ಆಸ್ತಿ ಖರೀದಿಸುವುದು ಹಣಕಾಸಿನ ವಿಚಾರದಲ್ಲಿ ಯಶಸ್ಸು ಕಾಣುವುದಕ್ಕೆ ಸಮ ಎಂದು ತಲೆಮಾರುಗಳಿಂದ ಭಾವಿಸಲಾಗಿದೆ. ರಿಯಲ್ ಎಸ್ಟೇಟ್ ಆಸ್ತಿ ಹೊಂದುವುಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವಿದೆ. ರಿಯಲ್ ಎಸ್ಟೇಟ್ ಆಸ್ತಿ ಎಂಬುದು ದೀರ್ಘಕಾಲ ಬಾಳಿಕೆ ಬರುವ ಸುರಕ್ಷಿತ ಸಂಪತ್ತು ಎಂಬ ನಂಬಿಕೆಯು ಮೊದಲಿನಿಂದಲೂ ಇದೆ. ಮೊದಲ ಬಾರಿಗೆ ಹೂಡಿಕೆ ಮಾಡುತ್ತಿರುವ ಹಲವರ ಪಾಲಿಗೆ ರಿಯಲ್ ಎಸ್ಟೇಟ್ ಆಸ್ತಿಯು ಸ್ಥಿರತೆಯನ್ನು, ಅನುಭವಿಸಬಹುದಾದ ಹಾಗೂ ದೀರ್ಘಾವಧಿಯಲ್ಲಿ ಹೆಚ್ಚಿನ ಸಂಪತ್ತು ಸೃಷ್ಟಿಸಿಕೊಡುವ ಹೂಡಿಕೆಯಾಗಿದೆ.

ಆದರೆ ರಿಯಲ್ ಎಸ್ಟೇಟ್ ವಲಯದಲ್ಲಿನ ಹೂಡಿಕೆ ಸ್ವರೂಪ ಬದಲಾಗುತ್ತಿದೆ. ಬಹಳ ಉತ್ತಮ ಗುಣಮಟ್ಟದ ಹಾಗೂ ಆದಾಯ ತಂದುಕೊಡುವ ಆಸ್ತಿಗಳಾದ ಕಚೇರಿ ಕಟ್ಟಡಗಳು, ಮಾಲ್ಗಳು ಮತ್ತು ಗೋದಾಮುಗಳ ಮೇಲೆ ಹೂಡಿಕೆ ಮಾಡಲು ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ಗಳು (ಆರ್ಇಐಟಿ) ಅವಕಾಶ ಕಲ್ಪಿಸಿಕೊಡುತ್ತಿದೆ. ಷೇರುಗಳ ಮೇಲೆ ಹೂಡಿಕೆ ಮಾಡುವ ಮಾದರಿಯಲ್ಲಿಯೇ ಇವುಗಳಲ್ಲಿಯೂ ಹಣ ತೊಡಗಿಸಬಹುದು. ಬಾಡಿಗೆ ಆದಾಯ ಬಯಸುವ ಹೂಡಿಕೆದಾರರು ಭಾರಿ ಮೊತ್ತವನ್ನು ತೊಡಗಿಸದೆಯೇ, ಆಸ್ತಿ ಮಾಲೀಕರಿಗೆ ಇರುವ ತಲೆಬಿಸಿಗಳನ್ನು ಅನುಭವಿಸದೆಯೇ ಆ ಆದಾಯ ಪಡೆಯಬಹುದು.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಆರ್ಇಐಟಿಗಳಿಗೆ ಸಂಬಂಧಿಸಿದ ನಿಯಮಗಳನ್ನು 2014ರಲ್ಲಿ ರೂಪಿಸಿ, ಜಾರಿಗೆ ತಂದಿತು. ಈ ನಿಯಮಗಳ ಅಡಿ ಆರ್ಇಐಟಿಗಳು 2019ರಲ್ಲಿ ಭಾರತದಲ್ಲಿ ಆರಂಭವಾದವು. ಈಗ ಭಾರತದಲ್ಲಿ ಷೇರುಪೇಟೆ ನೋಂದಾಯಿತ ಐದು ಆರ್ಇಐಟಿಗಳು ಇವೆ. ಈ ಐದು ಆರ್ಇಐಟಿಗಳು ಭಾರತದಲ್ಲಿ ನಿರ್ವಹಿಸುತ್ತಿರುವ ಆಸ್ತಿಗಳ ಒಟ್ಟು ಮೌಲ್ಯ (ಎಯುಎಂ) ₹2.5 ಲಕ್ಷ ಕೋಟಿಯಷ್ಟಿದೆ. ಇವುಗಳ ಮಾರುಕಟ್ಟೆ ಬಂಡವಾಳದ ಮೌಲ್ಯವು ₹1.75 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಇವು ದೇಶದಾದ್ಯಂತ ನಿರ್ವಹಣೆ ಮಾಡುತ್ತಿರುವ ‘ಗ್ರೇಡ್ ಎ’ ವಾಣಿಜ್ಯ ಕಟ್ಟಡಗಳ ವಿಸ್ತೀರ್ಣವು 18.50 ಕೋಟಿ ಚದರ ಅಡಿಗಳಷ್ಟಿದೆ (2025ರ ಡಿಸೆಂಬರ್ 31ರವರೆಗಿನ ಮಾಹಿತಿ). ದೇಶದಲ್ಲಿ ಆರ್ಇಐಟಿ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ, ಸಣ್ಣ ಮತ್ತು ಮಧ್ಯಮ ಗಾತ್ರದ ಆರ್ಇಐಟಿಗಳಿಗೆ (ಅಂದರೆ ಎಸ್ಎಂ ಆರ್ಇಐಟಿ) ಅನ್ವಯವಾಗುವ ನಿಯಮಗಳನ್ನು ಕೂಡ ಸೆಬಿ ಜಾರಿಗೆ ತಂದಿದೆ.

ಇವೆಲ್ಲವುಗಳ ಕಾರಣದಿಂದಾಗಿ, ಕಡಿಮೆ ಬಂಡವಾಳದೊಂದಿಗೆ ನಿಯಮಿತವಾದ ಆದಾಯ ಬಯಸುವವರಿಗೆ, ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವ ಉದ್ದೇಶ ಇರುವವರಿಗೆ, ಹಣದುಬ್ಬರ ಪ್ರಮಾಣ ಮೀರಿದ ಗಳಿಕೆ ತಂದುಕೊಡುವ ವೈವಿಧ್ಯಮ ಪೋರ್ಟ್ಫೋಲಿಯೊ ಹೊಂದಲು ಇಚ್ಛಿಸುವವರಿಗೆ ಆರ್ಇಐಟಿಗಳು ಆಕರ್ಷಕವಾದ ಹೂಡಿಕೆ ಆಯ್ಕೆ.

ಸಾಂಪ್ರದಾಯಿಕ ಬಗೆಯಲ್ಲಿ ರಿಯಲ್ ಎಸ್ಟೇಟ್ ಆಸ್ತಿಯನ್ನು ಖರೀದಿಸಬೇಕೋ ಅಥವಾ ಆಧುನಿಕವಾದ ಆರ್ಇಐಟಿ ಯೂನಿಟ್ಗಳನ್ನು ಖರೀದಿಸಬೇಕೋ ಎಂಬ ಸಂದಿಗ್ಧದಲ್ಲಿ ಇರುವವರಿಗೆ, ಮೊದಲ ಹೆಜ್ಜೆಯನ್ನು ಇರಿಸಲು ನೆರವಾಗುವ, ವಾಸ್ತವಕ್ಕೆ ಹತ್ತಿರವಾದ ವಿಶ್ಲೇಷಣೆ ಇಲ್ಲಿದೆ.

ಆಧುನಿಕ ಪರ್ಯಾಯ: ಆರ್ಇಐಟಿ

ಆರ್ಇಐಟಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿರುತ್ತವೆ. ಇವುಗಳ ಯೂನಿಟ್ಗಳನ್ನು ಷೇರುಪೇಟೆಯ ಮೂಲಕ ಖರೀದಿಸಬಹುದು, ಮಾರಬಹುದು. ಆರ್ಇಐಟಿಗಳು ಆದಾಯ ತಂದುಕೊಡುವ ರಿಯಲ್ ಎಸ್ಟೇಟ್ ಆಸ್ತಿಗಳನ್ನು, ಅಂದರೆ ಕಚೇರಿ ಸ್ಥಳ, ಮಾಲ್ಗಳು, ಗೋದಾಮುಗಳನ್ನು ಹೊಂದಿರುತ್ತವೆ. ಆರ್ಇಐಟಿ ಯೂನಿಟ್ಗಳನ್ನು ಖರೀದಿಸಿದಾಗ ಹೂಡಿಕೆದಾರರು ಅವುಗಳ ಮಾಲೀಕತ್ವದ ವೈವಿಧ್ಯಮಯ ಆಸ್ತಿಗಳ ಸಣ್ಣ ಪಾಲನ್ನು ಖರೀದಿಸಿದಂತಾಗುತ್ತದೆ.

ಒಳಿತು: ಯೂನಿಟ್ಗಳು ಕೈಗೆ ಎಟಕುವಂತೆ ಇರುವುದು ಇಲ್ಲಿ ಬಹುಮುಖ್ಯವಾದ ಅಂಶ. ಬಹಳ ಕಡಿಮೆ ಮೊತ್ತದೊಂದಿಗೆ ಹೂಡಿಕೆದಾರರು ಬಹಳ ಪ್ರೀಮಿಯಂ ವರ್ಗದ ವಾಣಿಜ್ಯ ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಹಣ ತೊಡಗಿಸಬಹುದು. ಹಿಂದೊಂದು ಕಾಲದಲ್ಲಿ ಇಂತಹ ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಹಣ ತೊಡಗಿಸುವುದು ಸಾಂಸ್ಥಿಕ ಹೂಡಿಕೆದಾರರು ಹಾಗೂ ಅತಿಶ್ರೀಮಂತ ಹೂಡಿಕೆದಾರರಿಗೆ ಮಾತ್ರವೇ ಆಗುವಂಥದ್ದಾಗಿತ್ತು.

ನಗದೀಕರಣವು ಆರ್ಇಐಟಿಗಳಲ್ಲಿನ ಇನ್ನೊಂದು ಪ್ರಮುಖ ಅನುಕೂಲ. ಆರ್ಇಐಟಿ ಯೂನಿಟ್ಗಳು ಷೇರುಪೇಟೆಯಲ್ಲಿ ಮಾರಾಟ, ಖರೀದಿ ಆಗುತ್ತವೆಯಾದ ಕಾರಣ ಮಾರುಕಟ್ಟೆ ಅವಧಿಯಲ್ಲಿ ಹೂಡಿಕೆದಾರರು ಅವುಗಳನ್ನು ಬೇಕೆಂದಾಗಲೆಲ್ಲ ಖರೀದಿಸಬಹುದು, ಮಾರಾಟ ಮಾಡಬಹುದು. ಆರ್ಇಐಟಿಗಳಲ್ಲಿ ಹೂಡಿಕೆ ಮಾಡಿದವರಿಗೆ ಆಸ್ತಿ ನಿರ್ವಹಣೆಯ ರಗಳೆ ಇರುವುದಿಲ್ಲ. ವೃತ್ತಿಪರರ ತಂಡಗಳು ಆಸ್ತಿಯನ್ನು ಭೋಗ್ಯಕ್ಕೆ ನೀಡುವ ಕೆಲಸವನ್ನು, ಬಾಡಿಗೆ ನೀಡಿದ್ದರೆ ಬಾಡಿಗೆ ಸಂಗ್ರಹಿಸುವ ಕೆಲಸವನ್ನು, ನಿರ್ವಹಣೆಯನ್ನು ಮತ್ತು ಆಸ್ತಿಯನ್ನು ಮೇಲ್ದರ್ಜೆಗೇರಿಸುವ ಕೆಲಸವನ್ನು ನೋಡಿಕೊಳ್ಳುತ್ತವೆ. ಆಸ್ತಿಯನ್ನು ನಿರ್ವಹಿಸುವ ತಲೆಬಿಸಿ ಇಲ್ಲದಿದ್ದರೂ, ಹೂಡಿಕೆದಾರರಿಗೆ ಆದಾಯವು ಕಾಲಕಾಲಕ್ಕೆ ಪಾವತಿ ಆಗುತ್ತಿರುತ್ತದೆ.

ತೊಡಕುಗಳು: ಆರ್ಇಐಟಿಗಳು ಷೇರು ಮಾರುಕಟ್ಟೆ ವಹಿವಾಟಿನ ಭಾಗವಾಗಿರುವ ಕಾರಣ ಅವುಗಳ ಬೆಲೆಯು ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಹೆಚ್ಚು, ಕಡಿಮೆ ಆಗುತ್ತದೆ. ಬಡ್ಡಿ ದರದಲ್ಲಿನ ಬದಲಾವಣೆ, ಆರ್ಥಿಕ ಸ್ಥಿತಿಯಲ್ಲಿನ ಬದಲಾವಣೆ ಹಾಗೂ ಮಾರುಕಟ್ಟೆಯ ಅಸ್ಥಿರತೆಯು ಅಲ್ಪಾವಧಿಗೆ ಆರ್ಇಐಟಿ ಯೂನಿಟ್ ಮೌಲ್ಯದ ಮೇಲೆ ಪರಿಣಾಮ ಬೀರಬಹುದು.

ಹೂಡಿಕೆದಾರರಿಗೆ ಹೆಚ್ಚಿನ ನಿಯಂತ್ರಣ ಇರುವುದಿಲ್ಲ. ಆಸ್ತಿ ಖರೀದಿ, ಬಾಡಿಗೆದಾರರಿಗೆ ಸಂಬಂಧಿಸಿದ ತೀರ್ಮಾನಗಳನ್ನು ವೃತ್ತಿಪರ ನಿರ್ವಾಹಕರೇ ಪೂರ್ಣವಾಗಿ ತೆಗೆದುಕೊಳ್ಳುತ್ತಾರೆ.

ಆರ್ಇಐಟಿಗಳಿಂದ ಸಿಗುವ ಆದಾಯದ ಮೇಲಿನ ತೆರಿಗೆಯು ಸಂಕೀರ್ಣವಾಗಿರುತ್ತದೆ. ಆರ್ಇಐಟಿಗಳಿಂದ ಸಿಗುವ ಆದಾಯದಲ್ಲಿ ಲಾಭಾಂಶ, ಬಡ್ಡಿ ಆದಾಯ ಮತ್ತು ಬಂಡವಾಳದ ಮರುಪಾವತಿಯು ಇರುತ್ತವೆಯಾದ ಕಾರಣ, ಇವೆಲ್ಲವುಗಳನ್ನೂ ಭಿನ್ನ ಬಗೆಯಲ್ಲಿ ತೆರಿಗೆಗೆ ಒಳಪಡಿಸಲಾಗುತ್ತದೆ. ಹೀಗಾಗಿ, ಆರ್ಇಐಟಿಗಳಿಂದ ಸಿಗುವ ಆದಾಯದ ತೆರಿಗೆಯ ಬಗ್ಗೆ ಅರ್ಥ ಮಾಡಿಕೊಳ್ಳಬೇಕಿರುವುದು ಮಹತ್ವದ್ದಾಗುತ್ತದೆ.

ರಿಯಲ್ ಎಸ್ಟೇಟ್ ಆಸ್ತಿಯ ಖರೀದಿ

ಬಾಡಿಗೆ ಆದಾಯ ಪಡೆಯಲು ಇರುವ ಬಹಳ ಜನಪ್ರಿಯವಾದ ಮಾರ್ಗ ವಸತಿ ಅಥವಾ ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್ ಆಸ್ತಿಯನ್ನು ಖರೀದಿಸಿ, ಅದನ್ನು ಬಾಡಿಗೆಗೆ ನೀಡುವುದು.

ಒಳಿತು: ಭೌತಿಕವಾದ ರಿಯಲ್ ಎಸ್ಟೇಟ್ ಆಸ್ತಿಯ ಖರೀದಿಯಲ್ಲಿ ಇರುವ ಅತಿದೊಡ್ಡ ಆಕರ್ಷಣೆ ಎಂದರೆ ಅದರ ಮೇಲೆ ಮಾಲೀಕರಿಗೆ ನಿಯಂತ್ರಣ ಇರುವುದು. ಬಾಡಿಗೆದಾರ ಯಾರಾಗಬೇಕು ಎಂಬುದನ್ನು ಇಲ್ಲಿ ಮಾಲೀಕರೇ ತೀರ್ಮಾನಿಸುತ್ತಾರೆ. ಆಸ್ತಿಯ ನವೀಕರಣದ ಕೆಲಸವನ್ನು ಹೇಗೆ ಮತ್ತು ಯಾವಾಗ ಕೈಗೆತ್ತಿಕೊಳ್ಳಬಹುದು, ಯಾವಾಗ ಆಸ್ತಿಯನ್ನು ಮಾರಾಟ ಮಾಡಬಹುದು ಎಂಬುದರ ತೀರ್ಮಾನವೂ ಅವರದ್ದೇ ಆಗಿರುತ್ತದೆ. ಮಾಲೀಕತ್ವದ ಈ ಭಾವವು ಭಾವನಾತ್ಮಕವಾದ ನೆಮ್ಮದಿಯೊಂದನ್ನು ನೀಡುತ್ತದೆ. ಇದು ಹಣಕಾಸಿನ ಆಸ್ತಿಗಳಲ್ಲಿ ಸಾಮಾನ್ಯವಾಗಿ ಇರುವುದಿಲ್ಲ.

ಆಸ್ತಿಗಳನ್ನು ಅಡಮಾನವಾಗಿ ಇರಿಸಿ ಸಾಲ ಪಡೆಯುವ ಅವಕಾಶ ಇನ್ನೊಂದು ಅನುಕೂಲ. ರಿಯಲ್ ಎಸ್ಟೇಟ್ ಆಸ್ತಿಯನ್ನು ಖರೀದಿಸಬೇಕು ಎಂದಿದ್ದರೆ, ಅದಕ್ಕೆ ಬ್ಯಾಂಕ್ಗಳು ಸಾಲ ಕೊಡಲು ಹಿಂಜರಿಯುವುದಿಲ್ಲ. ಇಂತಹ ಆಸ್ತಿಗಳ ಒಟ್ಟು ಮೌಲ್ಯದ ಬಹುದೊಡ್ಡ ಭಾಗವನ್ನು ಬ್ಯಾಂಕ್ಗಳು ಸಾಲದ ರೂಪದಲ್ಲಿ ಕೊಡುತ್ತವೆ.

ಭೌತಿಕವಾದ ಆಸ್ತಿಯು ಹಣದುಬ್ಬರದ ಸವಾಲಿಗೆ ಉತ್ತರವಾಗಿ ನಿಲ್ಲುತ್ತದೆ. ದೀರ್ಘ ಅವಧಿಯಲ್ಲಿ ಹಣದುಬ್ಬರ ಪ್ರಮಾಣ ಏರಿಕೆ ಕಂಡಂತೆಲ್ಲ ಬಾಡಿಗೆ ಆದಾಯ ಮತ್ತು ಆಸ್ತಿಯ ಮೌಲ್ಯದಲ್ಲಿ ಹೆಚ್ಚಳ ಆಗುತ್ತದೆ. ಇದು ಹೂಡಿಕೆ ಮಾಡಿದ ಬಂಡವಾಳದ ಮೊತ್ತವು ಸ್ಥಿರ ದರದಲ್ಲಿ ಏರಿಕೆ ಕಾಣುವಂತೆ ಮಾಡುತ್ತದೆ.

ತೊಡಕು: ಹೊಸದಾಗಿ ಹೂಡಿಕೆ ಮಾಡುವವರಿಗೆ ಇಲ್ಲಿರುವ ದೊಡ್ಡ ಅಡ್ಡಿ, ಭಾರಿ ಮೊತ್ತದ ಅವಶ್ಯಕತೆ. ಆರಂಭಿಕವಾಗಿ ತೊಡಗಿಸಬೇಕಾದ ಮೊತ್ತ, ನೋಂದಣಿ ಶುಲ್ಕ, ಬ್ರೋಕರೇಜ್ ಮೊತ್ತ, ಕಾನೂನಿನ ಕೆಲಸಗಳಿಗೆ ಪಾವತಿಸಬೇಕಿರುವ ಶುಲ್ಕ ಇವೆಲ್ಲ ದೊಡ್ಡ ಮಟ್ಟದಲ್ಲಿರುತ್ತವೆ. ಇಷ್ಟು ದೊಡ್ಡ ಮೊತ್ತವನ್ನು ಒಂದೆಡೆ ತೊಡಗಿಸಿದಾಗ ಹಲವರಿಗೆ ತಮ್ಮ ಹೂಡಿಕೆಯಲ್ಲಿ ವೈವಿಧ್ಯ ತಂದುಕೊಳ್ಳುವುದು ಕಷ್ಟವಾಗುತ್ತದೆ.

ಆಸ್ತಿಯ ನಗದೀಕರಣ ಇಲ್ಲಿ ಇನ್ನೊಂದು ಸಮಸ್ಯೆ. ರಿಯಲ್ ಎಸ್ಟೇಟ್ ಆಸ್ತಿಗಳನ್ನು ತಕ್ಷಣಕ್ಕೆ ಮಾರಾಟ ಮಾಡಲು ಅಥವಾ ಆಸ್ತಿಯ (ಅದು ಚಿಕ್ಕದಾಗಿದ್ದರೆ) ಒಂದು ಭಾಗವನ್ನು ಮಾತ್ರ ಮಾರಾಟ ಮಾಡಲು ಆಗುವುದಿಲ್ಲ. ತುರ್ತಾಗಿ ಹಣ ಬೇಕಾಗುವ ಸಂದರ್ಭಗಳಲ್ಲಿ, ಆಸ್ತಿ ಮಾರಾಟಕ್ಕೆ ಹಲವು ತಿಂಗಳುಗಳು ಬೇಕಾಗಬಹುದು. ಕೆಲವು ಸಂದರ್ಭಗಳಲ್ಲಿ ವರ್ಷಗಳೇ ಬೇಕಾಗಬಹುದು.

ಇಷ್ಟೇ ಅಲ್ಲ, ಮಾಲೀಕರು ಇನ್ನೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬಾಡಿಗೆಗೆ ಇರುವವರನ್ನು ನಿಭಾಯಿಸುವುದು, ರಿಪೇರಿ ಕೆಲಸಗಳನ್ನು ಮಾಡಿಸುವುದು, ಎಲ್ಲವೂ ಕಾನೂನಿಗೆ ಅನುಗುಣವಾಗಿ ನಡೆಯುವಂತೆ ನೋಡಿಕೊಳ್ಳುವುದು, ಬಾಡಿಗೆದಾರರು ತೊರೆದಾಗ ಹೊಸಬರನ್ನು ಹುಡುಕುವುದು.. ಇವೆಲ್ಲ ಕೆಲಸಗಳಿಂದಾಗಿ ಹೂಡಿಕೆಯು ಬಹಳ ಶ್ರಮ ಬಯಸುವ ಕೆಲಸದಂತೆ ಆಗಿಬಿಡಬಹುದು.

ಆರಂಭಿಕ ಹೆಜ್ಜೆ ಇರಿಸುವವರಿಗೆ ಯಾವುದು ಸೂಕ್ತ?

ಇದಕ್ಕೆ ಉತ್ತರ ಮೂರು ಅಂಶಗಳನ್ನು ಒಳಗೊಂಡಿದೆ. ಬಂಡವಾಳದ ಲಭ್ಯತೆ, ಸಮಯದ ಲಭ್ಯತೆ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಆ ಮೂರು ಅಂಶಗಳು.

ಉಳಿತಾಯದ ಹಣವು ಗಣನೀಯ ಮಟ್ಟದಲ್ಲಿ ಇದೆ ಎಂದಾದರೆ, ಸಾಲ ಮಾಡಲು ಸಿದ್ಧವಿರುವುದಾದರೆ, ದೀರ್ಘ ಅವಧಿಗೆ ಆಸ್ತಿಯನ್ನು ಖುದ್ದಾಗಿ ನಿರ್ವಹಿಸಲು ಸಿದ್ಧವಾಗಿದ್ದರೆ ಭೌತಿಕವಾದ ರಿಯಲ್ ಎಸ್ಟೇಟ್ ಆಸ್ತಿಯನ್ನು ಖರೀದಿಸುವುದು ಸೂಕ್ತವಾಗಬಹುದು.

ಆದರೆ ಸೀಮಿತ ಬಂಡವಾಳ, ವೃತ್ತಿಬದುಕಿನ ಒತ್ತಡ, ನಗದೀಕರಣಕ್ಕೆ ಆದ್ಯತೆ, ರಿಸ್ಕ್ ಒಂದೇ ಕಡೆ ಇರುವುದು ಬೇಡ ಎನ್ನುವವರಿಗೆ ಆರ್ಇಐಟಿಗಳು ಹೆಚ್ಚು ಅನುಕೂಲಕರವಾದ ಆರಂಭಿಕ ಹೂಡಿಕೆ ಆಯ್ಕೆ ಆಗುತ್ತವೆ. ಇವು ಪ್ರೀಮಿಯಂ ವರ್ಗದ ವಾಣಿಜ್ಯ ಆಸ್ತಿಗಳಲ್ಲಿ ಹಣ ತೊಡಗಿಸಲು ದಾರಿ ಮಾಡಿಕೊಡುತ್ತವೆ. ಈ ಹೂಡಿಕೆಗಳಿಂದ ನಿರಂತರ ಆದಾಯ ಸಿಗುತ್ತದೆ. ಇದರ ಜೊತೆಯಲ್ಲೇ, ಆಸ್ತಿ ನಿರ್ವಹಣೆಯ ಒತ್ತಡ ಇರುವುದಿಲ್ಲ.

ಹೂಡಿಕೆ ಜಗತ್ತಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇರಿಸುತ್ತಿರುವವರಿಗೆ ಆರ್ಇಐಟಿಗಳು ಹೇಳಿಮಾಡಿಸಿದ ಮೊದಲ ಹೆಜ್ಜೆ ಇದ್ದಂತೆ. ಆಸ್ತಿಗಳಲ್ಲಿನ ಹೂಡಿಕೆಯು ಹೇಗೆ ಆದಾಯ ತಂದುಕೊಡುತ್ತದೆ ಎಂಬುದನ್ನು ಇವು ಕಲಿಸುತ್ತವೆ, ಸ್ಥಿರವಾದ ಆದಾಯ ತಂದುಕೊಡುತ್ತವೆ ಮತ್ತು ರಿಯಲ್ ಎಸ್ಟೇಟ್ ಆಸ್ತಿಗಳ ಬಗ್ಗೆ ಪರಿಚಯ ಮಾಡಿಸಿಕೊಡುತ್ತವೆ.

ಲೇಖಕಿ ವೆಲ್ತ್ ಕಂಪನಿ ಅಸೆಟ್ ಮ್ಯಾನೇಜ್ಮೆಂಟ್ ಪ್ರೈ.ಲಿ. ಕಂಪನಿಯ ನಿಧಿ ನಿರ್ವಾಹಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.