ದಾವಣಗೆರೆ: ಹೂಡಿಕೆ ಸಲಹೆಗಾರರ ಹೆಸರಿನಲ್ಲಿ ವಾಟ್ಸ್ಆ್ಯಪ್ ಮೂಲಕ ಪರಿಚಿತರಾದವರು ನೀಡಿದ ಸಲಹೆ ನಂಬಿದ ವೃದ್ಧರೊಬ್ಬರು ₹ 75 ಲಕ್ಷ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ.

ಹರಿಹರದ 71 ವರ್ಷದ ವೃದ್ಧ ಹಣ ಕಳೆದುಕೊಂಡವರು. ಮಾಲಾ ತೊದರ್ವಾಲಾ ಹಾಗೂ ಸುರೇಶ್ ಶುಕ್ಲಾ ಎಂಬುವರ ವಿರುದ್ಧ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 25ರಂದು ವಾಟ್ಸ್ಆ್ಯಪ್ ಮೂಲಕ ಮಾಲಾ ಎಂಬುವರು ಪರಿಚಿತರಾಗಿದ್ದಾರೆ. ಹೂಡಿಕೆ ಸಲಹೆಗಾರರು ಎಂಬುದಾಗಿ ಪರಿಚಯಿಸಿಕೊಂಡ ಅವರು, ‘ಎಸ್ಬಿಐ ಸೆಕ್ಯೂರಿಟಿಸ್ ಲಿಮಿಟೆಡ್’ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದನ್ನು ನಂಬಿದ ಅವರು ಹಂತಹಂತವಾಗಿ ₹ 75.42 ಲಕ್ಷವನ್ನು ಹೂಡಿಕೆ ಮಾಡಿದ್ದಾರೆ.

‘ಆರಂಭದಲ್ಲಿ ₹ 1 ಲಕ್ಷವನ್ನು ಖಾತೆಯಿಂದ ನಗದೀಕರಿಸಿಕೊಂಡಿದ್ದೆ. ಹೂಡಿಕೆ ಖಾತೆಯಲ್ಲಿ ₹ 4 ಕೋಟಿಗೂ ಹೆಚ್ಚು ಹಣ ಇರುವುದು ಕಾಣುತ್ತಿತ್ತು. ಇದನ್ನು ನಗದೀಕರಿಸಿಕೊಳ್ಳಲು ಪ್ರಯತ್ನಿಸಿದಾಗ ಹಣ ಸಿಗಲಿಲ್ಲ. ಸಲಹೆ ನೀಡಿದವರು ಕೂಡ ಸಂಪರ್ಕಕ್ಕೆ ಲಭ್ಯವಾಗಲಿಲ್ಲ. ಅನುಮಾನ ಬಂದು ಸೈಬರ್ ಸಹಾಯವಾಣಿ ಸಂಪರ್ಕಿಸಿದಾಗ ಮೋಸ ಹೋಗಿದ್ದು ಗೊತ್ತಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-43-1551844879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.