ಆರೋಗ್ಯ, ಅಂದಕ್ಕೆ ಬೀಟ್‌ರೂಟ್‌,ಕ್ಯಾರೆಟ್‌

7

ಆರೋಗ್ಯ, ಅಂದಕ್ಕೆ ಬೀಟ್‌ರೂಟ್‌,ಕ್ಯಾರೆಟ್‌

Published:
Updated:
Deccan Herald

ಬೀಟ್‌ರೂಟ್‌ ಹಾಗೂ ಕ್ಯಾರೆಟ್‌ನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಆಹಾರದಲ್ಲಿ ನಿಯಮಿತವಾಗಿ ಈ ತರಕಾರಿಗಳು ಇದ್ದರೆ ಅನೇಕ ಆರೋಗ್ಯ ಸಂಬಂಧಿ ಪ್ರಯೋಜನಗಳಿವೆ. ಕೆಲವರಿಗೆ ಈ ತರಕಾರಿಗಳನ್ನು ಹಸಿಯಾಗಿ ತಿನ್ನಲು ಇಷ್ಟವಾದರೆ, ಕೆಲವರು ಬೇಯಿಸಿಕೊಂಡು ತಿನ್ನುತ್ತಾರೆ. ಇನ್ನು ಕೆಲವರು ಎರಡು ತರಕಾರಿಗಳನ್ನು ಮಿಶ್ರ ಮಾಡಿಕೊಂಡು, ತಾಜಾಜ್ಯೂಸ್‌ ಮಾಡಿ ಕುಡಿಯುತ್ತಾರೆ. ಇದು ದೇಹದಲ್ಲಿ ರಕ್ತದ ಹರಿವು ಹೆಚ್ಚಾಗಿ, ರಕ್ತದೊತ್ತಡ ಕಡಿಮೆಯಾಗುವಂತೆ ಮಾಡುತ್ತದೆ. ಇದು ಶರೀರವನ್ನು ನಿರ್ಜಲೀಕರಣವಾಗದಂತೆ ಕಾಪಾಡುವುದರ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತವೆ. 

* ಈ ಜ್ಯೂಸ್‌ನಲ್ಲಿ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಇದ್ದು, ಈ ಜ್ಯೂಸ್‌ಗೆ ಟೊಮೆಟೊ, ಶುಂಠಿ, ಪುದೀನಾ, ಸ್ಪಲ್ಪ ಉಪ್ಪು ಹಾಗೂ ಕಾಳು ಮೆಣಸಿನ ಪುಡಿಯನ್ನು ಮಿಶ್ರ ಮಾಡಿಕೊಂಡು ಕುಡಿದರೆ ರುಚಿ ಹೆಚ್ಚುತ್ತದೆ. ಇನ್ನು ಡಯೆಟ್‌ ಮಾಡುವವರಿಗೆ ಈ ಜ್ಯೂಸ್‌ ಸರಿಯಾದ ಆಯ್ಕೆ. ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ ಹಾಗೂ ದೇಹದ ತೂಕ ಹೆಚ್ಚಾಗದಂತೆ ತಡೆಯುತ್ತದೆ

* ಬೀಟ್‌ರೂಟ್‌ ಹಾಗೂ ಕ್ಯಾರೆಟ್‌ ಸೇವನೆ ಯಕೃತ್ತು ಆರೋಗ್ಯಕ್ಕೆ ಉತ್ತಮ. ಕ್ಯಾರೆಟ್‌ ದೇಹದ ಅನಗತ್ಯ ಟಾಕ್ಸಿನ್‌ಗಳನ್ನು ಹೊರಹಾಕುತ್ತದೆ. 

* ಈ ಮಿಶ್ರ ತರಕಾರಿಗಳ ಜ್ಯೂಸ್‌ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್‌ಗಳೇ ಇದಕ್ಕೆ ಕಾರಣ. ಈ ಜ್ಯೂಸ್‌ ಅನ್ನು ಬರೀ ಹೊಟ್ಟೆಗೆ ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗಿ, ಜೀರ್ಣಶಕ್ತಿ ಸಾಮರ್ಥ್ಯವನ್ನು ಹೆಚ್ಚುತ್ತದೆ. ಕ್ಯಾರೆಟ್‌ನಲ್ಲಿ ಹೆಚ್ಚು ಪ್ರಮಾಣದಲ್ಲಿ ನಾರಿನಾಂಶವಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. 

* ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಲ್ಲಿನ ನೈಟ್ರೇಟ್‌ಗಳು ನೈಟ್ರಿಕ್‌ ಆ್ಯಕ್ಸೈಡ್‌ ಆಗಿ ಬದಲಾಗುವುದರಿಂದ ರಕ್ತದ ಹರಿವು ಸುಧಾರಣೆಯಾಗಿ ಮಿದುಳಿಗೆ ಆಮ್ಲಜನಕ ಸರಾಗವಾಗಿ ಪೂರೈಕೆಯಾಗುತ್ತದೆ

* ಈ ಎರಡೂ ತರಕಾರಿಗಳಲ್ಲಿ ಬೆಟಾ ಕೆರಾಟಿನ್‌ ಯಥೇಚ್ಛವಾಗಿದೆ. ಇದು ವಯಸ್ಸಾದಂತೆ ಕಾಣಿಸಿಕೊಳ್ಳುವ ಕಣ್ಣಿನ ಕಾಯಿಲೆಗಳಾದ ದೂರದೃಷ್ಟಿದೋಷ, ಪೊರೆ ಬರುವಂತಹ ಸಮಸ್ಯೆಗಳನ್ನು ದೂರ ಮಾಡುತ್ತವೆ. 

* ಇದರಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಅನಿಮಿಯಾ ಕಾಯಿಲೆ ಗುಣಪಡಿಸಲು ಇದು ಸಹಾಯ ಮಾಡುತ್ತದೆ. ಹಾಗೇ ಮುಟ್ಟಿನ ಸಮಸ್ಯೆಯನ್ನು ದೂರ ಮಾಡುತ್ತದೆ

* ಈ ಜ್ಯೂಸ್‌ನಲ್ಲಿನ ವಿಟಮಿನ್‌ ಸಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಕಲೆಗಳು, ಪಿಗ್ಮೆಂಟೇಷನ್‌ ಅನ್ನು ಕಡಿಮೆ ಮಾಡುತ್ತದೆ. ಹಾಗೇ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಇದರಲ್ಲಿನ ಖನಿಜಾಂಶಗಳು ಕೂದಲ ಆರೋಗ್ಯಕ್ಕೂ ಉತ್ತಮ. ಕೂದಲನ್ನು ದಟ್ಟವಾಗಿಸುವುದಲ್ಲದೇ ಕೂದಲು ಸೀಳುವಿಕೆಯನ್ನು ಕಡಿಮೆ ಮಾಡುತ್ತದೆ. ಮನಸು ಹಾಗೂ ದೇಹವನ್ನು ಚೈತನ್ಯದಿಂದಿರುವಂತೆ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 19

  Happy
 • 3

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !