ಕಲಬುರಗಿ: ನಗರದ ನಾಗನಹಳ್ಳಿ ರಿಂಗ್ ರಸ್ತೆಯಲ್ಲಿರುವ ಜಸ್ಟ್ ಕ್ಲಬ್ನಲ್ಲಿ ‘ರೈತರು –ಎಫ್ಪಿಒಗಳು –ಸ್ಟಾರ್ಟ್ಅಪ್ಗಳು –ಎಂಎಸ್ಎಂಇಗಳ ಸಮಾವೇಶ ನಡೆಯಿತು. ನವೋದ್ಯಮಗಳು, ಎಂಎಸ್ಎಂಇಗೆ ಇರುವ ವಿಪುಲ ಅವಕಾಶಗಳ ಮೇಲೆ ಬೆಳಕು ಚೆಲ್ಲಿತು.

ರಾಜ್ಯ ಸರ್ಕಾರದ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳಡಿಯ ಅತ್ಯಾಧುನಿಕ ಜೈವಿಕ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರವಾದ ಬೆಂಗಳೂರು ಬಯೋ ಇನ್ನೋವೇಷನ್ ಸೆಂಟರ್ (ಬಿಬಿಸಿ) ಮತ್ತು ನಬಾರ್ಡ್ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿತ್ತು.

ಈ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ 1,200ಕ್ಕೂ ಹೆಚ್ಚು ರೈತರು, 35 ಸ್ಟಾರ್ಟ್ಅಪ್ಗಳು, 25 ಎಫ್ಪಿಒಗಳು, 10 ಎಂಎಸ್ಎಂಇ ಪ್ರತಿನಿಧಿಗಳು, 100ಕ್ಕೂ ಹೆಚ್ಚು ಕೃಷಿ ವಿದ್ಯಾರ್ಥಿಗಳು, ಕೈಗಾರಿಕೆ ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

‘ರೈತರು, ಎಫ್ಪಿಒಗಳು, ಸ್ಟಾರ್ಟ್ಅಪ್ಗಳು ಮತ್ತು ಮಾರುಕಟ್ಟೆ ವಲಯದ ನಡುವೆ ನೇರ ಸಂಪರ್ಕ ವೇದಿಕೆ ನಿರ್ಮಿಸಿ ‘ಫಾರ್ಮ್ ಟು ಫೋರ್ಕ್’ (ತೋಟದಿಂದ ತಟ್ಟೆವರೆಗೆ) ವ್ಯವಸ್ಥೆಯನ್ನು ಬಲಪಡಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ರೈತರು ಮತ್ತು ಎಫ್ಪಿಒಗಳು ಈ ಸಮಾವೇಶದಲ್ಲಿ ಭಾಗವಹಿಸಿ, ಪ್ರದೇಶದ ಸ್ಟಾರ್ಟ್ಅಪ್ಗಳು ಅಭಿವೃದ್ಧಿಪಡಿಸಿರುವ ನವೀನ ತಂತ್ರಜ್ಞಾನಗಳನ್ನು ಅರಿತುಕೊಂಡರು. ಜೊತೆಗೆ ಬಿಗ್ಹಾಟ್, ಬಿಗ್ಬ್ಯಾಸ್ಕೆಟ್, ಬ್ಲಿಂಕಿಟ್, ಸ್ವಿಗ್ಗಿ, ಇನ್ಸ್ಟಾಮಾರ್ಟ್, ಅಮೆಜಾನ್ ಫ್ರೆಶ್, ಐಟಿಸಿ ಹಾಗೂ ಓರ್ಕ್ಲಾ ಇಂಡಿಯಾ ಸೇರಿದಂತೆ ಪ್ರಮುಖ ಕೈಗಾರಿಕಾ ಸಂಸ್ಥೆಗಳೊಂದಿಗೆ ನೇರ ಸಂವಾದ ನಡೆಸಿ, ಮಾರುಕಟ್ಟೆ ಬೇಡಿಕೆಗಳು, ಕ್ವಿಕ್ ಕಾಮರ್ಸ್ ವೇದಿಕೆಗಳು ಮತ್ತು ತಮ್ಮ ಉತ್ಪನ್ನಗಳಿಗೆ ಉತ್ತಮ ಮೌಲ್ಯ ದೊರಕಿಸಿಕೊಳ್ಳುವ ಅವಕಾಶಗಳ ಕುರಿತು ಮಾಹಿತಿ ಪಡೆದವು.

ಕಾರ್ಯಕ್ರಮದಲ್ಲಿ ಕಲ್ಯಾಣ ಭಾಗದ ಏಳು ಸಾಧಕ ರೈತ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಅದಕ್ಕೆ ಜಿಲ್ಲಾ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರ ದೊರೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-34-464490362

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.