ಅಸ್ಥಿರತೆಯೇ ನಿರಂತರವಾಗಿರುವ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕವಾದ ‘ದೀರ್ಘಾವಧಿಗೆ ಖರೀದಿ’ ವಿಧಾನವು ಮತ್ತೆ ಮತ್ತೆ ಪರೀಕ್ಷೆಗೆ ಗುರಿಯಾಗುತ್ತಿದೆ. ಬಹಳಷ್ಟು ಮಂದಿ ಹೂಡಿಕೆದಾರರಲ್ಲಿ ಇದು ಮುಖ್ಯವಾದ ಪ್ರಶ್ನೆಯೊಂದನ್ನು ಹುಟ್ಟುಹಾಕುತ್ತಿದೆ. ಮಾರುಕಟ್ಟೆಯ ಪರಿಸ್ಥಿತಿ ಬದಲಾದಂತೆಲ್ಲ ಹೂಡಿಕೆ ವಿಧಾನದಲ್ಲಿಯೂ ಬದಲಾವಣೆ ಆಗಬೇಕೇ ಎಂಬುದು ಆ ಪ್ರಶ್ನೆ.

ಎಸ್ಐಎಫ್ (ಸ್ಪೆಷಲೈಸ್ಡ್ ಇನ್ವೆಸ್ಟ್ಮೆಂಟ್ ಫಂಡ್ - ಅಥವಾ ವಿಶಿಷ್ಟ ಹೂಡಿಕೆ ನಿಧಿ) ಎಂಬ ವರ್ಗವು ಈಗ ಹೂಡಿಕೆದಾರರ ಗಮನವನ್ನು ಸೆಳೆಯಲು ಆರಂಭಿಸಿದೆ. ಈ ಬಗೆಯ ಹೂಡಿಕೆಯು ಈಗಷ್ಟೇ ವಿಕಾಸ ಹೊಂದುತ್ತಿದೆ, ಇದನ್ನು ಸಣ್ಣ ಹೂಡಿಕೆದಾರರು ಈವರೆಗೆ ವ್ಯಾಪಕವಾಗಿ ಬಳಕೆ ಮಾಡುತ್ತಿಲ್ಲ. ಆದರೆ ಇದು ಹೂಡಿಕೆಗಳನ್ನು ಭಿನ್ನ ರೀತಿಯಲ್ಲಿ ನಿರ್ವಹಣೆ ಮಾಡುವ ವಿಧಾನ ಅನುಸರಿಸುತ್ತದೆ. ಅಂದರೆ ಇದು ನಿಶ್ಚಿತ ವಿಧಾನದಲ್ಲಿ ಹೂಡಿಕೆಯನ್ನು ಹಂಚಿಕೆ ಮಾಡುವ ಬದಲು, ಹೊಂದಾಣಿಕೆಯ ಹೂಡಿಕೆ ಮಾರ್ಗವನ್ನು ಅನುಸರಿಸುತ್ತದೆ.

ಹೆಚ್ಚಿನ ಸಾಂಪ್ರದಾಯಿಕ ಮ್ಯೂಚುವಲ್ ಫಂಡ್ಗಳಲ್ಲಿ, ಮಾರುಕಟ್ಟೆಯ ಏರಿಳಿತಗಳು ಹೇಗೆಯೇ ಇದ್ದರೂ ಪೋರ್ಟ್ಫೋಲಿಯೊದಲ್ಲಿನ ಹೆಚ್ಚಿನ ಮೊತ್ತವು ಷೇರುಗಳಲ್ಲಿ ವಿನಿಯೋಗ ಆಗಿರುತ್ತದೆ. ಅಂದರೆ ಮಾರುಕಟ್ಟೆಯು ಏರುಗತಿಯಲ್ಲಿ ಸಾಗುವ ಸಂದರ್ಭಗಳಲ್ಲಿ ಹೂಡಿಕೆದಾರರು ಅವುಗಳಲ್ಲಿ ಪೂರ್ಣವಾಗಿ ಭಾಗಿಯಾಗುತ್ತಾರೆ. ಹಾಗೆಯೇ ಮಾರುಕಟ್ಟೆಯ ಕುಸಿತಗಳಿಗೆ ಕೂಡ ಅವರು ತಮ್ಮನ್ನು ಪೂರ್ತಿಯಾಗಿ ಒಡ್ಡಿಕೊಳ್ಳುತ್ತಾರೆ. ರಿಸ್ಕ್ ಕಡಿಮೆ ಮಾಡಿಕೊಳ್ಳಲು ಅವರಿಗೆ ಹೆಚ್ಚಿನ ಅವಕಾಶ ಇರುವುದಿಲ್ಲ.

ಆದರೆ ಎಸ್ಐಎಫ್ಗಳು ಇನ್ನಷ್ಟು ಚಲನಶೀಲವಾಗಿ ಇರುವಂತೆ ರೂಪುಗೊಂಡಿವೆ. ಮಾರುಕಟ್ಟೆಯಲ್ಲಿನ ಷೇರುಮೌಲ್ಯ ಹಾಗೂ ಮಾರುಕಟ್ಟೆಯ ಒಟ್ಟಾರೆ ಪರಿಸ್ಥಿತಿಯನ್ನು ಆಧರಿಸಿ, ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ ಎಷ್ಟು ಮೊತ್ತ ತೊಡಗಿಸಬೇಕು ಎಂಬುದನ್ನು ತೀರ್ಮಾನಿಸಲು ಅವು ನಿಧಿ ನಿರ್ವಾಹಕರಿಗೆ ಅವಕಾಶ ಕಲ್ಪಿಸುತ್ತವೆ. ಮಾರುಕಟ್ಟೆಯು ಆಕರ್ಷಕವಾಗಿ ಇದ್ದಾಗ ಅಲ್ಲಿಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ಅವಕಾಶವನ್ನು, ಮಾರುಕಟ್ಟೆ ದುಬಾರಿ ಎಂದು ಅನ್ನಿಸಿದಾಗ ಅಲ್ಲಿ ಹಣ ತೊಡಗಿಸುವುದನ್ನು ಕಡಿಮೆ ಮಾಡುವ ಅವಕಾಶವನ್ನು ಅವು ನೀಡುತ್ತವೆ.

ದೀರ್ಘಾವಧಿಗೆ ಹೂಡಿಕೆ ಮಾಡುವ ಹಾಗೂ ‘ಶಾರ್ಟ್’ ತಂತ್ರಗಾರಿಕೆಯನ್ನು ಅನುಸರಿಸಲು ಕೂಡ ಇಲ್ಲಿ ಅವಕಾಶ ಇದೆ. ಸಾಂಪ್ರದಾಯಿಕ ಫಂಡ್ಗಳಲ್ಲಿನ ಹೂಡಿಕೆಯು ಮಾರುಕಟ್ಟೆ ಏರಿಕೆ ಕಂಡಾಗ ಲಾಭ ಪಡೆಯುತ್ತದೆ. ಆದರೆ ಎಸ್ಐಎಫ್ಗಳು, ಮಾರುಕಟ್ಟೆಯ ಕುಸಿತದ ಸಂದರ್ಭದಲ್ಲಿ ಪ್ರಯೋಜನ ಆಗಲಿದೆ ಎಂದು ಅನ್ನಿಸಿದರೆ, ಆಗ ಕೂಡ ಹೂಡಿಕೆ (ಶಾರ್ಟ್ ತಂತ್ರಗಾರಿಕೆ) ಮಾಡಬಹುದು.

ಅಂದರೆ ವಾಸ್ತವದಲ್ಲಿ ಎಸ್ಐಎಫ್ಗಳು ಮಾರುಕಟ್ಟೆಯ ಬೇರೆ ಬೇರೆ ಹಂತಗಳಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳಬಲ್ಲವು. ಮಾರುಕಟ್ಟೆ ಅಸ್ಥಿರವಾಗಿದ್ದಾಗ ಅಥವಾ ಮಾರುಕಟ್ಟೆ ಕುಸಿಯುತ್ತಿದ್ದಾಗ ಇವು ಹೂಡಿಕೆಯನ್ನು ಕಡಿಮೆ ಮಾಡಬಹುದು. ಮಾರುಕಟ್ಟೆಯು ಏರಿಕೆ, ಇಳಿಕೆ ಕಾಣುತ್ತಿದ್ದಾಗ ಇವು ಆರ್ಬಿಟ್ರಾಜ್ ಮಾರ್ಗವನ್ನು ಅನುಸರಿಸಬಹುದು. ಮಾರುಕಟ್ಟೆಯ ದಿಕ್ಕು ಸ್ಪಷ್ಟವಾಗಿದ್ದಾಗ ಇವು ಹೂಡಿಕೆ ಹೆಚ್ಚು ಮಾಡಿ, ಅದರ ಲಾಭ ಪಡೆಯಬಹುದು.

ಇವುಗಳಲ್ಲಿ ಹೂಡಿಕೆ ಮಾಡಬೇಕು ಎಂದಾದರೆ ಕನಿಷ್ಠ ₹10 ಲಕ್ಷ ಅಗತ್ಯ. ಹೂಡಿಕೆಯ ಕಾರ್ಯವಿಧಾನ ಸಂಕೀರ್ಣವಾಗಿರುತ್ತದೆ. ಇದರಿಂದಾಗಿ ಈ ಹೂಡಿಕೆಗಳು ಎಲ್ಲರಿಗೂ ಸೂಕ್ತ ಆಗದಿರಬಹುದು. ಅದರಲ್ಲೂ ಮಾರುಕಟ್ಟೆಗೆ ಹೊಸಬರಾದವರಿಗೆ ಹಾಗೂ ಸರಳವಾದ ಹೂಡಿಕೆ ಆಯ್ಕೆ ಬಯಸುವವರಿಗೆ ಇದು ಸೂಕ್ತ ಆಗದಿರಬಹುದು. ಇವುಗಳ ವಿನ್ಯಾಸ, ಇವುಗಳಲ್ಲಿನ ರಿಸ್ಕ್ಗಳು, ಇವು ಯಾರಿಗೆ ಸೂಕ್ತ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿರುವುದು ಮಹತ್ವದ್ದು.

ಮಾರುಕಟ್ಟೆಗಳು ಬೆಳವಣಿಗೆ ಹೊಂದುತ್ತ ಇರುವಾಗ ಹೂಡಿಕೆ ವಿಧಾನಗಳೂ ಬದಲಾಗುತ್ತಿರುತ್ತವೆ. ಹೂಡಿಕೆಯಲ್ಲಿ ಅಗತ್ಯಕ್ಕೆ ಅನುಗುಣವಾದ ಹೊಂದಾಣಿಕೆಯು ಮಹತ್ವದ್ದಾಗುತ್ತಿದೆ ಎಂಬುದನ್ನು ಎಸ್ಐಎಫ್ಗಳ ಹುಟ್ಟು ಹಾಗೂ ಅವುಗಳ ಬೆಳವಣಿಗೆಯು ತಿಳಿಸುತ್ತಿದೆ.

ಲೇಖಕ ಟಾಟಾ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಎಸ್ಐಎಫ್ ನಿಧಿ ನಿರ್ವಾಹಕ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-51-987225564

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.