ಶ್ರೀವತ್ಸ, ಗಂಗಾನಗರ, ಬೆಂಗಳೂರು

ಪ್ರಶ್ನೆ: ನಾನು ಕೆಲವು ವರ್ಷಗಳ ಹಿಂದೆ ಚಿನ್ನದ ಬಾಂಡ್ಗಳನ್ನು ಖರೀದಿಸಿದ್ದೆ. ಅವುಗಳಲ್ಲಿ ಕೆಲವು ಬಾಂಡ್ಗಳನ್ನು ನಗದೀಕರಿಸುವ ಅವಧಿ ಮುಂದಿನ ಜೂನ್ನಲ್ಲಿ ಇದೆ. ಇದಕ್ಕೆ ತೆರಿಗೆ ಹೇಗೆ ಅನ್ವಯಿಸುತ್ತದೆ? ಈ ಲಾಭವನ್ನು ಆದಾಯ ತೆರಿಗೆ ವಿವರ ಸಲ್ಲಿಸುವಾಗ ಹೇಗೆ ತೋರಿಸಬೇಕು? ಸಾಮಾನ್ಯವಾಗಿ ಎಂಟು ವರ್ಷಗಳ ಹೂಡಿಕೆಗೆ ದೀರ್ಘಾವಧಿ ಬಂಡವಾಳ ಲಾಭದ (ಎಲ್ಟಿಸಿಜಿ) ಮೇಲೆ ಶೇ 12.5ರ ತೆರಿಗೆ ಅನ್ವಯಿಸುತ್ತದೆ ಎಂಬುದು ನನ್ನ ತಿಳಿವಳಿಕೆ — ಇದು ಸರಿಯೇ?

ಇದರ ಜೊತೆಗೆ, ನಂತರದ ವರ್ಷಗಳಲ್ಲಿ ಖರೀದಿಸಿದ ಕೆಲವು ಬಾಂಡ್ಗಳನ್ನು ಪೂರ್ಣ ಅವಧಿಗೂ ಮುನ್ನ ನಗದೀಕರಿಸುವ ಅವಕಾಶವಿದೆ ಎಂದು ತಿಳಿದಿದ್ದೇನೆ. ಈ ಬಾಂಡ್ಗಳನ್ನು ಮಾರಾಟ ಮಾಡುವ ಉದ್ದೇಶವಿದೆ. ಇಂತಹ ಮುಂಚಿತ ನಗದೀಕರಣದ ಸಂದರ್ಭದಲ್ಲಿಯೂ ಮೇಲ್ಕಂಡ ತೆರಿಗೆ ನಿಯಮವೇ ಅನ್ವಯವಾಗುತ್ತದೆಯೇ?

ಈ ಬಾಂಡ್ ಹೂಡಿಕೆ ಮೊತ್ತವಲ್ಲದೆ, ಅಂದಾಜು ಒಂದು ಕೆ.ಜಿ ಬೆಳ್ಳಿಯನ್ನು ನಾನು ಕೆಲವು ವರ್ಷಗಳ ಹಿಂದೆ ಖರೀದಿಸಿದ್ದೆ. ಇದರ ಬಿಲ್ ಸಹಿತ ಖರೀದಿ ಮಾಹಿತಿ ಇದೆ. ಹೆಚ್ಚಿನ ಬೆಲೆ ಇರುವ ಈ ಹೊತ್ತಿನಲ್ಲಿ ಇದನ್ನು ಮಾರಾಟ ಮಾಡಿ ಹಣ ಪಡೆಯಬೇಕೆಂದಿದ್ದೇನೆ. ಯುದ್ಧದ ಕಾರಣದಿಂದ ಚಿನ್ನ–ಬೆಳ್ಳಿ ಮೌಲ್ಯ ತೀವ್ರ ಏರಿಳಿತ ಕಾಣುತ್ತಿರುವುದು ನನ್ನ ಈ ನಿರ್ಧಾರಕ್ಕೆ ಕಾರಣ. ಇದನ್ನು ಈಗ ಮಾರಾಟ ಮಾಡುವುದು ಸೂಕ್ತವೇ? ಇದಕ್ಕೂ ತೆರಿಗೆ ಹೇಗೆ ಅನ್ವಯಿಸುತ್ತದೆ?

ಉತ್ತರ: ನೀವು ಎಂಟು ವರ್ಷ ಪೂರೈಸಿರುವ ಬಾಂಡ್ಗಳನ್ನು ಮುಂದಿನ ಜೂನ್ ತಿಂಗಳಲ್ಲಿ ನಗದೀಕರಿಸಲಿದ್ದೀರಿ. ಪ್ರಸ್ತುತ ತೆರಿಗೆ ವರ್ಷದಿಂದ ಬದಲಾಗಿರುವ ನಿಯಮದ ಪ್ರಕಾರ, ಮೂಲ ಹೂಡಿಕೆಯನ್ನು ಸಂಪೂರ್ಣ ಅವಧಿಯ ನಂತರ ನಗದೀಕರಿಸಿದಲ್ಲಿ ಯಾವುದೇ ತೆರಿಗೆ ಇರುವುದಿಲ್ಲ. ಸೆಕ್ಷನ್ 70 (ಎಕ್ಸ್) ಪ್ರಕಾರ ಅದು ವರ್ಗಾವಣೆ ಪರಿಧಿಯಲ್ಲಿ ಬರುವುದಿಲ್ಲ. ಹೀಗಾಗಿ ನಿಮ್ಮ ವಿಚಾರದಲ್ಲಿ ಅದು ತೆರಿಗೆ ಮುಕ್ತವಾಗಿರುತ್ತದೆ. ವಿವರ ಸಲ್ಲಿಸುವಾಗ ಇದನ್ನು ತೆರಿಗೆ ಮುಕ್ತ ಆದಾಯದಲ್ಲಿ ಘೋಷಿಸಿ.

ಇದಲ್ಲದೆ, ಕೆಲವು ಬಾಂಡ್ಗಳನ್ನು ಅವಧಿಗೂ ಮುನ್ನ ಮಾರಾಟ ಮಾಡುವುದಾಗಿ ಉಲ್ಲೇಖಿಸಿದ್ದೀರಿ. ಈ ಸಂದರ್ಭದಲ್ಲಿ ತೆರಿಗೆ ನಿಯಮಗಳು ಬದಲಾಗುತ್ತವೆ. ನಿಮ್ಮ ಹೂಡಿಕೆಯ ಅವಧಿ 12 ತಿಂಗಳಿಗಿಂತ ಹೆಚ್ಚು ಇರುವುದರಿಂದ ದೀರ್ಘಾವಧಿ ಬಂಡವಾಳ ಲಾಭ ಅನ್ವಯವಾಗುತ್ತದೆ. ಕಳೆದ ಆರ್ಥಿಕ ವರ್ಷದ ತನಕ ಅವಧಿಪೂರ್ವ ನಗದೀಕರಣಕ್ಕೆ ಮೂಲ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ಇತ್ತು. ಆದರೆ ಬದಲಾದ ನಿಯಮಗಳ ಪ್ರಕಾರ, ಇಂತಹ ದೀರ್ಘಾವಧಿ ಲಾಭಕ್ಕೆ ಶೇ 12.5ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಮತ್ತು ಇಂಡೆಕ್ಸೇಶನ್ ಸೌಲಭ್ಯ ಸಿಗುವುದಿಲ್ಲ. ₹1.25 ಲಕ್ಷದವರೆಗೆ ಲಾಭಕ್ಕೆ ವಿನಾಯಿತಿ ಇದೆ. ಇನ್ನೂ ಹೆಚ್ಚಿನ ಲಾಭದ ಮೊತ್ತಕ್ಕೆ ಶೇ 12.5ರ ದರದಲ್ಲಿ ತೆರಿಗೆ ಇರುತ್ತದೆ.

ಈ ಹೂಡಿಕೆಗಳಲ್ಲದೆ, ನೀವು ಕೆಲವು ವರ್ಷಗಳ ಹಿಂದೆ ಖರೀದಿಸಿದ್ದ ಒಂದು ಕೆ.ಜಿ ಬೆಳ್ಳಿಯನ್ನು ಈಗ ಮಾರುವ ನಿರ್ಧಾರದಲ್ಲಿದ್ದೀರಿ. ಯುದ್ಧದ ಕಾರಣ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ಮೇಲೆ ಬಹಳ ಸಂಕೀರ್ಣ ಪರಿಣಾಮ ಉಂಟಾಗಿದೆ. ಸಾಮಾನ್ಯವಾಗಿ ಯುದ್ಧದ ಉದ್ವಿಗ್ನತೆ ಹೆಚ್ಚಾದಾಗ, ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯಂತಹ ಸುರಕ್ಷಿತ ಹೂಡಿಕೆ ಉತ್ಪನ್ನಗಳ ಮೊರೆಹೋಗುವುದು ಸಾಮಾನ್ಯ. ಆದರೆ, ಈಗ ಯುದ್ದದ ಕಾರಣ ಡಾಲರ್ ಮೌಲ್ಯ ಹೆಚ್ಚಾದಂತೆ, ಜಾಗತಿಕ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಇವುಗಳ ಮೌಲ್ಯವೂ ಕಳೆದ ಕೆಲವು ವಾರಗಳಿಂದ ಕುಸಿದಿದೆ. ಉತ್ತಮ ಲಾಭದಲ್ಲಿದ್ದ ವಹಿವಾಟುದಾರರು ಸಿಕ್ಕ ಅವಕಾಶ ಬಳಸಿ ತಮ್ಮ ಲಾಭವನ್ನು ನಗದೀಕರಿಸಿದ ಪರಿಣಾಮ, ಪೂರೈಕೆ ಹೆಚ್ಚಾಗಿಯೂ ಬೆಲೆ ಕುಸಿದಿದೆ. ನಿಮ್ಮ ವಿಚಾರದಲ್ಲಿ, ಅನೇಕ ವರ್ಷಗಳ ಹಿಂದೆಯೇ ಇದನ್ನು ಖರೀದಿಸಿರುವ ಕಾರಣ ನೀವು ಪ್ರಸ್ತುತ ಹಂತದಲ್ಲಿ ಮಾರಾಟ ಮಾಡಿದರೂ ಉತ್ತಮ ಲಾಭದಲ್ಲೇ ಇರುವಿರಿ. ಹೀಗಾಗಿ ಹಣದ ತೀವ್ರ ಅಗತ್ಯವಿದ್ದರೆ ಮಾತ್ರ ಮಾರಾಟ ಮಾಡಿ. ಈ ಉತ್ಪನ್ನಗಳಲ್ಲಿ ದೀರ್ಘಾವಧಿಯಲ್ಲಿ ಇನ್ನೂ ಹೆಚ್ಚಿನ ಹೂಡಿಕೆಗೆ ಅವಕಾಶವಿದೆ.

ಇನ್ನು ಈ ಹೂಡಿಕೆಯ ತೆರಿಗೆ ವಿಚಾರವಾಗಿ ಹೇಳುವುದಾದರೆ, ಚಿನ್ನ–ಬೆಳ್ಳಿಯಂತಹ ವಸ್ತುಗಳು ಬಂಡವಾಳ ಆಸ್ತಿಯಾಗಿ ಪರಿಗಣಿತ ಆಗುವುದರಿಂದ, ಅದರ ಮಾರಾಟದಿಂದ ಉಂಟಾಗುವ ಲಾಭವನ್ನು ತೆರಿಗೆಗಾಗಿ ಪರಿಗಣಿಸಲಾಗುತ್ತದೆ. ನೀವು ಇದನ್ನು ಬಿಲ್ ಸಹಿತ ಖರೀದಿಸಿದ್ದರಿಂದ, ಖರೀದಿ ವೆಚ್ಚವನ್ನು ಸರಿಯಾಗಿ ತೋರಿಸುವ ಅವಕಾಶ ಇದೆ. ಈ ಹೂಡಿಕೆಯನ್ನು ಈಗಾಗಲೇ ನೀವು 24 ತಿಂಗಳಿಗಿಂತ ಹೆಚ್ಚು ಅವಧಿಗೆ ಮಾಡಿರುವುದರಿಂದ, ಇದನ್ನು ಮಾರಾಟ ಮಾಡುವ ವರ್ಷದಲ್ಲಿ ದೀರ್ಘಾವಧಿ ಬಂಡವಾಳ ಲಾಭ ಎಂದು ಪರಿಗಣಿಸಲಾಗುತ್ತದೆ. ನಿಯಮಗಳ ಪ್ರಕಾರ, ದೀರ್ಘಾವಧಿ ಲಾಭಕ್ಕೆ ಶೇ 12.5ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಮತ್ತು ಇಂಡೆಕ್ಸೇಶನ್ ಸೌಲಭ್ಯ ಲಭ್ಯವಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.