ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ನಿಲ್ಲುವ ಸೂಚನೆಗಳು ಇಲ್ಲದ ಕಾರಣದಿಂದಾಗಿ ದೇಶದ ಷೇರುಪೇಟೆಗಳ ವಹಿವಾಟು ಸೋಮವಾರ ಬಹಳ ಕೆಟ್ಟದ್ದಾಗಿತ್ತು. ‘ಕರಡಿ ಕುಣಿತ’ಕ್ಕೆ ಷೇರುಪೇಟೆ ತತ್ತರಿಸಿತು.

ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ನಿರಾಶಾದಾಯಕ ವಹಿವಾಟು ಭಾರತದ ಮೇಲೆಯೂ ಪರಿಣಾಮ ಬೀರಿತು. ಇದರಿಂದಾಗಿ ಹೂಡಿಕೆದಾರರ ಸಂಪತ್ತು ಲಕ್ಷಾಂತರ ಕೋಟಿ ಮೊತ್ತದಲ್ಲಿ ಕರಗಿತು. ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ವಿದೇಶಿ ಹೂಡಿಕೆದಾರರು ಬಂಡವಾಳವನ್ನು ಹಿಂತೆಗೆದುಕೊಳ್ಳುವುದು ನಿಲ್ಲದಿರುವುದು ಷೇರುಪೇಟೆ ಸೂಚ್ಯಂಕಗಳ ಕುಸಿತಕ್ಕೆ ಇಂಬು ಕೊಟ್ಟವು.

ವಿವಿಧ ವಲಯಗಳ ಮೂವತ್ತು ಕಂಪನಿಗಳಲ್ಲಿ ಪ್ರತಿನಿಧಿಸುವ ಸೆನ್ಸೆಕ್ಸ್ ಸೂಚ್ಯಂಕವು 1,836 (ಶೇ 2.46) ಅಂಶಗಳಷ್ಟು ಕುಸಿಯಿತು. ಐವತ್ತು ಕಂಪನಿಗಳನ್ನು ಪ್ರತಿನಿಧಿಸುವ ನಿಫ್ಟಿ ಸೂಚ್ಯಂಕವು 601 (ಶೇ 2.6) ಅಂಶಗಳಷ್ಟು ಕುಸಿಯಿತು.

‘ಹೊರ್ಮುಜ್ ಜಲಸಂಧಿಗೆ ಸಂಬಂಧಿಸಿದ ಬಿಕ್ಕಟ್ಟು ತೀವ್ರವಾಗಿರುವುದು, ರೂಪಾಯಿಯ ಮೇಲೆ ಒತ್ತಡ ಸೃಷ್ಟಿಯಾಗಿರುವುದು, ತೈಲದ ಬೆಲೆ ಹೆಚ್ಚಿನ ಮಟ್ಟದಲ್ಲಿ ಇರುವುದು, ವಿದೇಶಿ ಹೂಡಿಕೆದಾರರು ನಿರಂತರವಾಗಿ ಷೇರುಗಳ ಮಾರಾಟಕ್ಕೆ ಗಮನ ನೀಡುತ್ತಿರುವುದು ಒಟ್ಟಾಗಿ ನಿರಾಶಾದಾಯಕ ಸ್ಥಿತಿಯನ್ನು ನಿರ್ಮಿಸುತ್ತಿವೆ’ ಎಂದು ಎನ್ರಿಚ್ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್. ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಇರಾನ್ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ಐದು ದಿನಗಳ ಮಟ್ಟಿಗೆ ಮುಂದೂಡಲಾಗಿದೆ’ ಎಂಬ ಹೇಳಿಕೆಯನ್ನು ನೀಡಿದ ಹೊತ್ತಿಗೆ ಭಾರತದ ಷೇರುಪೇಟೆಗಳಲ್ಲಿ ದಿನದ ವಹಿವಾಟು ಕೊನೆಗೊಂಡಿತ್ತು.

ಮಾರುಕಟ್ಟೆ ವಹಿವಾಟಿನ ಸಂದರ್ಭದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರಲ್ಗೆ 113.3 ಡಾಲರ್ವರೆಗೂ ಹೆಚ್ಚಳ ಕಂಡಿತ್ತು. ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕೊಸ್ಪಿ, ಜಪಾನ್ನ ನಿಕೈ, ಶಾಂಘೈನ ಎಸ್ಎಸ್ಇ ಕಾಂಪೊಸಿಟ್ ಸೂಚ್ಯಂಕ, ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಸೂಚ್ಯಂಕ ಕೂಡ ಕುಸಿತ ಕಂಡಿವೆ.

ಹೂಡಿಕೆದಾರರಿಗೆ ₹48.29 ಲಕ್ಷ ಕೋಟಿ ನಷ್ಟ

ಪಶ್ಚಿಮ ಏಷ್ಯಾದಲ್ಲಿ ಫೆಬ್ರುವರಿ 28ರಂದು ಯುದ್ಧ ಆರಂಭವಾದ ನಂತರದಲ್ಲಿ ದೇಶದ ಷೇರು ಮಾರುಕಟ್ಟೆಗಳ ಹೂಡಿಕೆದಾರರಿಗೆ ಆಗಿರುವ ನಷ್ಟದ ಒಟ್ಟು ಮೊತ್ತ ₹48.29 ಲಕ್ಷ ಕೋಟಿ ರೂಪಾಯಿ.

ಪಶ್ಚಿಮ ಏಷ್ಯಾದಲ್ಲಿ ಫೆಬ್ರುವರಿ 28ರಂದು ಯುದ್ಧ ಆರಂಭವಾದ ನಂತರದಲ್ಲಿ ಸೆನ್ಸೆಕ್ಸ್ ಶೇ 10.56ರಷ್ಟು (8,590 ಅಂಶ) ಕುಸಿದಿದೆ. ಇದೇ ಅವಧಿಯಲ್ಲಿ ನಿಫ್ಟಿ ಸೂಚ್ಯಂಕವು ಶೇ 10.58ರಷ್ಟು (2,666 ಅಂಶ) ಕುಸಿತ ಕಂಡಿದೆ.

ಮುಂಬೈ ಷೇರುಪೇಟೆ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳದ ಮೌಲ್ಯವು ಈಗ ₹415 ಲಕ್ಷ ಕೋಟಿ ಆಗಿದೆ. ಸೋಮವಾರದ ವಹಿವಾಟಿನಲ್ಲಿ ಎಲ್ಲ ವಲಯಗಳ ಸೂಚ್ಯಂಕಗಳು ಕುಸಿದಿವೆ.

94ರ ಮಟ್ಟಕ್ಕೆ ಬಂದಿದ್ದ ರೂಪಾಯಿ

ಮುಂಬೈ: ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ದಿನದ ವಹಿವಾಟಿನ ಒಂದು ಹಂತದಲ್ಲಿ 94ಕ್ಕಿಂತ ಕೆಳಕ್ಕೆ ಬಂದಿತ್ತು ನಂತರ ಮೌಲ್ಯವು ಚೇತರಿಕೆ ಕಂಡು ವಹಿವಾಟಿನ ಅಂತ್ಯಕ್ಕೆ 93.53 ಆಗಿದೆ. ಮುಂದಿನ ದಿನಗಳಲ್ಲಿಯೂ ರೂಪಾಯಿ ಮೌಲ್ಯದ ಮೇಲೆ ಒತ್ತಡ ಮುಂದುವರಿಯುತ್ತದೆ ಎಂಬ ಅಂದಾಜು ಇದೆ. ಆದರೆ ಆರ್ಬಿಐ ಕಾಲಕಾಲಕ್ಕೆ ಮಧ್ಯಪ್ರವೇಶ ಮಾಡಿ ರೂಪಾಯಿ ಮೌಲ್ಯ ಕುಸಿಯದಂತೆ ಕ್ರಮ ಕೈಗೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.