ಮಂಗಳೂರು: ನಿಟ್ಟೆ-ಎಂಆರ್ಪಿಎಲ್ ಕರಾವಳಿ ನವೋದ್ಯಮ ಉತ್ಸವ 2026 ಅನ್ನು ನೆಕ್ಸಸ್ ಫಿಜಾ ಮಾಲ್ನಲ್ಲಿ ಶನಿವಾರ ಆರಂಭವಾಯಿತು. ಕರಾವಳಿ ಕರ್ನಾಟಕದ ನಾವೀನ್ಯತೆ, ಉದ್ಯಮಶೀಲತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ರೂಪಿಸುವ ಈ ಕ್ರಿಯಾತ್ಮಕ ವೇದಿಕೆಯು ಉದ್ಯಮಿಗಳು, ವಿದ್ಯಾರ್ಥಿಗಳು, ಉದ್ಯಮ ನೇತಾರರು ಮತ್ತು ನೀತಿ ನಿರೂಪಕರನ್ನು ಒಂದೇ ಸೂರಿನಡಿ ತಂದಿದೆ.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಪ್ರೊ.ಬಿ.ಸತೀಶ್ ಕುಮಾರ್ ಭಂಡಾರಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಉಪಾಧ್ಯಕ್ಷ ಚೇತನ್ ದೀಕ್ಷಿತ್, ಇನ್ವೇರಿಯಾ ಟೆಕ್ನಾಲಜಿ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ನಿತಿನ್ ಪಂಚಮಲ್, ನೆಕ್ಸಸ್ನಿಂದ ಫಿಜಾದ ಹಿರಿಯ ಕೇಂದ್ರ ನಿರ್ದೇಶಕ ಅರವಿಂದ್ ಶ್ರೀವಾಸ್ತವ್ ಮತ್ತು ಲೆಕ್ಕಪರಿಶೋಧನ ಎಸ್.ಎಸ್.ನಾಯಕ್, ಮತ್ತು ಎಐಸಿ-ನಿಟ್ಟೆ ಇನ್ಕ್ಯುಬೇಷನ್ ಸೆಂಟರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಪಿ. ಆಚಾರ್ಯ ಭಾಗವಹಿಸಿದ್ದರು.

‘ಮೆಟ್ರೋಗಳನ್ನು ಮೀರಿ ನಾವೀನ್ಯತೆ, ನವೋದ್ಯಮಗಳ ಹಣಕಾಸು, ಸ್ಕೇಲಿಂಗ್ ಮತ್ತು ಸುಸ್ಥಿರತೆಯ ಕುರಿತ ಗುಂಪು ಸಂವಾದ, ಕರಾವಳಿ ಸ್ಟಾರ್ಟ್ಅಪ್ ಎಕ್ಸ್ಪೋ ಮತ್ತು ಹೂಡಿಕೆದಾರರ ಶೃಂಗಸಭೆಯನ್ನು ಉತ್ಸವದಲ್ಲಿ ಆಯೋಜಿಸಲಾಗಿದೆ. ಅತ್ಯುತ್ತಮ ನಾವೀನ್ಯತೆಗಳನ್ನು ಆಧರಿಸಿ ಕರಾವಳಿ ಶ್ರೇಷ್ಠ ನವೋದ್ಯಮ ಪ್ರಶಸ್ತಿ ಪ್ರದಾನ ಭಾನುವಾರ ನಡೆಯಲಿದೆ.

ಅಟಲ್ ಇನ್ಕುಬೇಷನ ಸೆಂಟರ್, ಕೆ–ಟೆಕ್ ಇನ್ನೋವೇಶನ್ ಹಬ್ ಮತ್ತು ಅಕ್ವಾ ಮೆರೈನ್ ಆವಿಷ್ಕಾರಕ್ಕೆ ಎನ್ಐಟಿಕೆ– ಕರ್ನಾಕ ಸರ್ಕಾರದ ಉತ್ಕೃಷ್ಟತಾ ಕೇಂದ್ರಗಳು ಈ ಉತ್ಸವ ಆಯೋಜಿಸಿವೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮತ್ತು ವಿಸ್ತರಣಾ ಪಾಲುದಾರ ವರ್ಟೆಕ್ಸ್ ವರ್ಕ್ಸ್ಪೇಸ್ನ ಕಾರ್ಯತಂತ್ರದ ಬೆಂಬಲ ಒದಗಿಸಿವೆ. ಒಎನ್ಜಿಸಿ ಎಂಆರ್ಪಿಎಲ್, ಕೆನರಾ ಬ್ಯಾಂಕ್, ಟ್ಯಾಗ್ಸ್ಕಿಲ್ಸ್ ಎಡ್ಟೆಕ್ ಮತ್ತು ಎಸ್ಐಡಿಬಿಐ ಕ್ಕೆ ಸಹಭಾಗಿತ್ವ ನೀಡಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-29-712222908

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.