ಮಂಗಳೂರು: ನಗರದ ನೆಕ್ಸಸ್ ಫಿಜಾ ಮಾಲ್ನಲ್ಲಿ ‘ನಿಟ್ಟೆ- ಎಂಆರ್ಪಿಎಲ್ ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ 2026’ ನಡೆಯಿತು. 2026ನೇ ಸಾಲಿನ ‘ಕೋಸ್ಟಲ್ ಸ್ಟಾರ್ಟ್ಅಪ್ ಎಕ್ಸಲೆನ್ಸ್ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಯಿತು.

ಗೌರವ ಅತಿಥಿಯಾಗಿದ್ದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ‘ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ ಯುವಕರಿಗೆ ತಮ್ಮ ಯೋಚನೆ ಹಾಗೂ ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡುವ ವೇದಿಕೆ’ ಎಂದರು.

ಉತ್ಸವದಲ್ಲಿ ವಿವಿಧ ಅಧಿವೇಶನಗಳು ನಡೆದವು. ನವೋದ್ಯಮಗಳಿಗೆ ತಮ್ಮ ಆಲೋಚನೆಗಳನ್ನು ಪ್ರದರ್ಶಿಸಲು, ತಜ್ಞರೊಂದಿಗೆ ಸಂವಾದ ನಡೆಸಲು ಮತ್ತು ಅವರ ಸಹಕಾರ ಪಡೆಯಲು ಈ ಉತ್ಸವ ಒಂದು ವೇದಿಕೆ ಸೃಷ್ಟಿಸಿತು.

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಎಸ್. ಆಲೂರ್, ಚಿನ್ಮಯ ವಿಶ್ವ ವಿದ್ಯಾಪೀಠದ ಡೀನ್ ಎಸ್. ಗ್ಲೋರಿ ಸ್ವರೂಪ, ಸಿರಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಮತ್ತು ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ ಮಾರ್ಗದರ್ಶಕ ಎಸ್.ಎಸ್. ನಾಯಕ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (ಯುಸಿಐ) ಕಾರ್ಯದರ್ಶಿ ವಿಜಯೇಂದ್ರ ವಸಂತ್ ಸಮಾರಂಭವನ್ನು ಆಯೋಜಿಸಿದ್ದರು.

ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ 2026: ವಿಶ್ವೇಶ್ವರ ಭಟ್, ಸಿಇಒ ರಾಕಾ ಇನಿಶಿಯೇಟಿವ್ ಪ್ರೈವೇಟ್ ಲಿಮಿಟೆಡ್ ಹಾಗೂ ಅನುಷಾ ಆಚಾರ್ಯ, ಸಂಸ್ಥಾಪಕಿ ಮಾವೇದಾಸ್ ಫುಡ್ಸ್ ಆ್ಯಂಡ್ ಸೀರಿಯಲ್ಸ್ ಪ್ರೈ. ಲಿ.

ಉದಯೋನ್ಮುಖ ಉದ್ಯಮ ಪ್ರಶಸ್ತಿ: ಆಶಿತ್ ಪ್ರಜ್ವಲ್, ಸಂಸ್ಥಾಪಕಿ, ಸಿಂಗ್ಯುಲಾರಿಟಿ ಆಟೋಮೊಬೈಲ್ ಪ್ರೈ. ಲಿ., ಸಂಗೀತ ನಾಯಕ್, ಸಂಸ್ಥಾಪಕಿ ಡಬ್ಲ್ಯುಡಬ್ಲ್ಯುಆರ್ ಇನ್ನೋವೇಶನ್ಸ್ ಪ್ರೈ. ಲಿ.

ಇನ್ನೋವೇಶನ್ ಎಕ್ಸಲೆನ್ಸ್ ಪ್ರಶಸ್ತಿ: ಆಡ್ರಿಯನ್ ಮೆಲ್ರಾಯ್ ಕಾರ್ನೆಲಿಯೊ, ಸಿಇಒ, ಟಿಎಡಿ ಏರ್ಕಾನ್ ಪ್ರೈ. ಲಿ.

ಪೀಪಲ್ಸ್ ಚಾಯ್ಸ್ ಪ್ರಶಸ್ತಿ: ಸಾತ್ವಿಕ್ ಕೃಷ್ಣ, ಸಿಇಒ, ಸಮೃದ್ಧ್ ಆರ್ಗಾನಿಕ್ಸ್.

ಕರಾವಳಿ ಕರ್ನಾಟಕ ಮಹಿಳಾ ಸಬಲೀಕರಣ ಪ್ರಶಸ್ತಿ: ಪವರ್- ಮಹಿಳಾ ಉದ್ಯಮಿಗಳಿಗೆ ವೇದಿಕೆ

ಸ್ಪಾರ್ಕ್ 2026 - ವಿದ್ಯಾರ್ಥಿ: ಐಡಿಯಾ ಸ್ಪರ್ಧೆ– ವರ್ಷದ ಯುವ ಉದ್ಯಮಿ: ಮೆಲೂನ್ ಆಲ್ಬರ್ಟ್ ಪಿಂಟೊ ಹಾಗೂ ಸಾಯಿ ವರ್ಧನ್ ಜಿ., ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು.

ಇನ್ನೋವೇಶನ್ ಟ್ರೈಲ್ಬ್ಲೇಜರ್ ಪ್ರಶಸ್ತಿ: ಹರಿ ಹಾರ್ದಿಕ್ ಮತ್ತು ಸಮೃದ್ಧ್ ಎಂ., ಎನ್ಐಟಿಕೆ ಸುರತ್ಕಲ್.

ಎಕ್ಸಿಕ್ಯೂಷನ್ ಎಕ್ಸಲೆನ್ಸ್ ಪ್ರಶಸ್ತಿ: ರೋಹನ್ ಸ್ಟೀವ್ ಪಿಂಟೊ, ಸಿದ್ಧಾಂತ್ ಹಾಗೂ ಎಸ್. ಅಭಿನಯ, ಎನ್ಯುಎಸ್ಸಿಇಆರ್, ಮಂಗಳೂರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-28-124590932

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.