ವಿದ್ಯುತ್ ವಲಯದ ‘ಜಿಇ ವರ್ನೋವಾ ಟಿ ಆ್ಯಂಡ್ ಡಿ ಇಂಡಿಯಾ’ ಕಂಪನಿಯ ಷೇರಿನ ಬೆಲೆ ₹5,200ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು ₹14,800 ಕೋಟಿ ಮೌಲ್ಯದ ಕಾರ್ಯಾದೇಶ ಪಡೆದುಕೊಂಡಿದೆ. ಇದು 2024–25ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 37ರಷ್ಟು ಅಧಿಕ. ಪರಿವರ್ತಕಗಳು ಸೇರಿದಂತೆ ಕಂಪನಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಕಾರ್ಯಾದೇಶ ಹೆಚ್ಚಳವಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.

ಕಂಪನಿಯ ದೇಶಿ ವರಮಾನ ಶೇ 34ರಷ್ಟು ಏರಿಕೆಯಾಗಿದ್ದು, ₹4,170 ಕೋಟಿಯಷ್ಟಾಗಿದೆ. ಎಚ್ವಿಡಿಸಿ ಪರಿವರ್ತಕಗಳಿಗೆ ಹೆಚ್ಚಿದ ಬೇಡಿಕೆಯಿಂದ ₹13,600 ಕೋಟಿ ಮೌಲ್ಯದ ಕಾರ್ಯಾದೇಶ ಪಡೆದುಕೊಂಡಿದೆ. 2024–25ಕ್ಕೆ ಹೋಲಿಸಿದರೆ ಶೇ 81ರಷ್ಟು ಜಿಗಿತ ಕಂಡಿದೆ.

2026–27 ಮತ್ತು 2027–28ರ ಆರ್ಥಿಕ ವರ್ಷದಲ್ಲಿ ಕಂಪನಿಯ ಗಳಿಕೆಯು ಅಂದಾಜು ಕ್ರಮವಾಗಿ ಶೇ 7 ಮತ್ತು ಶೇ 8ರಷ್ಟು ಏರಿಕೆಯಾಗಲಿದೆ. 2025–26ರಿಂದ 2027–28ರವರೆಗೆ ಕಂಪನಿಯ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್) ಶೇ 29ರಷ್ಟು ಹೆಚ್ಚಳವಾಗಲಿದೆ. ಇದೇ ಅವಧಿಯಲ್ಲಿ ತೆರಿಗೆ, ಬಡ್ಡಿ, ಸಾಲ ತೀರುವಳಿ ಪೂರ್ವದ ವರಮಾನ (ಇಬಿಐಟಿಡಿಎ) ಶೇ 31ರಷ್ಟು ಮತ್ತು ತೆರಿಗೆ ನಂತರದ ಲಾಭ ಶೇ 31ರಷ್ಟಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಷೇರಿನ ಬೆಲೆ ₹4,695 ಇದೆ.

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-51-1621994272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.