ಸೋಮವಾರ, ಜೂನ್ 21, 2021
30 °C

ಗೋವಾಕ್ಕೆ ಜಂಪಿನ್‌ ಹೈಟ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಜಂಪಿನ್‌ ಹೈಟ್ಸ್‌. ಗೋವಾದಲ್ಲಿ ಜನಪ್ರಿಯವಾಗಿರುವ ಬಂಗಿ ಜಂಪ್‌ ತಾಣ. ಗೋವಾದ ಮಾಯೆಮ್‌ ಸರೋವರದ ಮೇಲ್ಭಾಗದಲ್ಲಿ ನಿರ್ಮಿಸಲಾದ ಗೋಪುರದಿಂದ ಕಾಲಿಗೆ ಹಗ್ಗ ಕಟ್ಟಿಕೊಂಡು ಕೆಳಮುಖವಾಗಿ ಜಿಗಿಯುವ ರೋಚಕ ಅನುಭವ ನೀಡುತ್ತದೆ. ವಿಶೇಷ ಸಾಹಸ ಕ್ರೀಡೆಗಳ ಸಾಲಿಗೆ ಬಂಗಿ ಜಂಪ್‌ ಸೇರಿದೆ. 

ರಾಹುಲ್‌ ನಿಗಮ್‌ ಅವರು 2010ರಲ್ಲಿ ಜಂಪಿನ್‌ ಹೈಟ್ಸ್‌ ಅನ್ನು ಹೃಷಿಕೇಶದಲ್ಲಿ ಸ್ಥಾಪಿಸಿದರು. ಈಗ ಈ ಸಾಹಸ ಕ್ರೀಡಾ ಯಾತ್ರೆ ಗೋವಾದವರೆಗೆ ಬಂದಿದೆ. ಯುವ ಉತ್ಸಾಹಿಗಳಿಗೆ ಅತ್ಯುನ್ನತವಾದ ಸಾಹಸ ಕ್ರೀಡೆಯನ್ನು ಪರಿಚಯಿಸಲು ಮುಂದಾಗಿದೆ.

ಈ ಸಂಸ್ಥೆ ಜಂಪಿನ್‌ ಹೈಟ್ಸ್‌ನಲ್ಲಿ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದೆ. ಇಲ್ಲಿನ ಕೇಂದ್ರದ ನಿರ್ವಾಹಕರು ನ್ಯೂಜಿಲೆಂಡ್‌ನಲ್ಲಿ ಬಂಗಿ ಜಂಪ್‌ನಲ್ಲಿ ತರಬೇತಿ ಪಡೆದು ವೃತ್ತಿಪರರಾಗಿದ್ದಾರೆ.

ಹೃಷಿಕೇಶದಲ್ಲಿನ ಯಶಸ್ಸಿನ ನಂತರ, ಈ ಸಂಸ್ಥೆ ಗೋವಾದಲ್ಲಿ ಇತ್ತೀಚೆಗೆ ಎರಡನೇ ಬಂಗಿ ಜಂಪ್‌ ಕೇಂದ್ರವನ್ನು ಸ್ಥಾಪಿಸಿದೆ. ಗೋವಾದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇದಕ್ಕೆ ಸಹಯೋಗ ನೀಡಿದೆ.

ನ್ಯೂಜಿಲೆಂಡ್‌ನ ತಂಡ ಜಂಪಿನ್‌ ಹೈಟ್ಸ್‌ ವೇದಿಕೆ (ಪ್ಲಾಟ್‌ಫಾರಂ) ರೂಪಿಸಿದೆ. ಇದು ಭಾರತದ ಸ್ಥಿರ ವೇದಿಕೆಗಳಲ್ಲಿ ಒಂದು. ಭಾರತದ ಅತಿ ವಿಸ್ತರಿತ ಜೋಕಾಲಿ ಸೌಲಭ್ಯ ಹೊಂದಿದೆ. ಮಾತ್ರವಲ್ಲ ಏಷ್ಯಾದಲ್ಲೇ ಅತಿ ಉದ್ದದ ಹಾರು ದೂರ ಹೊಂದಿದೆ. ಬಂಗಿ ಸಾಹಸ ಕ್ರೀಡೆಯನ್ನು ಸೇನೆಯ ಮಾಜಿ ಅಧಿಕಾರಿಗಳು ನಡೆಸುತ್ತಿದ್ದಾರೆ. 

ಹೃಷಿಕೇಶದಲ್ಲಿ 83 ಮೀಟರ್‌ ಎತ್ತರದ ಬಂಗಿ ಜಂಪ್‌ ಕೇಂದ್ರವನ್ನು ಇದೇ ಸಂಸ್ಥೆ ಹೊಂದಿದೆ. ಇಲ್ಲಿ 2010ರಿಂದ ಈವರೆಗೆ ಸುಮಾರು 80 ಸಾವಿರ ಬಂಗಿ ಜಂಪ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. 2019ರ ಆಗಸ್ಟ್‌ 28ರಿಂದ ಗೋವಾದಲ್ಲಿ ಜಂಪಿನ್‌ ಹೈಟ್ಸ್‌ ಕಾರ್ಯಾರಂಭ ಮಾಡಿದೆ. ಗೋವಾದ ಕೇಂದ್ರದಲ್ಲಿ 55 ಮೀಟರ್‌ ಎತ್ತರದಿಂದ ಜಿಗಿದು ಮಾಯಮ್‌ ಸರೋವರ, ಸುತ್ತಮುತ್ತಲಿನ ಬೆಟ್ಟ ಗುಡ್ಡಗಳ ಹಸಿರು ಸೌಂದರ್ಯವನ್ನು ಆಸ್ವಾದಿಸಬಹುದು.

ಮಾಹಿತಿಗೆ ವೆಬ್‌ ಸೈಟ್‌ಗೆ ಭೇಟಿ ನೀಡಬಹುದು: http://www.jumpinheights.com/?gclid=CJ7r95mIodICFdCGaAodMeMETw

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು