ನವದೆಹಲಿ (ಪಿಟಿಐ): ಯಾವುದೇ ಸಾಲ ಬಾಕಿ ಇರದಿದ್ದರೂ ‘ಋಣಾತ್ಮಕ ಕ್ರೆಡಿಟ್ ಅಂಕ’ದ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಸಹಾಯಹಸ್ತ ಚಾಚಿದೆ.

ಉತ್ತರಾಖಂಡ ನಿವಾಸಿ ರಾಜೇಂದ್ರ ಸಿಂಗ್ ಪನ್ವಾರ್ ಅವರು ಯಾವುದೇ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರಲಿಲ್ಲ. ಹೀಗಿದ್ದರೂ 2020ರಿಂದಲೂ ಆರ್ಥಿಕ ದಾಖಲೆಗಳಲ್ಲಿ ‘ಋಣಾತ್ಮಕ ಕ್ರೆಡಿಟ್ ಅಂಕ’ವೇ ಕಾಣುತ್ತಿತ್ತು. ಪನ್ವಾರ್ ಹೆಸರಿನ ಇನ್ನಿಬ್ಬರು ವ್ಯಕ್ತಿಗಳು ಸಾಲ ಪಡೆದು ಸುಸ್ತಿದಾರರಾದ ಕಾರಣ, ಈ ಸಮಸ್ಯೆ ಉಂಟಾಗಿತ್ತು. ನಂತರ ಹೊಸತಾಗಿ ಪಾನ್ ಕಾರ್ಡ್ ಪಡೆದುಕೊಂಡರೂ, ಹಳೆಯ ಪಾನ್ ಕಾರ್ಡ್ನ ಮಾಹಿತಿಯನ್ನು ಸಂಪರ್ಕಿಸಿದ ಕಾರಣ ಸಮಸ್ಯೆ ಮುಂದುವರಿಯಿತು. ಅವರಿಗೆ ಸಾಲ ಪಡೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಬೇಸತ್ತಿದ್ದ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸಂಸ್ಥೆಯು ಸಾಲಗಾರರಿಗೆ ‘ಕ್ರೆಡಿಟ್ ಅಂಕ’ಗಳನ್ನು ನೀಡುತ್ತದೆ. ಆಡುಮಾತಿನಲ್ಲಿ ‘ಕ್ರೆಡಿಟ್ ಅಂಕ’ ಎನ್ನುವುದು ತಾಂತ್ರಿಕವಾಗಿ ‘ಸಿಬಿಲ್ ಸ್ಕೋರ್’.

ಅರ್ಜಿ ವಿಚಾರಣೆ ನಡೆಸಿದನ್ಯಾಯಮೂರ್ತಿ ಜೆಬಿ ಪಾರ್ದೀವಾಲಾ, ಕೆ.ವಿ.ವಿಶ್ವನಾಥನ್ ನೇತೃತ್ವದ ನ್ಯಾಯಪೀಠ, ಪನ್ವಾರ್ಅವರು ಸಾಲ ಪಡೆದು ಸುಸ್ತಿದಾರರಾಗಿದ್ದಾರೆಯೇ ಎಂಬುದರ ಕುರಿತು ಮಾಹಿತಿ ನೀಡುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ), ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾಗೆ (ಎಸ್ಬಿಐ) ನೋಟಿಸ್ ನೀಡಿತ್ತು.

ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಪಿಎನ್ಬಿ ಬ್ಯಾಂಕ್ನ ಅಧಿಕಾರಿಗಳು, ‘ಪನ್ವಾರ್ ಯಾವುದೇ ಸಾಲ ಪಡೆದಿಲ್ಲ, ಸುಸ್ತಿದಾರರಾಗಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಪರಿಷ್ಕೃತ ಪ್ಯಾನ್ ಮಾಹಿತಿಪಡೆದುಕೊಂಡು ಅರ್ಜಿದಾರರ ಕ್ರೆಡಿಟ್ ಅಂಕವನ್ನು ಸರಿಪಡಿಸಲಾಗುವುದು’ ಎಂದು ಎಸ್ಬಿಐ ನ್ಯಾಯಾಲಯಕ್ಕೆ ಉತ್ತರಿಸಿದೆ.

ಇದರ ಬೆನ್ನಲ್ಲೇ ನ್ಯಾಯಾಲಯಕ್ಕೆ ಉತ್ತರಿಸಿದ ಸಿಬಿಲ್ ಸಂಸ್ಥೆ, ‘ಪನ್ವಾರ್ ಅವರ ಹೆಸರಿನಿಂದ ಸೃಷ್ಟಿಯಾದ ಗೊಂದಲಗಳನ್ನು ಬಗೆಹರಿಸಲಾಗಿದ್ದು, ಯಾವುದೇ ಸಮಸ್ಯೆಯಿಲ್ಲ’ ಎಂದು ತಿಳಿಸಿದೆ.

ಈ ಮೂಲಕ ಕಳೆದ 6 ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರಾಜೇಂದ್ರ ನ್ಯಾಯಾಲಯದ ಮಧ್ಯಪ್ರವೇಶದಿಂದ ಸಮಸ್ಯೆಯಿಂದ ಪಾರಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-365814818

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.