ಗುರುವಾರ , ಅಕ್ಟೋಬರ್ 1, 2020
20 °C

ಪ್ರಶ್ನೋತ್ತರ | ಬಾಡಿಗೆ ರಶೀದಿ ಇಲ್ಲದೇ ಕನಿಷ್ಠ ಎಷ್ಟು ಬಾಡಿಗೆ ಕಳೆಯಬಹುದು?

ಯು. ಪಿ. ಪುರಾಣಿಕ್‌ Updated:

ಅಕ್ಷರ ಗಾತ್ರ : | |

ಪ್ರಶ್ನೆ: ಮನೆ ಬಾಡಿಗೆ ಮೊತ್ತವನ್ನು ಕಳೆಯುವಾಗ ಗರಿಷ್ಠ ₹ 1 ಲಕ್ಷದ ಮಿತಿಗೆ ಒಳಪಟ್ಟು ಬಾಡಿಗೆ ಸಂದಾಯದ ರಶೀದಿ ಹಾಜರುಪಡಿಸಿ ₹ 1 ಲಕ್ಷ ವರೆಗೆ ಕಳೆಯಬಹುದಾ ಅಥವಾ ಮಾಲೀಕರ ಬಾಡಿಗೆ ರಶೀದಿ ಇಲ್ಲದೇ ಕನಿಷ್ಠ ಎಷ್ಟು ಬಾಡಿಗೆ ಕಳೆಯಬಹುದು?

-ಡಿ.ವೈ. ಹಾದಿಕಾರ, ಬಾದಾಮಿ

ಉತ್ತರ: ಆದಾಯ ತೆರಿಗೆ ಸೆಕ್ಷನ್‌ 10 (13ಎ) ಆಧಾರದ ಮೇಲೆ ಈ ಕೆಳಕಂಡಂತೆ ಓರ್ವ ವ್ಯಕ್ತಿ ಪಡೆಯುವ ಮನೆ ಬಾಡಿಗೆಯಲ್ಲಿ ವಿನಾಯಿತಿ ಪಡೆಯಬಹುದು.

* ಆ್ಯಕ್ಚುವಲ್‌ ರೆಂಟ್‌ ರಿಸೀವ್ಡ್‌

* ರೆಂಟ್‌ ಪೇಯ್ಡ್‌ ಇನ್‌ ಎಕ್ಸೆಸ್ ಆಫ್ 10% ಆಫ್‌ ಸ್ಯಾಲರಿ (ಬೇಸಿಕ್‌+ ಡಿ.ಎ)

* ಶೇ 40 ಆಫ್‌ ದಿ ಸ್ಯಾಲರಿ (ಬೇಸಿಕ್+ ಡಿ.ಎ)

ಮೇಲಿನ ಮೂರರಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಿ. ಮನೆ ಮಾಲೀಕರ ಬಾಡಿಗೆ ರಶೀದಿ ಇಲ್ಲದೇ ವಿನಾಯಿತಿ ಪಡೆಯುವಂತಿಲ್ಲ. ಮನೆ ಬಾಡಿಗೆ ಕರಾರು ಪತ್ರ, ಮಾಲೀಕರ ಪ್ಯಾನ್‌–ಆಧಾರ್‌ ನಕಲುಪ್ರತಿ ಕೊಡಬೇಕಾಗುತ್ತದೆ. ₹ 1 ಲಕ್ಷದ ವಿನಾಯಿತಿ ಪಡೆಯುವ ವಿಧಾನ ಸೆಕ್ಷನ್ 10(13ಎ)ನಲ್ಲಿ ನಮೂದಿಸಿಲ್ಲ.

****

ಪ್ರಶ್ನೆ: ವಯಸ್ಸು 64. 10 ಎಕರೆ ಜಮೀನು ಹೊಂದಿದ್ದು, ವೃತ್ತಿಯಲ್ಲಿ ವ್ಯವಸಾಯಗಾರ. 1975ರಿಂದ ಕೃಷಿಯಿಂದ ಬಂದ ಸುಮಾರು ₹ 22 ಲಕ್ಷ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ಕಾರಣ 15–12–2015ರಿಂದ ಆದಾಯ ಇಲಾಖೆಗೆ ಎರಡು ವರ್ಷದ ರಿಟರ್ನ್ಸ್‌ ತುಂಬಿಸಲು ಪತ್ರ ಬಂದು 2018ರವರೆಗೂ ಸಲ್ಲಿಸುತ್ತಾ ಬಂದಿದ್ದೇನೆ. ವಾರ್ಷಿಕ ಬಡ್ಡಿ ₹ 2.40 ಲಕ್ಷ ಬರುತ್ತದೆ. ಬೇರೆ ವರಮಾನವಿಲ್ಲ. 1–4–2019ರಿಂದ ಗರಿಷ್ಠ ಮಿತಿ ₹ 5 ಲಕ್ಷಕ್ಕೆ ಹೆಚ್ಚಿಸಿರುವುದರಿಂದ ಐ.ಟಿ ರಿಟರ್ನ್ಸ್‌ ತುಂಬಬೇಕೆ?

-ಹೆಸರು, ಊರು ಬೇಡ

ಉತ್ತರ: ನೀವು ಹಿರಿಯ ನಾಗರಿಕರಾಗಿದ್ದು, ನಿಮಗೆ ಠೇವಣಿ ಮೇಲಿನ ಬಡ್ಡಿ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ಗರಿಷ್ಠ ₹ 50 ಸಾವಿರ ವಿನಾಯಿತಿ ಇದೆ. ಬಡ್ಡಿ ಆದಾಯದಲ್ಲಿ ₹ 50 ಸಾವಿರ ಕಳೆದು ನಿಮ್ಮ ವಾರ್ಷಿಕ ಆದಾಯ ₹ 1.90 ಲಕ್ಷ ಮಾತ್ರ. ಇನ್ನು ಜಮೀನಿನಿಂದ ಬರುವ ಆದಾಯಕ್ಕೆ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಇದೆ. 1–4–2019ರಿಂದ ಎಲ್ಲ ವರ್ಗದ ಜನರಿಗೂ ಆದಾಯ ತೆರಿಗೆ ಕೊಡುವ ಮಿತಿ ₹ 5 ಲಕ್ಷ ಏರಿಸಿರುವುದು ನಿಜ. ಆದರೆ ನಿಮ್ಮ ಒಟ್ಟು ಆದಾಯ ಬಡ್ಡಿ ಹಾಗೂ ಕೃಷಿ ಆದಾಯ ವಾರ್ಷಿಕವಾಗಿ ₹ 3 ಲಕ್ಷ ದಾಟಿರುವಲ್ಲಿ ಮಾತ್ರ ರಿಟರ್ನ್ಸ್‌ ತುಂಬಿರಿ. ಆದರೆ, ನಿಮಗೆ ಆದಾಯ ತೆರಿಗೆ ಬರುವುದಿಲ್ಲ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001. 
ಇ–ಮೇಲ್‌: businessdesk@prajavani.co.in ಮೊ: 9448015300

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು