ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಗುಣಮಟ್ಟ ಸುಧಾರಿಸುವ ಫಿಲ್ಟರ್‌: ನವೋದ್ಯಮ ವಾಟರ್ ಸೈನ್ಸ್‌ ಸಾಧನೆ

Last Updated 28 ಅಕ್ಟೋಬರ್ 2020, 4:58 IST
ಅಕ್ಷರ ಗಾತ್ರ

ಬೆಂಗಳೂರು: ತಲೆಗೂದಲು ಉದುರುವಿಕೆ, ಶುಷ್ಕ ಚರ್ಮ ಮತ್ತು ಚರ್ಮದ ಇತರ ಸಮಸ್ಯೆಗಳಿಗೆ ಕಾರಣವಾಗುವ ನೀರಿನ ಗಡಸುತನ ತಗ್ಗಿಸಿ ನೀರಿನ ಗುಣಮಟ್ಟ ಸುಧಾರಿಸಿ, ಮಿತ ಬಳಕೆಗೆ ನೆರವಾಗುವ ಫಿಲ್ಟರ್‌ಗಳನ್ನು ತಯಾರಿಸುತ್ತಿರುವ ಬೆಂಗಳೂರಿನ ನವೋದ್ಯಮ ವಾಟರ್‌ ಸೈನ್ಸ್‌, ನೀರಿನ ಸದ್ಬಳಕೆಗೆ ನೆರವಾಗುತ್ತಿದೆ.

ಫಿಲ್ಟರ್‌ಗಳ ನೆರವಿನಿಂದ ನೀರಿನ ಗುಣಮಟ್ಟ ಸುಧಾರಿಸಿ ಬಳಕೆದಾರರಿಗೆ ನೆರವಾಗುತ್ತಿರುವ ಕಂಪನಿಯು ಸದ್ಯಕ್ಕೆ, ವೈಯಕ್ತಿಕ ಬಳಕೆದಾರರು ಮತ್ತು ಗೃಹ ಬಳಕೆ ಉತ್ಪನ್ನಗಳ ತಯಾರಿಕೆಗೆ ತನ್ನ ಗಮನ ಕೇಂದ್ರೀಕರಿಸಿದೆ. ಇದೊಂದು ಗ್ರಾಹಕ ಕೇಂದ್ರೀತ ಬ್ರ್ಯಾಂಡ್‌ ಆಗಿದ್ದು, ಗೃಹ ಬಳಕೆಯ ನೀರಿನ ಗುಣಮಟ್ಟ ಸುಧಾರಿಸಲು ನೆರವಾಗುವ ವಿವಿಧ ಬಗೆಯ ಫಿಲ್ಟರ್‌ಗಳನ್ನು ತಯಾರಿಸುತ್ತಿದೆ.

‘ಮನೆಗೆ ನೀರು ಪೂರೈಸುವ ಕೊಳವೆ ಸಂಪರ್ಕದ ಹಂತದಲ್ಲಿ, ವಾಷಿಂಗ್‌ ಮಷೀನ್‌, ಡಿಷ್‌ ವಾಟರ್‌, ಸ್ನಾನದ ಕೋಣೆಯಲ್ಲಿನ ಶಾವರ್‌ ಮತ್ತು ನಲ್ಲಿಗೆ ಜೋಡಿಸುವ ಹಾಗೂ ಅಡುಗೆ ಮನೆಯ ಬಳಕೆಗೂ ಕಂಪನಿಯು ಪ್ರತ್ಯೇಕ ಫಿಲ್ಟರ್‌ಗಳನ್ನು ತಯಾರಿಸುತ್ತಿದೆ. ಈ ಜಲ ಶೋಧಕಗಳು ಕ್ಲೋರಿನ್‌ ಶುದ್ಧೀಕರಿಸಿ ನೀರಿನ ಗಡಸುತನ ತಗ್ಗಿಸುತ್ತವೆ. ಶುದ್ಧ, ಆರೋಗ್ಯಕರ ನೀರನ್ನು ಪಡೆಯಲು ನೆರವಾಗುತ್ತವೆ. ಇದರಿಂದ ತಲೆಗೂದಲು ಉದುರುವಿಕೆ ನಿಲ್ಲಲಿದೆ. ಚರ್ಮದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ನೀರಿನ ಬಳಕೆಗೆ ಅಳವಡಿಸುವ ಉಪಕರಣಗಳೂ ಬಾಳಿಕೆ ಬರುತ್ತವೆ‘ ಎಂದು ಕಂಪನಿಯ ಸಹ ಸ್ಥಾಪಕರೂ ಆಗಿರುವ ಸಿಇಒ ಸುದೀಪ್‌ ನಾಡುಕ್ಕಂಡಿ ಅವರು ಹೇಳುತ್ತಾರೆ.

‘ಈ ನವೋದ್ಯಮವು ಫಿಲ್ಟರ್‌ಗಳನ್ನು ಸ್ಥಳೀಯವಾಗಿಯೇ ತಯಾರಿಸುತ್ತಿದೆ. ಕುಡಿಯುವುದಕ್ಕೆ ಹೊರತಾದ ಗೃಹ ಬಳಕೆ ನೀರಿನ ಶುದ್ಧೀಕರಣ ಉತ್ಪನ್ನ ತಯಾರಿಕೆ ಕ್ಷೇತ್ರದಲ್ಲಿ ಈ ನವೋದ್ಯಮವು ಮುಂಚೂಣಿಯಲ್ಲಿ ಇದೆ. ಫಿಲ್ಟರ್‌ಗಳ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ಆಹಾರ ದರ್ಜೆಯದಾಗಿವೆ. ವಾಷಿಂಗ್‌ ಮಷಿನ್, ಡಿಷ್‌ ವಾಟರ್‌ ಫಿಲ್ಟರ್‌ಗಳನ್ನೂ ತಯಾರಿಸುತ್ತಿದೆ. ಅಡುಗೆ ಮನೆಯ ನಲ್ಲಿಗೆ ಬಳಸುವ ಪ್ರೀಮಿಯಂ ಫಿಲ್ಟರ್‌ ಉತ್ಪನ್ನಗಳನ್ನೂ ತಯಾರಿಸುತ್ತಿದೆ.

‘ಮಹಾ ನಗರಗಳಲ್ಲಿ ಅಸಂಖ್ಯ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ಕಾರಣಕ್ಕೆ ಜನರು ಪದೇ ಪದೇ ಕೈಗಳನ್ನು ಸ್ವಚ್ಛಗೊಳಿಸಲು ನೀರನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ತಲೆಗೆ ಪ್ರತಿ ದಿನ ಶಾಂಪು ಬಳಸುವವರು ಕೊಳವೆ ಬಾವಿಯ ಗಡಸು ನೀರಿನ ಕಾರಣಕ್ಕೆ ಹೆಚ್ಚು ನೀರು ಬಳಸುತ್ತಾರೆ. ವಾಟರ್‌ ಸೈನ್ಸ್‌ನ ಫಿಲ್ಟರ್‌ಗಳನ್ನು ಎಲ್ಲೆಡೆ ವ್ಯಾಪಕವಾಗಿ ಬಳಸುವಂತಾದರೆ ನೀರಿನ ಅತಿಯಾದ ಬಳಕೆಗೆ ಸಹಜವಾಗಿಯೇ ಕಡಿವಾಣ ಬೀಳಲಿದೆ. ಸ್ನಾನದ ಕೋಣೆಯ ಫಿಲ್ಟರ್‌ಗಳ ಬೆಲೆ ಮಟ್ಟವು ₹ 1,500 ರಿಂದ ₹ 4,000ವರೆಗೆ ಇದೆ. ಅಡುಗೆ ಮನೆಯ ಫಿಲ್ಟರ್‌ಗಳ ಬೆಲೆ ₹ 500 ರಿಂದ ಆರಂಭಗೊಳ್ಳಲಿದೆ.

‘2025ರ ವೇಳೆಗೆ ಗೃಹಬಳಕೆಯ ಫಿಲ್ಟರ್‌ಗಳ ದೇಶಿ ಮಾರುಕಟ್ಟೆಯು ಗಮನಾರ್ಹ ಬೆಳವಣಿಗೆ ಕಾಣಲಿದೆ. ನೀರಿನ ಗುಣಮಟ್ಟ ಸುಧಾರಿಸುವ ಫಿಲ್ಟರ್‌ ಬಳಕೆಯ ಹಲವಾರು ಪ್ರಯೋಜನಗಳನ್ನು ಪಡೆಯುವುದರ ಬಗ್ಗೆ ಗ್ರಾಹಕರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡುವ ಅಗತ್ಯ ಇದೆ‘ಎಂದೂ ಸುದೀಪ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT