ಶುಕ್ರವಾರ, ಜೂನ್ 5, 2020
27 °C

ಹೆಲಿಕಾಪ್ಟರ್‌ ಮನಿ ಎಂದರೇನು? ಇಲ್ಲಿದೆ ಸರಳ ವಿವರಣೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಹೆಲಿಕಾಪ್ಟರ್‌ ಮನಿ ಎಂಬ ವಿಚಾರ ಕಳೆದ ಕೆಲವು ದಿನಗಳಿಂದ ಹೆಚ್ಚು ಪ್ರಚಲಿತದಲ್ಲಿದೆ. ಅದೇ ಹೊತ್ತಲ್ಲೇ ಈ ಪರಿಕಲ್ಪನೆಯ ಬಗ್ಗೆ ಊಹಾಪೋಹಗಳು, ಗೊಂದಲಗಳೂ ಮನೆ ಮಾಡಿವೆ. 

ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಲ್ಲದ ಈ ಸಂದರ್ಭದಲ್ಲಿ ಜಾಗತಿಕ ಮಹಾಮಾರಿ ಕೋವಿಡ್‌ 19 ಕೂಡ ದೇಶವನ್ನು ಆವರಿಸಿದ್ದು, ಅರ್ಥ ವ್ಯವಸ್ಥೆ ಮತ್ತಷ್ಟು ಕುಸಿಯುವಂತೆ ಮಾಡಿದೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ‘ಹೆಲಿಕಾಪ್ಟರ್‌ ಮನಿ’ಯನ್ನು ಜಾರಿಗೆ ತರಬೇಕು ಎಂದು ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಕೇಂದ್ರವನ್ನು ಒತ್ತಾಯಿಸಿದ್ದರು. ಅದರೊಂದಿಗೆ ಹೆಲಿಕಾಪ್ಟರ್‌ ಮನಿ ದೇಶದಲ್ಲಿ ಹೆಚ್ಚು ಚರ್ಚೆಗೆ ಒಳಗಾಯಿತು. 

ಹೆಲಿಕಾಪ್ಟರ್‌ ಮನಿ ಎಂದರೇನು? 

ಅಮೆರಿಕದ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್ ಅವರು ಈ ಕಲ್ಪನೆಯನ್ನು ಮೊದಲ ಬಾರಿಗೆ ಚಾಲ್ತಿಗೆ ತಂದರು. ಅದರಂತೆ. ಸಾಮಾನ್ಯ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು, ಹಣದ ಹರಿವನ್ನು ಹೆಚ್ಚಿಸುವುದು, ಆ ಮೂಲಕ ಅರ್ಥ ವ್ಯವಸ್ಥೆಯನ್ನು ಮೇಲೆತ್ತುವುದು ಇದರ ಉದ್ದೇಶ. ಇದಕ್ಕಾಗಿ ದೇಶವೊಂದು ತನ್ನ ಕೇಂದ್ರ ಬ್ಯಾಂಕ್‌ಗೆ ಹೆಚ್ಚಿನ ಹಣ ಮುದ್ರಿಸುವಂತೆ ತಿಳಿಸುತ್ತದೆ. ನಂತರ ಅದನ್ನು ಜನರಿಗೆ ಮರುಪಾವತಿ ಇಲ್ಲದ, ಸಾಲವಲ್ಲದ, ನೆರವಿನ ರೂಪದಲ್ಲಿ ವಿತರಣೆ ಮಾಡುತ್ತದೆ. 

ಹೆಲಿಕಾಪ್ಟ್‌ ಮನಿ ಎಂಬ ಹೆಸರು ಬಂದಿದ್ದು ಏಕೆ? 

ಏಕಕಾಲಕ್ಕೆ ಆರ್ಥವ್ಯವಸ್ಥೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಪೂರೈಕೆಯಾಗುವುದರಿಂದ, ಜನರಿಗೆ ವಿತರಣೆಯಾಗುವುದರಿಂದ ಇದನ್ನು ಹೆಲಿಕಾಪ್ಟರ್‌ ಮನಿ ಎಂದು ಕರೆಯಲಾಗುತ್ತದೆ. ಆದರೆ, ಈ ಪರಿಕಲ್ಪನೆಯ ಅಡಿಯಲ್ಲಿ ಹಣವನ್ನು ಹೆಲಿಕಾಪ್ಟರ್‌ನಿಂದ ನೇರವಾಗಿ ಜನರಿಗೆ ಸುರಿಸುವುದಿಲ್ಲ. 

ಎಲ್ಲಿಯಾದರೂ ಜಾರಿಗೆ ಬಂದಿತ್ತೇ? 

ಅಮೆರಿಕ ಮತ್ತು ಜಪಾನ್‌ ಈ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದವು ಎಂದು ಹೇಳಲಾಗುತ್ತದೆ. ಆದರೆ, ಅದನ್ನು ಎರಡೂ ದೇಶಗಳೂ ನಿರಾಕರಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು