ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಐಟಿ ಉದ್ಯಮ ಆರಂಭಿಸಲು ಆಸಕ್ತಿ ತೋರುವ ಕಂಪನಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸುವ ಆಶಯದೊಂದಿಗೆ ಸಿಲಿಕಾನ್ ಬೀಚ್ ಪ್ರೋಗ್ರಾಂ ಕಂಪನಿಯು ‘ಬೇಸ್ ಕ್ಯಾಂಪ್’ ಕಾರ್ಯಕ್ರಮ ಪರಿಚಯಿಸಿದೆ.

ಕರಾವಳಿಯಲ್ಲಿ ಕಂಪನಿ ಪ್ರಾರಂಭಿಸುವವರಿಗೆ ಈ ಬೇಸ್ ಕ್ಯಾಂಪ್, ಮೊದಲ ಸಮಾಲೋಚನೆಯಿಂದ ಹಿಡಿದು ನೇಮಕಾತಿ, ಪ್ರತಿಭಾ ಶೋಧ, ಕ್ಷೇತ್ರ ಮಟ್ಟದ ಸಿದ್ಧತೆ, ಕಾನೂನು ಸಲಹೆ, ಮೂಲ ಸೌಕರ್ಯ ಹೀಗೆ ಎಲ್ಲವನ್ನೂ ಒದಗಿಸಿ, ಕೈ ಹಿಡಿದು ಮುನ್ನಡೆಸಲಿದೆ.

ಕೊಟ್ಟಾರಚೌಕಿಯಲ್ಲಿರುವ ‘ವರ್ಕ್ ವರ್ಕ್’ ಟ್ರಯಾಂಗಲ್ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಬೇಸ್ ಕ್ಯಾಂಪ್ ಉದ್ಘಾಟಿಸಿದರು. ‘ಬೇಸ್ ಕ್ಯಾಂಪ್, ಲಾಭದ ಉದ್ದೇಶವಿಲ್ಲದೆ ನಡೆಯುವ ಕಾರ್ಯಕ್ರಮವಾಗಿದೆ. ಮಂಗಳೂರಿಗೆ ಬರುವ ಕಂಪನಿಗಳಿಗೆ ಬೇಸ್ ಕ್ಯಾಂಪ್ ತಂಡದ ಸದಸ್ಯರು ಮಾರ್ಗದರ್ಶನ ನೀಡಲಿದ್ದಾರೆ. ರಾಜಕೀಯ, ಯಾವುದೇ ಸಿದ್ಧಾಂತದ ಹೊರತಾಗಿ ಮಂಗಳೂರನ್ನು ಗಮನದಲ್ಲಿಟ್ಟುಕೊಂಡು, ಇಲ್ಲಿನ ಐಟಿ ಕ್ಷೇತ್ರದ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದರು.

ಸಿಲಿಕಾನ್ ಬೀಚ್ ಪ್ರೋಗ್ರಾಂ ಸಂಯೋಜಕ ರೋಹಿತ್ ಭಟ್ ಮಾತನಾಡಿ, ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನೊಳಗೊಂಡು ಕರಾವಳಿಯಲ್ಲಿ 40ಕ್ಕೂ ಹೆಚ್ಚು ಕಂಪನಿಗಳು, 8 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. ಅನೇಕ ಕಂಪನಿಗಳು ಕರಾವಳಿಗೆ ಬರಲು ಒಲವು ತೋರಿವೆ. ಸಿಲಿಕಾನ್ ಬೀಚ್ನ ‘ಹೋಂ ಕಮಿಂಗ್’ನ ಮುಂದುವರಿದ ಭಾಗ ಇದಾಗಿದೆ ಎಂದರು.

ವಿನ್ಯಾಲ್ ಇಕ್ವಿಟಿ ಕಂಪನಿಯ ನಿರ್ದೇಶಕ ನಾಗರಾಜ್ ಆಚಾರ್ಯ ಮಾತನಾಡಿ, ‘ಅಮೆರಿಕ ಮೂಲದ ಕಂಪನಿಯು ಪುಣೆ ಹಾಗೂ ವಿವಿಧೆಡೆಗಳಲ್ಲಿ ಶಾಖೆಗಳನ್ನು ಹೊಂದಿದೆ. ದೊಡ್ಡ ನಗರಗಳಿಗೆ ಹೊರತಾದ ಸ್ಥಳಗಳ ಹುಡುಕಾಟದಲ್ಲಿದ್ದಾಗ ಮಂಗಳೂರು ನಮ್ಮ ಆಯ್ಕೆಯಾಗಿತ್ತು. ಬೇಸ್ ಕ್ಯಾಂಪ್ ಎಲ್ಲ ರೀತಿಯ ಪ್ರೋತ್ಸಾಹ ಒದಗಿಸಿದ್ದು ನಮಗೆ ಬಲತುಂಬಿತು’ ಎಂದು ಅನುಭವ ಹಂಚಿಕೊಂಡರು. ಎಂಥ್ರುಪಿ ಕಂಪನಿಯ ನಿರ್ದೇಶಕ ವಿಶಾಲ್ ಕಾಂಚನ್ ಅವರೂ ತಮಗೆ ದೊರೆತ ಸಹಕಾರ ಸ್ಮರಿಸಿದರು.

ಆರ್.ಎಸ್. ಶಾನಭಾಗ್, ಮುಕೇಶ್ ಎಸ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-29-759860426

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.