ನವದೆಹಲಿ (ಪಿಟಿಐ): ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಹೈಬ್ರಿಡ್ ಮ್ಯೂಚುವಲ್ ಫಂಡ್ಗಳಲ್ಲಿ ಒಟ್ಟು ₹1.55 ಲಕ್ಷ ಕೋಟಿಯಷ್ಟು ಹೂಡಿಕೆ ಆಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಈ ಬಗೆಯ ಮ್ಯೂಚುವಲ್ ಫಂಡ್ಗಳಲ್ಲಿ ಆಗಿದ್ದ ಹೂಡಿಕೆ ಮೊತ್ತಕ್ಕೆ ಹೋಲಿಸಿದರೆ ಶೇ 29ರಷ್ಟು ಹೆಚ್ಚು.

ಷೇರುಪೇಟೆಯಲ್ಲಿ ಕಂಡುಬಂದಿರುವ ಅಸ್ಥಿರತೆಯು ಹೂಡಿಕೆದಾರರು ಹೆಚ್ಚಿನ ವೈವಿಧ್ಯ ಇರುವ ಹೂಡಿಕೆಗಳತ್ತ ಗಮನ ಹರಿಸುವಂತೆ ಮಾಡಿದೆ.

‘2025–26ನೆಯ ಹಣಕಾಸು ವರ್ಷದಲ್ಲಿ ಹೂಡಿಕೆದಾರರು ಹೆಚ್ಚುಸಮತೋಲನದ ಹೂಡಿಕೆ ಆಯ್ಕೆಗಳನ್ನು ಅರಸಿದ್ದಾರೆ. ಹೀಗಾಗಿ ಹೈಬ್ರಿಡ್ ಫಂಡ್ಗಳಿಗೆ ಹೆಚ್ಚಿನ ಹೂಡಿಕೆ ಹರಿದುಬಂದಿದೆ. ಅದರಲ್ಲೂ ಮುಖ್ಯವಾಗಿ ಮಲ್ಟಿ ಅಸೆಟ್ ಫಂಡ್ಗಳು ಹೆಚ್ಚಿನ ಜನಪ್ರಿಯತೆ ಗಳಿಸಿವೆ’ ಎಂದು ಎಡೆಲ್ವೈಸ್ ಮ್ಯೂಚುವಲ್ ಫಂಡ್ನ ಸಿಇಒ ಹಾಗೂ ಎಂ.ಡಿ ರಾಧಿಕಾ ಗುಪ್ತಾ ಅವರು ಹೇಳಿದ್ದಾರೆ.

ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್ಐ) ಬಳಿ ಇರುವ ಮಾಹಿತಿ ಪ್ರಕಾರ, ಹೈಬ್ರಿಡ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಫೋಲಿಯೊಗಳ (ಖಾತೆ) ಸಂಖ್ಯೆಯು ಮಾರ್ಚ್ನಲ್ಲಿ 1.9 ಕೋಟಿಗೆ ಹೆಚ್ಚಳ ಕಂಡಿದೆ. ಇದು ಹಿಂದಿನ ವರ್ಷದ ಮಾರ್ಚ್ನಲ್ಲಿ 1.56 ಕೋಟಿ ಆಗಿತ್ತು. ಅಂದರೆ ಹೂಡಿಕೆದಾರರ ಖಾತೆಗಳ ಸಂಖ್ಯೆಯು 34 ಲಕ್ಷದಷ್ಟು ಜಾಸ್ತಿ ಆಗಿದೆ.

ಹೈಬ್ರಿಡ್ ಫಂಡ್ಗಳಲ್ಲಿ ಹೂಡಿಕೆ ಆಗಿರುವ ಒಟ್ಟು ಮೊತ್ತವು 2025ರ ಮಾರ್ಚ್ನಲ್ಲಿ ₹8.83 ಲಕ್ಷ ಕೋಟಿ ಇದ್ದಿದ್ದು 2026ರ ಮಾರ್ಚ್ ಹೊತ್ತಿಗೆ ₹10.35 ಲಕ್ಷ ಕೋಟಿಗೆ ತಲುಪಿದೆ. ಅಂದರೆ ಹೂಡಿಕೆ ಮೊತ್ತದ ಲೆಕ್ಕದಲ್ಲಿ ಶೇ 17ರಷ್ಟು ಹೆಚ್ಚಳ ಆಗಿದೆ.

ದೇಶದ ಬಂಡವಾಳ ಮಾರುಕಟ್ಟೆಗಳು 2025–26ನೆಯ ಹಣಕಾಸು ವರ್ಷದುದ್ದಕ್ಕೂ ಅಸ್ಥಿರತೆಯನ್ನು ಕಂಡಿವೆ. ಅಮೆರಿಕವು ವಿಧಿಸಿದ ಭಾರಿ ಪ್ರಮಾಣದ ಸುಂಕ, ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ, ಪಶ್ಚಿಮ ಏಷ್ಯಾದಲ್ಲಿನ ಸಮರ ಈ ಅಸ್ಥಿರತೆಗೆ ಕೊಡುಗೆ ನೀಡಿವೆ.

2025–26ರಲ್ಲಿ ಚಿನ್ನದ ಮೇಲಿನ ಹೂಡಿಕೆಯು ಈಕ್ವಿಟಿಗಳ ಮೇಲಿನ ಹೂಡಿಕೆಗಿಂತ ಹೆಚ್ಚಿನ ಪ್ರಮಾಣದ ಲಾಭ ತಂದುಕೊಟ್ಟಿತು. ಹೀಗಾಗಿ, ಚಿನ್ನದ ಮೇಲೆ ಕೂಡ ಹಣ ತೊಡಗಿಸಿದ ಹೈಬ್ರಿಡ್ ಫಂಡ್ಗಳಿಗೆ ಹೆಚ್ಚು ಪ್ರಯೋಜನ ಆಯಿತು.

‘ಚಿನ್ನದ ಮೇಲಿನ ಹೂಡಿಕೆಯು ಹೆಚ್ಚಿನ ಗಳಿಕೆ ತಂದುಕೊಟ್ಟ ಪರಿಣಾಮ ವಾಗಿ, ಹಲವಾರು ಹೈಬ್ರಿಡ್ ಫಂಡ್ಗಳು ಸ್ಥಿರವಾದ ಹಾಗೂ ಹೆಚ್ಚಿನ ಮಟ್ಟದ ಗಳಿಕೆಯನ್ನು ತಂದುಕೊಟ್ಟವು’ ಎಂದು ಆನಂದ ರಾಠಿ ವೆಲ್ತ್ ಲಿಮಿಟೆಡ್ನ ಜಂಟಿ ಸಿಇಒ ಫಿರೋಜ್ ಅಜೀಜ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-51-2047767929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.