ಮಂಗಳೂರು: ಉದ್ಯಮ ಮತ್ತು ತಂತ್ರಜ್ಞಾನ ಆಧರಿತ ಬೆಳವಣಿಗೆಯ ಪ್ರಮುಖ ಕೇಂದ್ರವಾಗಿ ಮಂಗಳೂರು ಹೊರಹೊಮ್ಮುತ್ತಿದೆ ಎಂಬ ಒಟ್ಟಾಭಿಪ್ರಾಯ ಇಲ್ಲಿ ನಡೆದ ‘ವರ್ಟೆಕ್ಸ್ ಸಿಎಕ್ಸ್ಒ ಕಾನ್ಕ್ಲೇವ್’ನಲ್ಲಿ ವ್ಯಕ್ತವಾಯಿತು.

ಮಂಗಳೂರನ್ನು ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳೆಯುವ ಕೇಂದ್ರವನ್ನಾಗಿ ರೂಪಿಸುವ ಕುರಿತು ಚರ್ಚೆ ನಡೆಯಿತು.ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಹಾಗೂ ಕರ್ನಾಟಕ ಇನ್ನೊವೇಶನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿಯ ಅಧಿಕಾರಿಗಳು ಭಾಗವಹಿಸಿದ್ದರು. ಕೆಐಟಿಎಸ್ನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್, ಕೆಡಿಇಎಂನ ಸಮೀರ್ ವೇಣುಗೋಪಾಲ್, ಭರತ್ ಚಂದ್ರ ಬಿ.ಕೆ. ಮತ್ತು ವೈಶಾಖ್ ಪೈ ಮಾಹಿತಿ ನೀಡಿದರು.

ವರ್ಟೆಕ್ಸ್ ವರ್ಕ್ಸ್ಪೇಸ್ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವಿನಾಯಕ್ ಪಲನಕರ್ ಮಾತನಾಡಿ, ಸಂಸ್ಥೆಯು ಕೇವಲ ಕಾರ್ಯಸ್ಥಳ ಒದಗಿಸುತ್ತಿಲ್ಲ, ಜೊತೆಗೆ, ವ್ಯವಹಾರ ಬೆಳವಣಿಗೆಗೆ ಸಹಾಯ ಮಾಡುವತ್ತ ಕೆಲಸ ಮಾಡುತ್ತಿದೆ. ಕಂಪನಿಗಳಿಗೆ ನೇಮಕಾತಿ, ಸರ್ಕಾರಿ ಸೌಲಭ್ಯ ಪಡೆಯಲು ಸಹಾಯ ಮಾಡುವುದು ಗುರಿಯಾಗಿದೆ ಎಂದರು.

ಎಕ್ಸ್ಫಿನೊ ಸಹ ಸಂಸ್ಥಾಪಕ ಕಮಲ್ ಕಾರಂತ್ ಮಾತನಾಡಿ, ಉದ್ಯೋಗಿಗಳು ದೊಡ್ಡ ನಗರಗಳಿಗೆ ಹೋಗುವುದನ್ನು ತಡೆಯಲು ಉತ್ತಮ ನೇಮಕಾತಿ ವ್ಯವಸ್ಥೆ ಮತ್ತು ಸ್ಥಳೀಯ ಸೌಲಭ್ಯ ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಮಾರೋಪದಲ್ಲಿ ವರ್ಟೆಕ್ಸ್ ವರ್ಕ್ಸ್ಪೇಸ್ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಮಾತನಾಡಿ, ಮುಂದಿನ ದಿನಗಳಲ್ಲಿ ನಾಯಕತ್ವ ಕಾರ್ಯಕ್ರಮಗಳು, ಉದ್ಯೋಗ ಮೇಳ ಹಾಗೂ ಉದ್ಯಮಗಳಿಗೆ ಬೆಂಬಲ ನೀಡುವ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

‘ವರ್ಟೆಕ್ಸ್ ಅಶೋಕ’ ಯೋಜನೆಯನ್ನು ಪರಿಚಯಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-29-1197092671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.