಲಿ ತಿಳಿಯುತ್ತದೆ.

ಮರುಪಾವತಿ ಇತಿಹಾಸ ಮತ್ತು ಶಿಸ್ತು: ಸಾಲದ ಖಾತೆಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಇರುವ ಮರುಪಾವತಿ ಇತಿಹಾಸವು ಕ್ರೆಡಿಟ್ ವರದಿಯ ಬಹುಮುಖ್ಯ ಭಾಗಗಳಲ್ಲಿ ಒಂದು. ಎಲ್ಲ ಸಾಲಗಳ ಮರುಪಾವತಿ ಸರಿಯಾದ ಸಮಯದಲ್ಲಿ ಆಗಿದೆಯೇ ಎಂಬುದನ್ನು ಇದು ತಿಳಿಸುತ್ತದೆ. ವ್ಯಕ್ತಿಯೊಬ್ಬ ಸಾಲ ಪಡೆಯಲು ಅರ್ಹನೇ ಎಂಬುದನ್ನು ತೀರ್ಮಾನಿಸುವಾಗ ಸಾಲದಾತ ಸಂಸ್ಥೆಗಳಿಗೆ ಮರುಪಾವತಿ ಇತಿಹಾಸವು ಬಹುಮುಖ್ಯ ಸೂಚಕವಾಗಿ ಕೆಲಸ ಮಾಡುತ್ತದೆ. ವ್ಯಕ್ತಿಗೆ ಇದು ಆತ ಪಾಲಿಸಿಕೊಂಡು ಬಂದಿರುವ ಹಣಕಾಸಿನ ಶಿಸ್ತಿನ ಮಟ್ಟವನ್ನು ತಿಳಿಸುತ್ತದೆ.

ವ್ಯಕ್ತಿಯು ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಪಾವತಿಸುತ್ತಿದ್ದರೆ, ಅದನ್ನು ಕ್ರೆಡಿಟ್ ವರದಿಯು ದಾಖಲಿಸುತ್ತದೆ. ಹೀಗಾಗಿಯೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಬಹಳ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದು ಸದ್ಯದ ಹಣಕಾಸಿನ ಹೊಣೆಗಳನ್ನು ನಿಭಾಯಿಸಲು ನೆರವಾಗುವುದಷ್ಟೇಅಲ್ಲದೆ, ದೀರ್ಘಾವಧಿಯಲ್ಲಿ ಉತ್ತಮ ಕ್ರೆಡಿಟ್ ಚಿತ್ರಣವನ್ನು ಹೊಂದಲು ನೆರವಾಗುತ್ತದೆ.

ಸಾಲಕ್ಕಾಗಿ ವ್ಯಕ್ತಿಯು ಕೋರಿಕೆ ಸಲ್ಲಿಸಿದ ವಿವರಗಳನ್ನು ದಾಖಲಿಸುವ ವಿಭಾಗವು ವರದಿಯ ಇನ್ನೊಂದು ಮುಖ್ಯ ಅಂಶ. ವ್ಯಕ್ತಿಯು ಸಾಲಕ್ಕಾಗಿ ಅಥವಾ ಕ್ರೆಡಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದಾಗ, ಹಣಕಾಸು ಸಂಸ್ಥೆಯು ಆ ವ್ಯಕ್ತಿಯ ಕ್ರೆಡಿಟ್ ವರದಿಯನ್ನು ಪಡೆದುಕೊಂಡಿದ್ದರ ವಿವರಗಳು ಇಲ್ಲಿ ದಾಖಲಾಗಿರುತ್ತವೆ.

ವ್ಯಕ್ತಿಯು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಹಣಕಾಸು ಸಂಸ್ಥೆಗಳು ಆ ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಅವಲೋಕಿಸಬಹುದು. ಅದು ವರದಿಯಲ್ಲಿ ದಾಖಲಾಗಬಹುದು. ಈ ವಿಭಾಗವು ವ್ಯಕ್ತಿಯು ಈಚೆಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರ ವಿವರಗಳನ್ನು ಒಳಗೊಂಡಿರುತ್ತದೆ.

ಹಣಕಾಸಿನ ಜಾಗೃತಿಗೆ ಬೇಕು ವರದಿ

ಜನರು ಸಾಮಾನ್ಯವಾಗಿ ತಮ್ಮ ಬ್ಯಾಂಕ್ ಪಾಸ್ ಪುಸ್ತಕದ ವಿವರಗಳನ್ನು, ವಿಮೆಯ ದಾಖಲೆಗಳನ್ನು, ಹೂಡಿಕೆಯ ದಾಖಲೆಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತ ಇರುತ್ತಾರೆ. ಅದೇ ಬಗೆಯಲ್ಲಿ ಅವರು ತಮ್ಮ ಕ್ರೆಡಿಟ್ ವರದಿಗಳನ್ನು ಕೂಡ ಪರಿಶೀಲಿಸಬೇಕು. ಹೀಗೆ ಪರಿಶೀಲಿಸುವುದರಿಂದ ವ್ಯಕ್ತಿ ತನ್ನ ಕ್ರೆಡಿಟ್ ಚಿತ್ರಣವನ್ನು ಅರಿಯಲು ಹಾಗೂ ತನ್ನ ಹಣಕಾಸಿನ ವಹಿವಾಟುಗಳು ಹೇಗೆ ದಾಖಲಾಗಿವೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.

ಕ್ರೆಡಿಟ್ ವರದಿಯನ್ನು ಕಾಲಕಾಲಕ್ಕೆ ಪರಿಶೀಲಿಸುತ್ತ ಇರುವುದು ಪ್ರಯೋಜನಕಾರಿ ಆಗಬಹುದು. ಇದು ವ್ಯಕ್ತಿಗೆ ಆತನ ಸಾಲಗಳ ಕುರಿತ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಹೊಸದಾಗಿ, ತೀರಾ ಅಗತ್ಯವಾದ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಬೇಕಿರುವ ತಯಾರಿಗಳನ್ನು ಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಹಣಕಾಸು ವ್ಯವಸ್ಥೆಯ ಜೊತೆ ಮಾತುಕತೆ ನಡೆಸಲು ಅಗತ್ಯವಿರುವ ವಿಶ್ವಾಸವನ್ನು ಇದು ಮೂಡಿಸುತ್ತದೆ.

ನಗರಗಳು, ಪಟ್ಟಣಗಳು, ಸಣ್ಣ ಹಳ್ಳಿಗಳ ಜನರು ಹಣಕಾಸು ವ್ಯವಸ್ಥೆಯಿಂದ ಸಾಲ ಪಡೆಯುವುದು ಹೆಚ್ಚುತ್ತಿರುವ ಹೊತ್ತಿನಲ್ಲಿ ಕ್ರೆಡಿಟ್ ವರದಿಯನ್ನು ಓದುವುದು ಕೂಡ ಮುಖ್ಯ.

ಕ್ರೆಡಿಟ್ ವರದಿ ಎಂಬುದು ವೈಯಕ್ತಿಕ ಹಣಕಾಸು ದಾಖಲೆ. ಇದು ವ್ಯಕ್ತಿಯ ಸಾಲದ ಸಮಗ್ರ ವಿವರವನ್ನು ಒಂದೆಡೆ ಕಲೆಹಾಕುತ್ತದೆ. ಸಾಲ ನೀಡುವ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನನ್ನು ಹೇಗೆ ಗುರುತಿಸಲಾಗಿದೆ, ಆತ ಯಾವೆಲ್ಲ ಸಾಲಗಳನ್ನು ಪಡೆದಿದ್ದಾನೆ, ಅದನ್ನು ಹೇಗೆ ನಿರ್ವಹಿಸಿದ್ದಾನೆ ಎಂಬುದನ್ನು ಅದು ಹೇಳುತ್ತದೆ.

ಕೆಲವರಿಗೆ ಇದು ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಪರಿಶೀಲಿಸಬೇಕಾದ ದಾಖಲೆ. ಇನ್ನು ಕೆಲವರಿಗೆ ಇದು ಹಣಕಾಸಿನ ವಿಚಾರದಲ್ಲಿ ಶಿಸ್ತು ಪಾಲಿಸಲು ಯಾವಾಗಲೂ ಬೇಕಿರುವ ದಾಖಲೆ. ವರದಿಯನ್ನು ಈ ಎರಡೂ ಬಗೆಗಳಲ್ಲಿ ಕಂಡರೂ, ಅದನ್ನು ಓದುವ ಕೆಲಸ ಮಹತ್ವದ್ದೇ ಆಗಿರುತ್ತದೆ.

ವೈಯಕ್ತಿಕ ಹಣಕಾಸಿನ ವಿಚಾರಗಳಲ್ಲಿ ಸ್ಪಷ್ಟತೆಯು ಆತ್ಮವಿಶ್ವಾಸಕ್ಕೆ ದಾರಿ ಮಾಡಿಕೊಡುತ್ತದೆ. ಕ್ರೆಡಿಟ್ ವರದಿಯಲ್ಲಿ ಇರುವುದು ಏನು ಎಂಬುದು ಸ್ಪಷ್ಟವಾದಾಗ, ಮಾಹಿತಿ ಪೂರ್ಣವಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಆಗುತ್ತದೆ. ಈ ಅರಿವು ಮುಂದಿನ ಹಣಕಾಸಿನ ಮೈಲಿಗಲ್ಲುಗಳನ್ನು ಹೆಚ್ಚಿನ ಸಿದ್ಧತೆಯೊಂದಿಗೆ ದಾಟುವಲ್ಲಿ ನೆರವಾಗುತ್ತದೆ. ಹೀಗಾಗಿ ಕ್ರೆಡಿಟ್ ವರದಿಯು ಅಂಕಪಟ್ಟಿಗಿಂತ ಹೆಚ್ಚಿನದು.

ಲೇಖಕ ಟ್ರಾನ್ಸ್ಯೂನಿಯನ್ ಸಿಬಿಲ್ನ ಹಿರಿಯ ಉಪಾಧ್ಯಕ್ಷ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-1201719688

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.