ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ (ಕೆಕೆಸಿಸಿಐ) ವತಿಯಿಂದ ‘ಪಿಚ್ ಯುವರ್ ಐಡಿಯಾ’ ಸ್ಟಾರ್ಟ್ಅಪ್ ಕಾರ್ಯಕ್ರಮವನ್ನು ಸಂಸ್ಥೆಯ ಎಸ್. ಎಸ್. ಪಾಟೀಲ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳು ಮತ್ತು ಗ್ರಾಮೀಣ ನವೋದ್ಯಮಗಳ ಮೇಲೆ ತಮ್ಮ ಆಲೋಚನೆಗಳನ್ನು ಪ್ರಸ್ತುಪಡಿಸಿದರು. ಕೃಷಿಕಲ್ಪ ಸಂಸ್ಥೆಯು ಆನ್ಲೈನ್ ಮೂಲಕ ಈ ಕಾರ್ಯಕ್ರಮ ನಿರ್ವಹಿಸಿತು. ಕಾಲೇಜುಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುತ್ತಿರುವ ಶಿಕ್ಷಕರು, ಜೀವಪರಿಸರ ಕಾಪಾಡುವವರು, ಹಾಗೂ ₹2 ಕೋಟಿಗೂ ಹೆಚ್ಚು ವ್ಯವಹಾರ ಸಾಧನೆ ಮಾಡಿದ 5–6 ಪ್ರಮುಖ ರೈತ ಉತ್ಪಾದಕ ಸಂಸ್ಥೆಯವರೂ ಭಾಗವಹಿಸಿದ್ದರು. ಈ ಸಮಾರಂಭವು ನವೀನತೆ, ಸಹಕಾರ ಮತ್ತು ಉದ್ಯಮ ಚಟುವಟಿಕೆಗಳಿಗೆ ಸಶಕ್ತ ವೇದಿಕೆಯಾಗಿ ಪರಿಣಮಿಸಿತು.

ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದ ಕೃಷಿಕಲ್ಪ ಸಂಸ್ಥೆಯ ಸಿಇಒ ಸಿ.ಎಂ. ಪಾಟೀಲ, ಅಭಿವೃದ್ಧಿಗೆ ಉದ್ಯಮಶೀಲತೆಯ ಮೂಲಕ ಉತ್ತೇಜನ ನೀಡುವ ಸಂಸ್ಥೆಯ ಧ್ಯೇಯವನ್ನು ವಿವರಿಸಿದರು. ಯುವಕರಿಗೆ ಸವಾಲುಗಳನ್ನು ಸ್ವೀಕರಿಸಿ ಸ್ವಾವಲಂಬಿ ಭವಿಷ್ಯ ನಿರ್ಮಾಣಕ್ಕೆ ಕೈಜೋಡಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪ, ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ 120ಕ್ಕೂ ಹೆಚ್ಚು ಆರಂಭಿಕ ಹಂತದ ಸ್ಟಾರ್ಟ್ಅಪ್ ಸ್ಥಾಪಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-34-1689453828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.