ಅನಿಲ್ ಕುಮಾರ್, ಧಾರವಾಡ

ಪ್ರಶ್ನೆ: ನಾನು ಸರ್ಕಾರಿ ಸಾಲಪತ್ರ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆಸಕ್ತನಿದ್ದೇನೆ. ಇದನ್ನು ಯಾವ ರೀತಿ ಖರೀದಿ ಮತ್ತು ಮಾರಾಟ ಮಾಡಬಹುದು? ಇವನ್ನು ನಮ್ಮ ಟ್ರೇಡಿಂಗ್ ಖಾತೆಯ ಮೂಲಕ ವ್ಯವಹರಿಸಬಹುದೇ? ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕೋರಿಕೆ.

ಉತ್ತರ: ನೀವು ಯಾವುದೇ ಆರ್ಥಿಕ ಅಪಾಯ ಇರದ ಮತ್ತು ನಿರಂತರವಾಗಿ ನಿಶ್ಚಿತ ಬಡ್ಡಿ ಆದಾಯ ಪಡೆಯುವ ಉದ್ದೇಶದಿಂದ ಹೂಡಿಕೆ ಮಾಡುವುದಿದ್ದರೆ ಸರ್ಕಾರಿ ಬಾಂಡ್ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಇದು ನಿಮ್ಮ ಬಂಡವಾಳಕ್ಕೆ ಭದ್ರತೆ ಹಾಗೂ ಹಾಗೂ ಸ್ಥಿರ ಆದಾಯ ನೀಡುತ್ತದೆ. ಈ ಸಾಲಪತ್ರಗಳನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಆಗಾಗ ಬಿಡುಗಡೆ ಮಾಡುತ್ತಿರುತ್ತವೆ.

ಭಾರತದಲ್ಲಿ ಸರ್ಕಾರಿ ಬಾಂಡ್ಗಳನ್ನು ಪ್ರಾಥಮಿಕ ಮಾರುಕಟ್ಟೆ ಮತ್ತು ದ್ವಿತೀಯ ಮಾರುಕಟ್ಟೆ ಮೂಲಕ ಖರೀದಿ ಹಾಗೂ ಮಾರಾಟ ಮಾಡಲು ಸಾಧ್ಯ. ಪ್ರಾಥಮಿಕ ಮಾರುಕಟ್ಟೆಯಲ್ಲಿ ಸರ್ಕಾರ ಹೊಸ ಬಾಂಡ್ಗಳನ್ನು ಹರಾಜು ಮೂಲಕ ಬಿಡುಗಡೆ ಮಾಡುತ್ತದೆ. ಅದಾಗಲೇ ಹೊರಬಂದ ಬಾಂಡ್ಗಳನ್ನು ದ್ವಿತೀಯ ಮಾರುಕಟ್ಟೆಯಲ್ಲಿ ಇತರ ಹೂಡಿಕೆದಾರರಿಂದ ಖರೀದಿಸಬಹುದು.

ಪ್ರಾಥಮಿಕ ಮಾರುಕಟ್ಟೆಯಲ್ಲಿ ನೀವು ಆರ್ಬಿಐ ರಿಟೇಲ್ ಡೈರೆಕ್ಟ್ ಪೋರ್ಟಲ್ ಮೂಲಕ ನೇರವಾಗಿ ಸರ್ಕಾರದಿಂದ ಸಾಲಪತ್ರ ಖರೀದಿಸಬಹುದು. ಈ ಪೋರ್ಟಲ್ನಲ್ಲಿ ಖಾತೆ ತೆರೆಯುವುದರಿಂದ, ಟ್ರೆಜರಿ ಬಿಲ್ಗಳು (ಟಿ-ಬಿಲ್), ಸರ್ಕಾರಿ ಬಾಂಡ್ಗಳಲ್ಲಿ (ಜಿ-ಸೆಕ್ಯುರಿಟೀಸ್) ಹೂಡಿಕೆ ಮಾಡಲು ಆಗುತ್ತದೆ. ಇದು ಮಧ್ಯವರ್ತಿಗಳ ಅಗತ್ಯವಿಲ್ಲದ ಸರಳ ಹಾಗೂ ಪಾರದರ್ಶಕ ವಿಧಾನ.

ದ್ವಿತೀಯ ಮಾರುಕಟ್ಟೆಯಲ್ಲಿ ಸರ್ಕಾರಿ ಬಾಂಡ್ಗಳನ್ನು ಎನ್ಎಸ್ಇ ಮತ್ತು ಬಿಎಸ್ಸಿ ಮುಖಾಂತರ ಖರೀದಿ ಮತ್ತು ಮಾರಾಟ ಮಾಡಬಹುದು. ನೀವು ಈಗಾಗಲೇ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆ ಹೊಂದಿದ್ದರೆ, ಅದೇ ಖಾತೆಯ ಮೂಲಕ ದ್ವಿತೀಯ ಮಾರುಕಟ್ಟೆಯಲ್ಲಿ ಮೇಲೆ ಹೇಳಿರುವ ಹೂಡಿಕೆಗಳನ್ನು ಮಾಡಬಹುದು. ಆದರೆ ಇಲ್ಲಿ ಕೆಲವೊಮ್ಮೆ ದ್ರವ್ಯತೆ ಕಡಿಮೆ ಇರುವ ಸಾಧ್ಯತೆ ಇದೆ. ಈ ವಿಧಾನದಲ್ಲಿ ಬಾಂಡ್ ಮೇಲೆ ಸಿಗುವ ಬಡ್ಡಿಯ ಉತ್ಪಾದಕತೆ ದರದಲ್ಲಿ ವ್ಯತ್ಯಾಸವಿರುತ್ತದೆ. ಬಾಂಡ್ ಮಾರುಕಟ್ಟೆ ಮೌಲ್ಯ ಮುಖಬೆಲೆಗಿಂತ ಕಡಿಮೆ ಇದ್ದಾಗ ಅಥವಾ ಕುಸಿದಾಗ, ಬಡ್ಡಿಯ ಉತ್ಪಾದಕತೆ ದರ ಅಧಿಕವಾಗುತ್ತದೆ ಮತ್ತು ಇದರ ತದ್ವಿರುದ್ಧ ಸನ್ನಿವೇಶದಲ್ಲಿ ಬಡ್ಡಿಯ ಉತ್ಪಾದಕತೆ ದರ ಕಡಿಮೆಯಾಗುತ್ತದೆ.

ಬಾಂಡ್ಗಳಲ್ಲಿ ಲಾಭವು ಸಾಮಾನ್ಯವಾಗಿ ನಿಶ್ಚಿತ ಬಡ್ಡಿ ರೂಪದಲ್ಲಿ ಬರುತ್ತದೆ. ಆರ್ಬಿಐ ನಿಗದಿಪಡಿಸುವ ಬಡ್ಡಿದರ ಬದಲಾವಣೆಗಳಿಗೆ ಅನುಗುಣವಾಗಿ ಬಾಂಡ್ ಮಾರುಕಟ್ಟೆ ಬೆಲೆಯಲ್ಲಿ ಏರಿಳಿತ ಕಂಡುಬರುತ್ತದೆ. ಜನರ ಒಲವು ಅಧಿಕ ಉತ್ಪಾದಕತೆ ದರ ಇರುವ ಬಾಂಡ್ಗಳತ್ತ ಹೋದಂತೆಲ್ಲ ಮಾರುಕಟ್ಟೆ ಮೌಲ್ಯದಲ್ಲೂ ಕುಸಿತ ಕಾಣಸಿಗುತ್ತದೆ. ನೀವು ಹೆಚ್ಚಾಗಿ ಟ್ರೇಡಿಂಗ್ ಉದ್ದೇಶದಿಂದ ವ್ಯವಹರಿಸುವುದಾದರೆ, ನಿಮ್ಮ ಡಿಮ್ಯಾಟ್ ಖಾತೆಯ ಮೂಲಕವೂ ಸರ್ಕಾರಿ ಬಾಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ದೀರ್ಘಾವಧಿ, ಸುರಕ್ಷಿತ ಹೂಡಿಕೆಗಾಗಿ ಆರ್ಬಿಐ ರಿಟೇಲ್ ಡೈರೆಕ್ಟ್ ಪೋರ್ಟಲ್ ಮೂಲಕ ವ್ಯವಹರಿಸುವುದು ಅನುಕೂಲಕರ. ನಿಮ್ಮ ಹೂಡಿಕೆಯ ಗುರಿ ಮತ್ತು ಅವಧಿಯನ್ನು ಪರಿಗಣಿಸಿ, ಸರಿಯಾದ ವಿಧಾನವನ್ನು ಆಯ್ಕೆ ಮಾಡಿ.

ಕೃಷ್ಣಪ್ರಸಾದ್, ರಾಜರಾಜೇಶ್ವರಿ ನಗರ, ಬೆಂಗಳೂರು

ಪ್ರಶ್ನೆ: ನಾನು ಖಾಸಗಿ ಕಂಪನಿಯ ಉದ್ಯೋಗಿ. ವಯಸ್ಸು 45 ವರ್ಷ. ನನ್ನ ಪತ್ನಿ ಗೃಹಿಣಿ ಹಾಗೂ ನನಗೆ ಇಬ್ಬರು ಮಕ್ಕಳು ಇದ್ದಾರೆ. ನನ್ನ ವಾರ್ಷಿಕ ವೇತನ ಸುಮಾರು ₹10 ಲಕ್ಷ. ಇತ್ತೀಚೆಗೆ ನಾನು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಅನುಸರಿಸುತ್ತಿದ್ದೇನೆ. ಆದರೆ ಹಿಂದಿನ ಅವಧಿಯಲ್ಲಿ ತೆರಿಗೆ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಕೆಲವು ನಿಗದಿತ ಉಳಿತಾಯ, ಹೂಡಿಕೆ ಮತ್ತು ವಿಮಾ ಕಂತುಗಳ ಪಾವತಿ ಮಾಡಿದ್ದೆ. ಅವುಗಳಲ್ಲಿ ಎಂಡೋಮೆಂಟ್ ಇನ್ಶೂರೆನ್ಸ್, ಇಎಲ್ಎಲ್ಎಸ್ ಮತ್ತು ನಿಶ್ಚಿತ ಠೇವಣಿಗಳೂ ಸೇರಿವೆ.

ಈ ಹಂತದ ನಂತರ ನಾನು ಹೆಚ್ಚುವರಿ ಉಳಿತಾಯ ಅಥವಾ ಹೂಡಿಕೆ ಮಾಡಲು ಮುಂದಾಗಿಲ್ಲ. ಈಗ ನನ್ನಲ್ಲಿ ಯಾವುದೇ ಮ್ಯೂಚುವಲ್ ಫಂಡ್ ಅಥವಾ ಮಾಸಿಕ ಉಳಿತಾಯ ಯೋಜನೆಗಳಿಲ್ಲ. ಆದ್ದರಿಂದ ಭವಿಷ್ಯಕ್ಕಾಗಿ ಹೇಗೆ ಉಳಿತಾಯ ಮಾಡಬಹುದು ಎಂಬ ಬಗ್ಗೆ ಮಾಹಿತಿ ಬೇಕಾಗಿದೆ. ನನಗೆ ಎಸ್ಐಪಿ ಮೂಲಕ ಹೂಡಿಕೆ ಮಾಡುವ ಆಸಕ್ತಿ ಇದೆ. ಆದರೆ ಯುದ್ಧದಿಂದಾಗಿ ಆರ್ಥಿಕ ಪರಿಸ್ಥಿತಿ ಸ್ವಲ್ಪ ಅಪಾಯಕರವಾಗಿರುವಂತೆ ಕಾಣುತ್ತಿದೆ. ಜೊತೆಗೆ, ನನಗೆ ಇನ್ನು 15 ವರ್ಷಗಳ ಸೇವಾ ಅವಧಿ ಮಾತ್ರ ಉಳಿದಿರುವುದರಿಂದ, ನಮ್ಮ ಭವಿಷ್ಯದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಹಾಯಕವಾಗುವ ಸೂಕ್ತ ಹೂಡಿಕೆ ಯೋಜನೆ ಯಾವುದು ಎಂಬುದನ್ನು ತಿಳಿಸಿ.

ಉತ್ತರ: ನೀವು ಈಗಿನಿಂದಲೇ ಕ್ರಮಬದ್ಧವಾಗಿ ಉಳಿತಾಯ ಮತ್ತು ಹೂಡಿಕೆ ಆರಂಭಿಸುವುದು ಸೂಕ್ತ. ದೀರ್ಘಾವಧಿ ಹೂಡಿಕೆಗೆ ಸರಿಯಾದ ಸಮಯ ಎಂಬುದು ಪ್ರಾಯೋಗಿಕವಾಗಿ ಇಲ್ಲ. ಪ್ರಾರಂಭಿಸುವುದು ತಡವಾದರೂ, ‘ಈಗಿನ ಸಮಯವೇ ಉತ್ತಮ ಸಮಯ’. ನೀವು ಈವರೆಗೆ ಹೂಡಿಕೆಗಳಲ್ಲಿ ಹೆಚ್ಚಿನ ಗಮನ ನೀಡಿರದಿದ್ದರೂ, ಮುಂದಿನ 15 ವರ್ಷಗಳನ್ನು ಯೋಜಿತವಾಗಿ ಬಳಸಿಕೊಳ್ಳುವ ಅವಕಾಶವಾಗಿ ಪರಿಗಣಿಸುವುದು ಸೂಕ್ತ. ಷೇರು, ಮ್ಯೂಚುವಲ್ ಫಂಡ್, ಚಿನ್ನ-ಬೆಳ್ಳಿ ಇತ್ಯಾದಿ ಹೂಡಿಕೆಗಳು ಹಣದುಬ್ಬರವನ್ನು ಹಿಂದಿಕ್ಕಿ ಸಾಮಾನ್ಯ ಠೇವಣಿಗಳಿಗಿಂತ ಹೆಚ್ಚಿನ ಲಾಭ ನೀಡಬಲ್ಲ ಕ್ಷಮತೆ ಹೊಂದಿವೆ.

ಭಾರತದ ಆರ್ಥಿಕತೆ ಇತರ ದೇಶಗಳಿಗಿಂತ ಉತ್ತಮ ಬೆಳವಣಿಗೆ ಕಾಣುತ್ತಿದೆ. ನಮ್ಮ ದೇಶದ ಜನಸಂಖ್ಯೆ, ಬಳಕೆದಾರರ ಬೇಡಿಕೆ ಮತ್ತು ಮಧ್ಯಮ ವರ್ಗದ ಆರ್ಥಿಕ ಅಭಿವೃದ್ಧಿ ದೀರ್ಘಾವಧಿ ಹೂಡಿಕೆಗಳಿಗೆ ನಮ್ಮಲ್ಲಿ ಉತ್ತಮ ಅವಕಾಶ ಕಲ್ಪಿಸುತ್ತಿವೆ. ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್ ಹೂಡಿಕೆ ಪ್ರಾರಂಭಿಸುವುದು ತಡವಾಗಿದ್ದರೂ ಅದು ಅತ್ಯಂತ ಅನುಕೂಲಕರ ಹೂಡಿಕೆ. ಯುದ್ಧ ಪರಿಸ್ಥಿತಿ ಅಥವಾ ಜಾಗತಿಕ ಅನಿಶ್ಚಿತತೆಗಳು ಈಗಿನ ಕಾಲದಲ್ಲಿ ಸಾಮಾನ್ಯ; ಕಳೆದ ಎರಡು ಮೂರು ವರ್ಷಗಳಿಂದ ಇವು ಎಂದಿನ ಸಂಗತಿಗಳಾಗಿವೆ. ದೀರ್ಘಾವಧಿಯಲ್ಲಿ ಮಾರುಕಟ್ಟೆಗಳು ಆರ್ಥಿಕತೆಯ ಗಟ್ಟಿತನವನ್ನೇ ಮೂಲವಾಗಿ ಆಧರಿಸಿ ಮುಂದುವರಿಯುತ್ತವೆ. ಈ ನಡುವೆ ಇರುವ ಏರಿಳಿತಗಳು ಅಲ್ಪಾವಧಿಯವು.

ನಿಮಗೆ ಈ ಹಂತದಲ್ಲಿ ಸಮತೋಲನದ ಹೂಡಿಕೆ ಅಗತ್ಯ. ಒಂದು ಭಾಗವನ್ನು ಈಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲಿ ಮತ್ತು ಮತ್ತೊಂದು ಭಾಗವನ್ನು ಡೆಟ್ ಹೂಡಿಕೆಗಳಲ್ಲಿ ತೊಡಗಿಸುವುದು ಸೂಕ್ತ. ತಿಂಗಳಿಗೆ ನಿಶ್ಚಿತ ಮೊತ್ತವನ್ನು ಎಸ್ಐಪಿ ಮೂಲಕ ಹೂಡಿಕೆ ಮಾಡುವುದರಿಂದ 15 ವರ್ಷಗಳಲ್ಲಿ ಉತ್ತಮ ನಿಧಿ ಒಗ್ಗೂಡಿಸಲು ಸಾಧ್ಯ. ಭಯದಿಂದ ಹೂಡಿಕೆ ಮುಂದೂಡುವುದಕ್ಕಿಂತ, ಗುರಿ ಆಧಾರಿತ, ಶಿಸ್ತಿನ ಹೂಡಿಕೆ ವಿಧಾನವನ್ನು ಈಗಲೇ ಆರಂಭಿಸುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.